Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಂಸಿಸಿ ಬ್ಯಾಂಕಿಗೆ ರೂ.9.51 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್
    News

    ಎಂಸಿಸಿ ಬ್ಯಾಂಕಿಗೆ ರೂ.9.51 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್

    adminBy adminSeptember 22, 2025

    ವ್ಯವಹಾರ ವಹಿವಾಟು ₹1300 ಕೋಟಿ ದಾಟಿ ಮುನ್ನಡೆ: ಅಧ್ಯಕ್ಷ ಅನಿಲ್‌ ಲೋಬೊ ಘೋಷಣೆ

    ಮಂಗಳೂರು: ಎಂ.ಸಿ.ಸಿ. ಬ್ಯಾಂಕ್ 2024–25ನೇ ಹಣಕಾಸು ವರ್ಷದಲ್ಲಿ ಎಲ್ಲಾ ಹಣಕಾಸು ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಷೇರುದಾರರಿಗೆ 10% ಲಾಭಾಂಶ ಘೋಷಿಸಿದೆ. 2024–25ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ₹9.51 ಕೋಟಿಗಳ ಅಭೂತಪೂರ್ವ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳಿದರು.
    ಮಂಗಳೂರಿನ ಕೊಡಿಯಾಲ್‌ಬೈಲ್‌ನ ಸೇಂಟ್ ಅಲೋಶಿಯಸ್ ಪಿ.ಯು. ಕಾಲೇಜಿನ ಲೊಯೊಲಾ ಹಾಲ್‌ನಲ್ಲಿ ಭಾನುವಾರ ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    https://chat.whatsapp.com/JVAtKKe2M19AFO3W5629ZS?mode=ems_copy_t
    ಬ್ಯಾಂಕಿನ ದಾಖಲೆಯ ಕಾರ್ಯಕ್ಷಮತೆಯನ್ನು ಗಮನಕ್ಕೆ ತಂದ ಅವರು, ₹9.51 ಕೋಟಿ ನಿವ್ವಳ ಲಾಭ, ₹705.40 ಕೋಟಿ ಠೇವಣಿಗಳು (10% ಹೆಚ್ಚಳ), ₹535.49 ಕೋಟಿ ಮುಂಗಡಗಳು (25.21% ಬೆಳವಣಿಗೆ), ₹830.30 ಕೋಟಿ ದುಡಿಯುವ ಬಂಡವಾಳ (10.03% ಹೆಚ್ಚಳ), ₹32.43 ಕೋಟಿ ಷೇರು ಬಂಡವಾಳ (14.07% ಬೆಳವಣಿಗೆ), ಎನ್‌ಪಿಎ 1.40%, ಆರ್‌ಒಎ 1.15%, ಮಾರ್ಚ್ 31, 2025ರಂತೆ ಸಿಆರ್‌ಎಆರ್ 18.92% ಇದ್ದು ಇದು ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಕನಿಷ್ಠ ಮಿತಿ 12ಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ವ್ಯವಹಾರ ವಹಿವಾಟು ₹1300 ಕೋಟಿಯನ್ನು ದಾಟಿದೆ ಎಂದು ಹೇಳಿದರು.


