ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಂಪೂರ್ಣ ಡಿಜಿಟಲೀಕರಣ: ಮಹಾಸಭೆಯಲ್ಲಿ ಹಲವು ಹೊಸ ಯೋಜನೆಗಳ ಉದ್ಘಾಟನೆ
ಹಿರಿಯ ಸದಸ್ಯರಿಗೆ ಸನ್ಮಾನ; ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ವಿತರಣೆ
ಪುತ್ತೂರು: ಶತಮಾನದ ಇತಿಹಾಸ ಹೊಂದಿರುವ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಗ್ರಾಹಕರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಹಲವು ಹೊಸತನಗಳೊಂದಿಗೆ ಸಂಪೂರ್ಣ ಡಿಜಿಟಲೀಕರಣವಾಗುತ್ತಿದ್ದು, ಇದರ ಪ್ರಮುಖ ನಾಲ್ಕು ಯೋಜನೆಗಳನ್ನು ಭಾನುವಾರ ನಡೆದ 116ನೇ ಮಹಾಸಭೆಯಲ್ಲಿ ಉದ್ಘಾಟಿಸಲಾಯಿತು.
ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷರಾದ ಕಿಶೋರ್ ಕೊಳತ್ತಾಯ ಎನ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿದೆ. ವ್ಯವಹಾರದಲ್ಲಿ ಗಣನೀಯ ಹೆಚ್ಚಳ ಸಾಧಿಸಿದ್ದು, ಒಟ್ಟು ಠೇವಣಿ ರೂ. 74.87 ಕೋಟಿ, ಒಟ್ಟು ಸಾಲ ರೂ. 51.39 ಕೋಟಿಗಳಾಗಿದ್ದು, ಒಟ್ಟು ವ್ಯವಹಾರ ರೂ. 126.26 ಕೋಟಿ ದಾಟಿದೆ. ಈ ವರ್ಷದ ನಿವ್ವಳ ಲಾಭ ರೂ. 1.04 ಕೋಟಿ ಆಗಿದೆ. ಸದಸ್ಯರಿಗೆ ಶೇ.11 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದರು. ಇದೇ ಸಂದರ್ಭ ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಉದ್ಘಾಟಿಸಲಾಗುವುದು ಎಂದರು.
https://chat.whatsapp.com/EbVKVnWB6rlHT1mWtsgbch
ಹಲವು ಸಾಧನೆಗಳು:
ಆರ್‌ಬಿಐ ನಿಯಮಾನುಸಾರ ಬಲಿಷ್ಠ ಕೋ ಆಪರೇಟಿವ್ ಬ್ಯಾಂಕ್ ಎನಿಸಿಕೊಳ್ಳಲು ಬ್ಯಾಂಕಿನ ನಿವ್ವಳ ಅನುತ್ಪಾದಿತ ಆಸ್ತಿ ಶೇ.1ಕ್ಕಿಂತ ಕಡಿಮೆ ಇದೆ. ಲೆಕ್ಕಪರಿಶೋಧನೆಯಲ್ಲಿ ಎ ಗ್ರೇಡ್ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ ’ಆರ್ಥಿಕವಾಗಿ ಬಲಿಷ್ಠ ಮತ್ತು ಉತ್ತಮ ಆಡಳಿತ ಬ್ಯಾಕ್’ ಎಂಬ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸಿಕೆವೈಸಿ, ಸಿಐಬಿಐಎಲ್, ಸಿಇಆರ್‌ಎಸ್‌ಎಐ ಪೂರ್ಣಗೊಳಿಸಿದೆ. ಐಎಸ್ ಆಡಿಟ್, ಸೈಬರ್ ಸೆಕ್ಯೂರಿಟಿ ಆಡಿಟ್ ಮಾಡಲಾಗಿದೆ. ವಿಟ್ಲದಲ್ಲಿ ಶಾಖೆ ಅರಂಭಿಸಿ ಉತ್ತಮ ವ್ಯವಹಾರ ನಡೆಯುತ್ತಿದೆ. 