ಮಂಗಳೂರು: ಸೈಂಟ್ ಅಲ್ಪೋನ್ಸಾ ಸೌಹಾರ್ದ ಸಹಕಾರಿ ಸಂಘದ ಎರಡನೇ ವಾರ್ಷಿಕ ಮಹಾಸಭೆ ಕಂಕನಾಡಿಯ ಸೈಂಟ್ ಅಲ್ಪೋನ್ಸಾ ಚರ್ಚ್ ಹಾಲ್‌ನಲ್ಲಿ ಭಾನುವಾರ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸೈಂಟ್ ಅಲ್ಪೋನ್ಸಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಮನೋಜ್ ಪಿ.ವಿ, ರೆ.ಫಾದರ್ ಅಗಸ್ಟಿನ್ ಪಿ ಹಾಗೂ ಎಲ್ಲಾ ನಿರ್ದೇಶಕರು ಸೇರಿ ದೀಪ ಬೆಳಗಿಸಿದರು. ಸಹಕಾರಿಯ ನಿರ್ದೇಶಕರಾದ ಜೇಮ್ಸ್ ಮುಂಡಟ್ಟು ವರ್ಕೀ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಟಿ.ಬಂಗೇರ ವಾರ್ಷಿಕ ಸಭೆಯ ಸೂಚನಾ ಪತ್ರ ಮಂಡಿಸಿದರು. ಸಹಕಾರಿಯ ಸಿಬ್ಬಂದಿ ವೇದಾವತಿ ಹಿಂದಿನ ಸಭೆಯ ನಡಾವಳಿಗಳನ್ನು ಮಂಡಿಸಿದರು. ನಿರ್ದೇಶಕರಾದ ಜಾಯ್ ವರ್ಗೀಸ್ ೨೦೨೪-೨೫ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು. ನಿರ್ದೇಶಕ ಜಾರ್ಜ್ ಜೋಸೆಫ್ ಕೆ ೨೦೨೪-೨೫ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು.


ಸಹಕಾರಿಯ ಅಧ್ಯಕ್ಷ ಮನೋಜ್ ಪಿ.ವಿ, ಅಧ್ಯಕ್ಷೀಯ ಭಾಷಣದಲ್ಲಿ ಸಹಕಾರಿಯ ಏಳಿಗೆಯು ಸಹಕಾರಿಯ ಸದಸ್ಯರ ಸಹಕಾರದಿಂದ ಆಗುತ್ತದೆ. ಸದಸ್ಯರ ಸಹಕಾರ ಅತೀ ಮುಖ್ಯವೆಂದು ಹೇಳಿದರು.
ಸಹಕಾರಿಯ ಮಾರ್ಗದರ್ಶಕರಾದ ಫಾದರ್ ಅಗಸ್ಟಿನ್ ಪಿ ಆಶೀರ್ವಚನ ನೀಡಿದರು. ಆನ್ರಿನ್ ಪ್ರಾರ್ಥಿಸಿದರು. ಸಹಕಾರಿಯ ನಿರ್ದೇಶಕರಾದ ವಿನ್ಸಿ ಥೋಮಸ್ ಕಾರ್ಯಕ್ರಮ ನಿರೂಪಿಸಿದರು. ಜಾಲಿ ಟೋನಿ ವಂದಿಸಿದರು.