    ಕಳೆದ ಏಳು ವರ್ಷಗಳಲ್ಲಿ ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿಯಡಿಯಲ್ಲಿನ ತ್ವರಿತ ಪ್ರಗತಿ ಮತ್ತು ಬೆಳವಣಿಗೆಯನ್ನು ಬೊಟ್ಟು ಮಾಡಿದ ಅನಿಲ್‌ ಲೋಬೊ ಅವರು, ಬ್ಯಾಂಕಿನೊಂದಿಗೆ ದೃಢವಾಗಿ ನಿಂತು ಆಡಳಿತ ಮಂಡಳಿಯ ಕಾರ್ಯಯೋಜನೆಗಳನ್ನು ಬೆಂಬಲಿಸಿದ ಎಲ್ಲಾ ಸದಸ್ಯರು, ಗ್ರಾಹಕರು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಪೂರ್ವಜರ ದೂರದೃಷ್ಟಿಯನ್ನು ನೆನಪಿಸಿಕೊಳ್ಳುತ್ತಾ, ಅವರ ಮಹಾನ್ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಮತ್ತು ಬಲಿಷ್ಠವಾಗಿರುವ ಬ್ಯಾಂಕ್ ಅನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ವವನ್ನು ಹೇಳಿದರು. ಬ್ಯಾಂಕಿಗೆ ನಿಷ್ಠರಾಗಿರಲು ಮತ್ತು ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿಯ ವಿರುದ್ಧ ವದಂತಿಗಳನ್ನು ಹರಡುವುದನ್ನು ನಿಲ್ಲಿಸಲು ಅವರು ಕೇಳಿಕೊಂಡರು. ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಸಹಾಯವಾಗುವಂತೆ ನೇರವಾಗಿ ಸಲಹೆಗಳನ್ನು ಬ್ಯಾಂಕಿನೊಂದಿಗೆ ಹಂಚಿಕೊಳ್ಳಲು ಸದಸ್ಯರಲ್ಲಿ ಕೇಳಿಕೊಂಡರು.


    ಮಹಾಸಬೆಯನ್ನು ಸಹಕಾರ ರತ್ನಅನಿಲ್ ಲೋಬೊ (ಬ್ಯಾಂಕಿನ ಅಧ್ಯಕ್ಷರು), ಜೆರಾಲ್ಡ್ ಜೂಡ್ ಡಿಸಿಲ್ವ(ಉಪಾಧ್ಯಕ್ಷರು), ಸಿ.ಜಿ.ಪಿಂಟೊ (ವೃತ್ತಿಪರ ನಿರ್ದೇಶಕರು) ಮತ್ತು ವಿಶೇಷ ಆಹ್ವಾನಿತರಾದ ಪ್ರವೀಣ್ ಸಂದೀಪ್ ಲೋಬೊ (ವಕೀಲರು ಮತ್ತು ನೋಟರಿ), ಮೆಲ್ವಿನ್ ಅರಾನ್ಹಾ (ಉಪಾಧ್ಯಕ್ಷರು, ಪ್ಯಾರಿಷ್ ಕೌನ್ಸಿಲ್, ಶಿರ್ವ ಚರ್ಚ್) ಅನಿತಾ ಫ್ರಾಂಕ್ (ಕಾರ್ಯದರ್ಶಿ, ಮಹಿಳಾ ಆಯೋಗ, ಮಂಗಳೂರು ಡಯಾಸಿಸ್), ಮೇಬಲ್ ಡಿಸೋಜ (ಮಾಜಿ ಅಧ್ಯಕ್ಷೆ ಕ್ಯಾಥೋಲಿಕ್ ಸಭಾ, ಕುಂದಾಪುರ) ಮತ್ತು ಜೆ.ವಿ.ಡಿಮೆಲ್ಲೊ (ಎಂಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕರು) ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ಯಾಂಕಿನ ಸ್ಥಾಪಕ ಪಿಎಫ್‌ಎಕ್ಸ್ ಸಲ್ಡಾನ್ಹಾ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು. ಕಳೆದ ವರ್ಷ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ಅವರು 106ನೇ ವಾರ್ಷಿಕ ಮಹಾಸಭೆಯ ನಡವಳಿಗಳನ್ನು ಓದಿದರು. 2024–25ರ ಲೆಕ್ಕಪರಿಶೋಧಿತ ಹಣಕಾಸು ತ:ಖ್ತೆ, ಲೆಕ್ಕಪರಿಶೋಧನಾ ವರದಿ ಮತ್ತು ಅನುಸರಣೆ, 2025-26ನೇ ವರ್ಷದ ಕಾರ್ಯ ಚಟುವಟಿಕೆಗಳು ಮತ್ತು 2025–26ರ ಬಜೆಟ್ ಮತ್ತು ಉಪವಿಧಿಗಳಿಗೆ ಪ್ರಸ್ತಾವಿತ ತಿದ್ದುಪಡಿಗಳನ್ನು ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ನೋಟರಿ ಪಬ್ಲಿಕ್ ಆಗಿ ನೇಮಕಗೊಂಡ ಮೂಡುಬಿದಿರೆಯ ಪ್ರವೀಣ್ ಸಂದೀಪ್ ಲೋಬೊ ಅವರನ್ನು ಸನ್ಮಾನಿಸಲಾಯಿತು. 2025ರ ಪ್ರತಿಷ್ಠಿತ ಅಖಿಲ ಭಾರತ ಕ್ಯಾಥೋಲಿಕ್ ಸಮುದಾಯ ಪ್ರಶಸ್ತಿ ಸ್ವೀಕರಿಸಿದ್ದಕ್ಕಾಗಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅವರನ್ನು ನಿರ್ದೇಶಕರ ಮಂಡಳಿ, ಸಿಬ್ಬಂದಿ ಮತ್ತು ಸದಸ್ಯರ ಪರವಾಗಿ ಜನರಲ್ ಮ್ಯಾನೇಜರ್ ಸುನೀಲ್ ಮಿನೇಜಸ್‌ ಅವರು ಸನ್ಮಾನಿಸಿದರು.


    ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಜೋಸೆಫ್ ಎಮ್., ಅನಿಲ್ ಪತ್ರಾವೊ, ಡಾ|ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ, ಜೆ.ಪಿ.ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ|ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ್ಹಾ, ಮಹಾಪ್ರಬಂಧಕ ಸುನೀಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್.ಮಿನೇಜಸ್ ಉಪಸ್ಥಿತರಿದ್ದರು. ಸುನಿಲ್ ಮಿನೇಜಸ್ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

    ಸಂತೆಕಟ್ಟೆಯಲ್ಲಿ ಅ.5ರಂದು 21ನೇ ಶಾಖೆ ಉದ್ಘಾಟನೆ
    ಉಡುಪಿ ಜಿಲ್ಲೆಯ ಸಂತೆಕಟ್ಟೆಯಲ್ಲಿ ಅಕ್ಟೋಬರ್‌ 5ರಂದು ಎಂಸಿಸಿ ಬ್ಯಾಂಕಿನ 21ನೇ ಶಾಖೆ ಉದ್ಘಾಟನೆಯಾಗಲಿದೆ. ಈ ಬಗ್ಗೆ ಮಾಹಿತಿ ನೀಡಿದ ಅನಿಲ್‌ ಲೋಬೊ ಅವರು, ಎಲ್ಲಾ ಸದಸ್ಯರು ಈ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನಿಸಿದರು. ಮುಂದಿನ ವಾರ್ಷಿಕ ಸಾಮಾನ್ಯ ಸಭೆಯ ಮೊದಲು 25 ಶಾಖೆಗಳು ಮತ್ತು 20 ಎಟಿಎಂಗಳನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಹಂಚಿಕೊಂಡು ಇದಕ್ಕೆ ಬೆಂಬಲ ಕೋರಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Anil Lobo MCC BANK Saint Alosyous College Loyola Hall Santhekatte
    Previous Articleಕಿರಣ ಸ್ವ-ಸಹಾಯ ಸೌಹಾರ್ದ ಸಹಕಾರಿಗೆ ರೂ.25.59 ಲಕ್ಷ ಲಾಭ
    Next Article GST 2.0 – ಜನಸಾಮಾನ್ಯರ ಹಿತದೃಷ್ಟಿಯಿಂದ ತೆರಿಗೆ ಸುಧಾರಣೆ: ಡಾ. ಎಸ್‌ ಆರ್‌ ಹರೀಶ್‌ ಆಚಾರ್ಯ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.