Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ 18ನೇ ವಾರ್ಷಿಕ ಸಾಮಾನ್ಯ ಸಭೆ
    News

    ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ 18ನೇ ವಾರ್ಷಿಕ ಸಾಮಾನ್ಯ ಸಭೆ

    adminBy adminSeptember 11, 2025

    ಮಂಗಳೂರು: ಸಹಕಾರ ತತ್ವ ಸಿದ್ಧಾಂತವನ್ನಿಟ್ಟುಕೊಂಡು ಯಶಸ್ಸಿನ ಪಥದತ್ತ ಸಾಗುತ್ತಿರುವ ಅಖಿಲ ಭಾರತ ಬಿಲ್ಲವರ ಸಂಘದ ಅಂಗಸಂಸ್ಥೆ ಬಿಲ್ಲವರ ಮಹಿಳಾ ಸಂಘ ಪ್ರಾಯೋಜಿತ ಹತ್ತು ಮಂದಿ ಮಹಿಳಾ ನಿರ್ದೇಶಕಿಯರನ್ನೊಳಗೊಂಡ ಶ್ರೀ ಗುರು ಸೌಹಾರ್ದ ಸಹಕಾರಿ ಸಂಘದ 18ನೇ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ ಕುದ್ರೋಳಿ ನಾರಾಯಣ ಗುರು ಕಾಲೇಜಿನ ದಾಮೋದರ್ ಆರ್. ಸುವರ್ಣ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುಮಲತಾ ನವೀನಚಂದ್ರ ಸುವರ್ಣ ಅವರ ಉಪಸ್ಥಿತಿಯಲ್ಲಿ ಜರಗಿತು.

    https://chat.whatsapp.com/EbVKVnWB6rlHT1mWtsgbch
    ಸಂಸ್ಥೆಯ ಅಧ್ಯಕ್ಷೆ ಸುಮಲತಾ ನವೀನಚಂದ್ರ ಸುವರ್ಣ ಅವರು ಮಾತನಾಡಿ, ವಿವಿಧ ಸಾಲ ಯೋಜನೆಯ ಪ್ರಯೋಜನಗಳನ್ನು ಪಡೆದು ಸಹಕಾರಿಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿ, ಸದಸ್ಯರು ನೀಡಿದ ಸೂಕ್ತ ಸಲಹೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆಂದು ಹೇಳಿದರು.
    ಉಪಾಧ್ಯಕ್ಷೆ ಸುಖಲಾಕ್ಷಿ ವೈ.ಸುವರ್ಣ 2024-25ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪುಷ್ಟಾನಂದ ಕುಮಾರ್ 2024-25ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋಧಿತ ಅರ್ಥಿಕ ತಖ್ತೆಗಳನ್ನು ಮಂಡಿಸಿದರು. ಗತವರ್ಷದ ಅಂತ್ಯಕ್ಕೆ ಸಹಕಾರಿಯು ಒಟ್ಟು 3363 ಸದಸ್ಯರಿಂದ 43.89 ಲಕ್ಷ ರೂ. ಪಾಲು ಬಂಡವಾಳ ಹಾಗೂ 1218.59 ಲಕ್ಷ ರೂ. ಠೇವಣೆ ಸಂಗ್ರಹಿಸಿದ್ದು, ಒಟ್ಟು 1059.09 ಲಕ್ಷ ಸಾಲ ನೀಡಿ 1327.42 ಲಕ್ಷ ದುಡಿಯುವ ಬಂಡವಾಳ ಹೊಂದಿದೆ. ಸಹಕಾರಿಯ ಒಟ್ಟು ವಹಿವಾಟು 2277.68 ಲಕ್ಷ ಆಗಿರುತ್ತದೆ. ನಿವ್ವಳ ಲಾಭ 21.63 ಲಕ್ಷ ಗಳಿಸಿದೆ. ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಲಾಯಿತು.
    ಸೊಸೈಟಿಯ ನಿರ್ದೇಶಕಿಯರಾದ, ಶಕೀಲಾರಾಜ್, ದಯಾಮಣಿ ವಿ.ಕೋಟ್ಯಾನ್, ರೇವತಿ ಅಶೋಕ್, ಶುಭಾ ಜಯಚಂದ್ರ, ಅಮೃತಾ ಡಿ.ಕೂಳೂರು, ಮೋಹಿನಿ ರಾಮಚಂದ್ರ ಮತ್ತು ಭಾರತಿ ದೇವದಾಸ್ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ವಾಸಂತಿ ಅಮೀನ್ ಪ್ರಾರ್ಥಿಸಿದರು. ನಿರ್ದೇಶಕಿ ಶಕೀಲಾರಾಜ್ ಸ್ವಾಗತಿಸಿದರು. ಮೋಹಿನಿ ರಾಮಚಂದ್ರ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Akhila Bharatha Billavara Sangha Billavara Mahila Sangha Damodara R.Suvarna Shree Guru Souharda Sahakari Sangha Bejai Sumalatha Naveenchandra Suvarna
    Previous Articleಶ್ರೀ ರಾಮಕೃಷ್ಣ ಸೊಸೈಟಿಗೆ ರೂ. 16.29 ಕೋಟಿ ಲಾಭ, ಶೇ.25 ಡಿವಿಡೆಂಡ್
    Next Article ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ರೂ 5.99 ಕೋಟಿ ನಿವ್ವಳ ಲಾಭ 

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.