2025-26ನೇ ಸಾಲಿನಲ್ಲೂ ಇನ್ನೊಂದು ಶಾಖೆ ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ. ಬ್ಯಾಂಕಿಗೆ ಸೋಲಾರ್ ವಿದ್ಯುತ್ ಗ್ರಿಡ್ ಸ್ಥಾಪಿಸಿ ವಿದ್ಯುತ್ ಶಕ್ತಿ ಯೋಜನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಸವಾಲಾಗಿರುವ ಸಾಲಗಳನ್ನು ವಸೂಲು ಮಾಡಲಾಗಿದೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಎರಡು ಅಂಗಡಿ ಕೊಠಡಿಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಬ್ಯಾಂಕಿನ ಭದ್ರತೆಗಾಗಿ ಸೆಕ್ಯೂರಿಟಿ ಅಲಾರಾಂ, ಸಿಸಿಟಿವಿ ಅಳವಡಿಸಲಾಗಿದೆ. ಹಗಲು, ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸೈನ್ ಇನ್ ಸೆಕ್ಯೂರಿಟಿ ಸಹಾಯದಿಂದ 24 ಗಂಟೆಗಳ ಕಾಲ ಕಂಟ್ರೋಲ್ ರೂಮ್ ಮುಖಾಂತರ ಭದ್ರತೆ ಮೇಲೆ ಕಣ್ಗಾವಲು ಇಡುವ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ಚಿನ್ನಾಭರಣ, ಗೃಹ, ಆಸ್ತಿ ಅಡಮಾನ, ವಾಹನ ಸಾಲ, ಆಸ್ತಿ ಭದ್ರತೆಯ ಮೇಲೆ ಓವರ್ ಡ್ರಾಫ್ಟ್ ಸೌಲಭ್ಯ ಸಹಿತ ಹಲವು ಸಾಲ ಯೋಜನೆ ಆರಂಭಿಸಲಾಗಿದೆ. ಯಾವುದೇ ಕಮರ್ಷಿಯಲ್ ಬ್ಯಾಂಕ್‌ಗೆ ಕಡಿಮೆಯಾಗದಂತೆ ಸೇವೆ ನೀಡಬೇಕೆಂದು ದೃಢಸಂಕಲ್ಪದಿಂದ ಹಲವು ಯೋಜನೆ ಜಾರಿ ತಂದಿದ್ದೇವೆ ಎಂದು ಕಿಶೋರ್ ಕೊಳತ್ತಾಯ ಎನ್ ಹೇಳಿದರು.

ಲಾಭಾಂಶ ವಿಂಗಡಣೆ
ಪ್ರಸ್ತುತ ಬ್ಯಾಂಕ್‌ನ ಲಾಭದಿಂದ ಕಾಯ್ದಿಟ್ಟ ನಿಧಿಗೆ ರೂ. 36,50,110, ಸಹಕಾರ ಶಿಕ್ಷಣ ನಿಧಿಗೆ ರೂ. 1,35,576, ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳಿಗೆ ರೂ. 66,432, ಕೆಟ್ಟ ಸಾಲಗಳ ನಿಧಿಗೆ ರೂ. 