ಬಾಗಲಕೋಟೆ: ಇಲ್ಲಿನ ಶ್ರೀ ಕೂಡಲಸಂಗಮೇಶ್ವರ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 50 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಉಪಾಧ್ಯಕ್ಷ ಬಸಪ್ಪ ಟಕ್ಕಳಕಿ ತಿಳಿಸಿದರು.
https://chat.whatsapp.com/EbVKVnWB6rlHT1mWtsgbch
ಬಾಗಲಕೋಟೆಯಲ್ಲಿ ಭಾನುವಾರ ಜರುಗಿದ ಸಂಘದ 20ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 2024 -25ರ ಸಾಲಿನಲ್ಲಿ 2030 ಸದಸ್ಯರನ್ನು ಹೊಂದಿದ್ದು, 18 ಕೋಟಿ ರೂ.ಗಳ ದುಡಿಯುವ ಬಂಡವಾಳವಿದೆ. 11 ಕೋಟಿ ರೂ.ಗೂ ಹೆಚ್ಚು ಹಣ ಸಾಲದ ರೂಪದಲ್ಲಿ ಸದಸ್ಯರಿಗೆ ನೀಡಲಾಗಿದೆ. ಒಂದೂವರೆ ಕೋಟಿ ಶೇರು ಬಂಡವಾಳವನ್ನು ಸಂಘ ಹೊಂದಿದೆ. ಸಂಘ ಪ್ರಾರಂಭವಾಗಿ 20 ವರ್ಷ ಪೂರೈಸಿದೆ. ಸಂಘದ ಅಮೋಘ ಬೆಳವಣಿಗೆ, ಸದಸ್ಯರುಗಳ ಸಹಕಾರ, ಹಗಲಿರುಳು ಶ್ರಮಿಸಿದ ಸಿಬ್ಬಂದಿ ವರ್ಗ, ನಿರ್ದೇಶಕ ಮಂಡಳಿಯ ಅವಿರತ ಪ್ರಯತ್ನದ ಫಲವಾಗಿ ಅತ್ಯಂತ ಕಡಿಮೆ ಅವದಿಯಲ್ಲಿ ಅತಿ ಶೀಘ್ರ ಪ್ರಗತಿಗೆ ಮುನ್ನೋಟ ಬರೆದು ಅದಕ್ಕೆ ಅನುಗುಣವಾಗಿ ಗುರಿ ಮುಟ್ಟಿದ್ದು ಸಂತೋಷವಾಗಿದೆ. 2005ರಲ್ಲಿ ಕೇವಲ ಐದು ಲಕ್ಷಗಳಿಂದ ಪ್ರಾರಂಭವಾಗಿದ್ದ ಸಂಘ ಇಂದು 50 ಲಕ್ಷ ರೂ.ಗಳ ಲಾಭ ಗಳಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಸಂಘದ ವ್ಯವಸ್ಥಾಪಕ ಬಾಳಾಸಾಹೇಬ ರಂಗನ್ನವರ ವಾರ್ಷಿಕ ವರದಿ ಮಂಡಿಸಿದರು. ಸಕಾಲಕ್ಕೆ ಸಾಲಮರುಪಾವತಿ ಮಾಡಿದ ಸಾಲಗಾರರನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯರಾದ ಬಸವರಾಜ ಮರನೂರ, ಸದಾನಂದ ತುರಮಂದಿ, ಚಂದ್ರಶೇಖರ ಗೋಲಪ್ಪನ್ನವರ, ರಾಜು ನಂದಪ್ಪನ್ನವರ, ರಾಘವೇಂದ್ರ ರಾಜಾಪೂರ, ಶಿವಪ್ಪ ಸೂಳಿಕೇರಿ, ಸಂತೋಷ ಕಂಬಿ, ವಸಂತಕುಮಾರ ದಾಸಪ್ಪನ್ನವರ, ಸೋಮಶೇಖರ ಹಿಟ್ಟಿನಮಠ, ಚನ್ನಗೇರಪ್ಪಗೌಡ ಪಾಟೀಲ, ಶಿವಬಸವ ಬಳ್ಳಾರಿ, ಲಕ್ಷ್ಮೀಬಾಯಿ ಬಳ್ಳೂರ, ರೇಣುಕಾ ನ್ಯಾಮಗೌಡ, ಸಿಬ್ಬಂದಿಗಳಾದ ಮಂಜುನಾಥ ಹೊಸಮನಿ ಶ್ರೀಶೈಲ ಕಂಬಿ ಸಂಗಮೇಶ ನಿಂಬಲಗುಂದಿ ಸಿದ್ದು ಪಟ್ಟಣಶೆಟ್ಟಿ, ದ್ಯಾಮಣ್ಣ ಯಲಗನ್ನವರ, ಸಂಘದ ಸಂಸ್ಥಾಪಕ ವ್ಯವಸ್ಥಾಪಕ ಗುರಲಿಂಗಪ್ಪ ಮಂಟೂರ ಬಸವರಾಜ ಅಂಗಡಿ ಭಾಗವಹಿಸಿದ್ದರು. ಎಂ.ಎನ್ ಪುರಾಣಿಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









