ಹಾಸನ: ಇಲ್ಲಿನ ಬಳೆಗಾರರ ಬೀವಿ(ದೊಣ್ಣೂರು ಬಾಗಿಲು ಚೌಕ, ಹೊಸಲೈನ್ ರಸ್ತೆ) ಶ್ರೀ ವಿಘ್ನೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ ಹಾಸನ ನಗರದ ಸುಲಗ್ನಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಕೆ.ಟಿ.ಕುಮಾರಪ್ಪ ಅವರು ಮಾತನಾಡಿ, ಸಂಘವು ಒಟ್ಟು 4282 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 34.84 ಲಕ್ಷ ರೂ. ನಿವ್ವಳ ಲಾಭ ಪಡೆದಿದೆ ಎಂದು ಮಾಹಿತಿ ನೀಡಿದರು. ಶ್ರೀ ವಿಘ್ನೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2003ರ ಅಕ್ಟೋಬರ್ 1ರಂದು ಒಟ್ಟು 156 ಜನ ಸದಸ್ಯರಿಂದ ರೂ.1,56,000 ಪಾಲು ಬಂಡವಾಳದೊಂದಿಗೆ ಆರಂಭವಾಗಿ ಇಂದಿಗೆ 22 ವರ್ಷ ಪೂರ್ಣಗೊಳಿಸಿ 25ನೇ ಸಂವತ್ಸರದಲ್ಲಿ ಪಾರದರ್ಶಕ ಆಡಳಿತ ನಡೆಸುತ್ತಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಜಂಟಿ ನಿರ್ದೇಶಕರುಗಳಿಂದ ನೀಡಲ್ಪಡುವ ಎಲ್ಲಾ ರೀತಿಯ ಆದೇಶ, ಸಲಹೆ, ಸೂಚನೆಗಳನ್ನು ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ.

2025ರ ಮಾರ್ಚ್ 31ರ ಅಂತ್ಯಕ್ಕೆ ಒಟ್ಟು 4282 ಸದಸ್ಯರಿಂದ 1.09 ಕೋಟಿ ರೂ. ಪಾಲು ಬಂಡವಾಳ ಹಾಗೂ ರೂ.88.02 ಲಕ್ಷ ಸ್ವಂತ ನಿಧಿಗಳು ಹಾಗೂ 44.42 ಕೋಟಿ ರೂ. ಠೇವಣಿಯನ್ನು ಹೊಂದಿದ್ದು 41.22 ಕೋಟಿ ರೂ. ಸಾಲವನ್ನು ಸದಸ್ಯರಿಗೆ ನೀಡಿದೆ. ನಗರದಲ್ಲಿರುವ ಸೌಹಾರ್ದ ಸಂಸ್ಥೆಗಳ ಸಾಲಿನಲ್ಲಿ ಶ್ರೀ ವಿಘ್ನೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಮುಂಚೂಣಿಯಲ್ಲಿದ್ದು, ಸಂಯುಕ್ತ ಸಹಕಾರಿಯ 2021-2022ನೇ ಸಾಲಿನ ಉತ್ತಮ ಸೌಹಾರ್ದ ಸಹಕಾರಿ ಸಂಘ ಪ್ರಶಸ್ತಿಯನ್ನು ಗಳಿಸಿರುತ್ತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಕುಮಾರ್ ಜೆ.ಬಿ., ನಿರ್ದೇಶಕರಾದ ಕೃಷ್ಣಮೂರ್ತಿ ಜೆ.ವಿ., ಪ್ರಕಾಶ್ ಎನ್.ಎಂ., ಕಾರ್ತಿಕ್ ಕೆ.ಆರ್., ಕೃಷ್ಣಮೂರ್ತಿ ಕೆ.ಆರ್., ಮಂಜುನಾಥ ಜೆ.ಬಿ., ಶಿವಣ್ಣ, ಹರೀಶ್ ಕೆ.ಪಿ., ನವೀನ್ ಕುಮಾರ್ ಕೆ.ಜಿ., ನಾಗೇಶ್, ಮಿಥುನ್ ಕುಮಾರ್, ಸರೋಜ, ಉಮಾರಾಜ್, ಸುಧಾಮಣಿ ಹಾಗೂ ವೃತ್ತಿಪರ ನಿರ್ದೇಶಕರಾದ ಪಾಂಡುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