4,03,837, ಕಟ್ಟಡ ನಿಧಿಗೆ ರೂ.6.50 ಲಕ್ಷ, ಸದಸ್ಯರ ಪರಿಹಾರ ನಿಧಿಗೆ ರೂ. 1 ಲಕ್ಷ, ಸಿಬ್ಬಂದಿ ಪರಿಹಾರ ನಿಧಿಗೆ ರೂ.1 ಲಕ್ಷ, ಸಾರ್ವಜನಿಕ ಕಲ್ಯಾಣ ನಿಧಿಗೆ ರೂ. 2 ಲಕ್ಷ, ಸಾರ್ವಜನೋಪಕಾರ ನಿಧಿಗೆ ರೂ. 3.50 ಲಕ್ಷ, ಸದಸ್ಯರ ಮರಣೋತ್ತರ ನಿಧಿಗೆ ರೂ.3 ಲಕ್ಷ,, ಸಿಬ್ಬಂದಿಗೆ ಬೋನಸ್ ರೂ. 6,64,777, ಜುಬಿಲಿ ನಿಧಿಗೆ ರೂ. 1 ಲಕ್ಷ,, ಸಾಮಾನ್ಯ ಕ್ಷೇಮ ನಿಧಿಗೆ 4,03,837 ಅನ್ನು ಶಿಫಾರಸು ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿ ಸಭೆಗೆ ಮಂಡಿಸಿದರು. ವರ್ಷದ ಆದಿಯಲ್ಲಿ 9164 ಸದಸ್ಯರಿದ್ದು, 620 ಹೊಸ ಸದಸ್ಯರ ಸೇರ್ಪಡೆಯಾಗಿದ್ದು, ವರ್ಷದಲ್ಲಿ 162 ಮಂದಿ ಸದಸ್ಯತನವನ್ನು ತ್ಯಜಿಸಿದ್ದು, ವರ್ಷಾಂತ್ಯದಲ್ಲಿ 9626 ಸದಸ್ಯರಿದ್ದಾರೆ. 1184 ಸಹ ಸದಸ್ಯರಿದ್ದಾರೆ. ಈ ಬಾರಿಯೂ ಬ್ಯಾಂಕ್ ಎ ತರಗತಿ ಪಡೆದಿದೆ ಎಂದು ಬಿ.ಶೇಖರ್ ಶೆಟ್ಟಿ ತಿಳಿಸಿದರು.

ಹಿರಿಯ ಸದಸ್ಯರಿಗೆ ಸನ್ಮಾನ
ಬ್ಯಾಂಕಿನ ಹಿರಿಯ ಸದಸ್ಯರಾದ ರಾಮ್‌ದಾಸ್ ನಾಯಕ್ ಕೆ, ಶಶಿಧರ ಮಡಿವಾಳ, ರಘುವೀರ ಶೆಣೈ ಎಂ, ಜನಾರ್ಧನ ಗೌಡ ಕೆ, ಅಮೀರ್ ಫಾರೂಕ್, ಕುಶಾಲಪ್ಪ ಗೌಡ, ಪುರುಷೋತ್ತಮ ಬಲ್ಯಾಯ, ಶಿವಪ್ಪ ಗೌಡ ಕೆ, ಅಚ್ಯುತ ಎಸ್, ಪೀಟರ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್‌ನ ನಿರ್ದೇಶಕರಾದ ರಾಮಚಂದ್ರ ಕಾಮತ್, ರಾಜು ಶೆಟ್ಟಿ, ಸುಜೀಂದ್ರ ಪ್ರಭು, ಶ್ರೀಧರ್ ಪಟ್ಲ, ಗಣೇಶ್ ಕೌಕ್ರಾಡಿ, ಮಲ್ಲೇಶ್ ಕುಮಾರ್, ಹರೀಶ್ ಬಿಜತ್ರೆ, ಸೀಮಾ ಎಂ.ಎ, ವೀಣಾ ಅವರು ಸನ್ಮಾನ ಪತ್ರ ವಾಚಿಸಿದರು.
ಶತಮಾನೋತ್ಸವ ವಿದ್ಯಾರ್ಥಿವೇತನ:
ಬ್ಯಾಂಕ್‌ನ ಶತಮಾನೋತ್ಸವದ ಅಂಗವಾಗಿ ಬಿ.ಕಾಂ ಪದವಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಅತ್ಯಂತ ಹೆಚ್ಚು ಅಂಕ ಗಳಿಸಿರುವ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾದ ಮಹಾಲಸ ಮಲ್ಯ, ಶರಣ್ಯ ವಿ, ಸಿಂಧೂರ ವಿ.ಎಸ್ ಅವರಿಗೆ ನೀಡಲಾಯಿತು.
ದಿ.ಮೊಳಹಳ್ಳಿ ಶಿವರಾಯರ ಶತಾಬ್ದಿಯ ವಿದ್ಯಾರ್ಥಿವೇತನ:
ಬ್ಯಾಂಕಿನ ಮೂಲ ಸ್ಥಾಪಕರಲ್ಲಿ ಒಬ್ಬರಾದ ದಿ| ಮೊಳಹಳ್ಳಿ ಶಿವರಾಯರ ಶತಾಬ್ದಿಯ ಅಂಗವಾಗಿ ನೀಡಲಾಗುತ್ತಿರುವ ವಿದ್ಯಾರ್ಥಿವೇತನವನ್ನು ಮೊಳಹಳ್ಳಿ ಅವರಿಂದಲೇ ಸ್ಥಾಪಿಸಲ್ಪಟ್ಟ ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವ ಸರಕಾರಿ ಪದವಿಪೂರ್ವ ಕಾಲೇಜಿನ ಅವಂತಿ ಶರ್ಮ ಮತ್ತು ರೋಶನ್ ಎಸ್.ಕೆ ಅವರಿಗೆ ವಿತರಿಸಲಾಯಿತು. 6ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ನೆಲ್ಲಿಕಟ್ಟೆ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವನ್ಯ ವಿ ಎಸ್, ಯೋಗಶ್ರೀ ಕೆ ಮತ್ತು ಬೊಳುವಾರು ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರೇಷ್ಮಾ, ಭಾವನಾ ಪಿ ಅವರಿಗೆ ವಿತರಿಸಲಾಯಿತು. ಪುತ್ತೂರು ಪಟ್ಟಣ ಪ್ರದೇಶದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಚಿನ್ಮಯಿ ಎಲ್, ಪದವಿ ಕಲಾ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ವೈಷ್ಣವಿ ಎನ್ ಶೆಟ್ಟಿ, ಬಿಎಸ್ಸಿಯಲ್ಲಿ ಸಂತ ಪಿಲೋಮಿನಾ ಕಾಲೇಜಿನ ಶ್ರೀದೇವಿ ಎನ್, ಬಿಕಾಂನಲ್ಲಿ ವಿವೇಕಾನಂದ ಕಾಲೇಜಿನ ಅಮೃತಾ, ಬಿಬಿಎಯಲ್ಲಿ ವಿವೇಕಾನಂದ ಕಾಲೇಜಿನ ಕಾಲೇಜಿನ ತನಿಷಾ ಬಿ, ಕಾನೂನು ಪದವಿಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸ್ಪೂರ್ತಿ ಪಿ ಇ, ಮತ್ತು ಮೈತ್ರಿ ಎಂ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ದಿ.ಬಿ.ಗಣಪತಿ ವಿಷ್ಣು ಹೊಳ್ಳ ಸ್ಕಾಲರ್‌ಶಿಪ್:
ದಿ.ಬಿ.ಗಣಪತಿ ವಿಷ್ಣು ಹೊಳ್ಳ ಮತ್ತು ಅವರ ಪತ್ನಿ ಶ್ರೀಮತಿ ಶಾರದಾ ಅವರ ನೆನಪಿನಲ್ಲಿ ನೀಡುವ ಸ್ಕಾಲರ್‌ಶಿಪ್ ಅನ್ನು ಸಂತ ಫಿಲೋಮಿನಾ ಕಾಲೇಜಿನ ಆಯಿಷಾ ಸಲ್ಹಾ ಅವರಿಗೆ ವಿತರಿಸಲಾಯಿತು.

ಅಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆ:
ಗತ ವರ್ಷದಲ್ಲಿ 42 ಮಂದಿ ಬ್ಯಾಂಕ್‌ನ ಸದಸ್ಯರು ನಿಧನರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲೆಂದು ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು. ನಿರ್ದೇಶಕರಾದ ಕಿರಣ್ ಕುಮಾರ್ ರೈ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಸುಜೀಂದ್ರ ಪ್ರಭು, ಮಲ್ಲೇಶ್ ಕುಮಾರ್, ಶ್ರೀಧರ್ ಪಟ್ಲ, ಗಣೇಶ್ ಕೌಕ್ರಾಡಿ, ಹರೀಶ್ ಬಿಜತ್ರೆ, ಸೀಮಾ ಎಂ.ಎ, ವೀಣಾ, ಮೇ| ರಾವ್ ಆಂಡ್ ಎಮ್ಮಾರ್ ಕಂಪೆನಿಯ ಲೆಕ್ಕಪರಿಶೋದಕ ತ್ವೇಜ್, ಚಾರ್ಟಡ್ ಅಕೌಂಟೆಂಟ್ ಕೆ.ಎಸ್. ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತನ್ವಿ ಶೆಣೈ ಪ್ರಾರ್ಥಿಸಿದರು, ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀಧರ್ ಗೌಡ ಕೆ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು. ವಿಟ್ಲ ಶಾಖೆಯ ಪ್ರಬಂಧಕಿ ಜ್ಯೋತಿ ಎನ್.ಎಸ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಬಂಧಕ ಚೇತನ್ ಯು.ಎನ್, ಶಾಖಾ ಪ್ರಬಂಧಕ ಚಿದಂಬರ ಸಹಿತ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಹಿರಿಯರಾದ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎನ್.ಸುಬ್ರಹ್ಮಣ ಕೊಳತ್ತಾಯ ಸಹಿತ ಹಲವಾರು ಸಾವಿರಾರು ಮಂದಿ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು. ನಾಲ್ಕು ಸಾವಿರಕ್ಕೂ ಅಧಿಕ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಆಧುನಿಕತೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಮನೆಯಲ್ಲೇ ಕುಳಿತು ವ್ಯವಹಾರ ಮಾಡುವ ದಿನದಲ್ಲಿ ಬ್ಯಾಂಕ್ ಡಿಜಿಟಲೀಕರಣ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಂಪೂರ್ಣ ಡಿಜಿಟಲೀಕರಣದತ್ತ ಹೆಜ್ಜೆ ಹಾಕುತ್ತಿದೆ.
ಬಿ.ಶೇಖರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಪುತ್ತೂರು
ನಾಲ್ಕು ಪ್ರಮುಖ ಯೋಜನೆಗಳ ಉದ್ಘಾಟನೆ
ಗ್ರಾಹಕರಿಗೆ ಚೆಕ್ ಕಲೆಕ್ಷನ್‌ಗೆ ಸಿಟಿಎಸ್ ಕ್ಲಿಯರಿಂಗ್ ಕ್ಷೇತ್ರಕ್ಕೆ ಬ್ಯಾಂಕ್ ಕಾಲಿಟ್ಟಿದೆ. ಇನ್‌ವರ್ಡ್ ಮತ್ತು ಔಟ್‌ವರ್ಡ್ ಕ್ಲಿಯರಿಂಗ್ ಎರಡರಲ್ಲೂ ಸಿಟಿಎಸ್ ಕ್ಲಿಯರಿಂಗ್ ವ್ಯವಸ್ಥೆ ಪ್ರಾರಂಭಕ್ಕೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಚಾಲನೆ ನೀಡಿದರು. ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಬಹಳ ಹೆಚ್ಚಾಗಿ ಉಪಯೋಗವಾಗುವ ಡೈರೆಕ್ಟ್ ನೆಫ್ಟ್ ಆಂಡ್ ಆರ್‌ಟಿಜಿಎಸ್/ ಐಎಫ್‌ಎಸ್‌ಸಿ ಕೋಡ್ ಅನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಉದ್ಘಾಟಿಸಿದರು. ಮೊಬೈಲ್ ಬ್ಯಾಂಕಿಂಗ್ ಆಪ್ ಅನ್ನು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಉದ್ಘಾಟಿಸಿದರು. ಎಟಿಎಮ್ ಕಾರ್ಡ್ ಅನ್ನು ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಉದ್ಘಾಟಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com








