Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶಿಕ್ಷಕರಿಂದ ಪ್ರೀತಿ, ಸಮರ್ಪಣಾ ಭಾವದ ಸೇವೆ
    News

    ಶಿಕ್ಷಕರಿಂದ ಪ್ರೀತಿ, ಸಮರ್ಪಣಾ ಭಾವದ ಸೇವೆ

    adminBy adminSeptember 10, 2025

    ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಶ್ಲಾಘನೆ

    ಬೆಳ್ಮಣ್: ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ ಪ್ರೀತಿ ಮತ್ತು ಸಮರ್ಪಣಾ ಮನೋಭಾವದಿಂದ ಶಿಕ್ಷಕರು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅಭಿಪ್ರಾಯಪಟ್ಟರು.

    https://chat.whatsapp.com/EbVKVnWB6rlHT1mWtsgbch
    ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸದಾಗಿ ಆರಂಭವಾದ ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯು ಕೇವಲ ಆರು ತಿಂಗಳಲ್ಲಿ ₹ 6 ಕೋಟಿಗೂ ಮೀರಿದ ವಹಿವಾಟು ಸಾಧಿಸಿದೆ. ಇದು ಎಂಸಿಸಿ ಬ್ಯಾಂಕಿಗೆ ಸ್ಥಳೀಯ ಸಮುದಾಯದ ಬಲವಾದ ಬೆಂಬಲಕ್ಕೆ ಸಾಕ್ಷಿಯಾಗಿದೆ. ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ದೂರದೃಷ್ಟಿಯ ಹೆಜ್ಜೆ ಇಡುವುದು ಮಹತ್ವಪೂರ್ಣ. ಶಿಕ್ಷಕರು ತಮ್ಮ ಸಮರ್ಪಣಾ ಭಾವದ ಸೇವೆ ಮುಂದುವರಿಸಬೇಕು ಎಂದು ಹೇಳಿದರು.


    ಮುಲ್ಲಡ್ಕ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ಫಾದರ್ ಮಿಲ್ಟನ್ ಫೆರ್ನಾಂಡಿಸ್, ನಿವೃತ್ತ ಶಿಕ್ಷಕಿ ಮತ್ತು ಸೈಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮಾಜಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ ಅರಾನ್ಹಾ, ಮತ್ತು ಕುರ್ಕಿಲಬೆಟ್ಟು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಗ್ರೆಟ್ಟಾ ಮಸ್ಕರೇನ್ಹಸ್ ಅವರು ಗೌರವ ಅತಿಥಿಗಳಾಗಿದ್ದರು. ಫಾದರ್ ಮಿಲ್ಟನ್ ಫೆರ್ನಾಂಡಿಸ್ ಮಾತನಾಡಿ, ಶಿಕ್ಷಕರನ್ನು ಗೌರವಿಸಲು ಬ್ಯಾಂಕ್ ಮತ್ತು ಸಿಬ್ಬಂದಿ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿದರು. ಶಿಕ್ಷಕರಿಗೆ ನೀಡಿದ ಮನ್ನಣೆ ಅರ್ಥಪೂರ್ಣವಾಗಿದ್ದು ಈ ಕಾರ್ಯಕ್ರಮ ಆಯೋಜಿಸಲು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು. ಲಿಡ್ವಿನ್ ಅರಾನ್ಹಾ ಮಾತನಾಡಿ, ಬ್ಯಾಂಕಿನ ಚಿಂತನಶೀಲ ಕಾರ್ಯವನ್ನು ಶ್ಲಾಘಿಸಿದರು. ಬೆಳ್ಮಣ್ ಪ್ರದೇಶದ ವಿವಿಧ ಸಂಸ್ಥೆಗಳ ಶಿಕ್ಷಕರನ್ನು ಒಟ್ಟುಗೂಡಿಸುವಲ್ಲಿ ಸಿಬ್ಬಂದಿ ಮಾಡಿದ ಶ್ಲಾಘನೀಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.


    2018–19ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಲಿಡಿಯಾ ಅರಾನ್ಹಾ ಮತ್ತು ಕುರ್ಕಿಲಬೆಟ್ಟು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿbಗ್ರೆಟ್ಟಾ ಮಸ್ಕರೇನ್ಹಸ್ ಅವರನ್ನು ಅವರನ್ನು ಸನ್ಮಾನಿಸಲಾಯಿತು. ಒಟ್ಟು 60 ಶಿಕ್ಷಕರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಡಾ|ಸರ್ವಪಲ್ಲಿ ರಾಧಾಕೃಷ್ಜನ್ ಅವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನಿರ್ದೇಶಕರಾದ ಆಂಡ್ರ‍್ಯೂ ಡಿಸೋಜ ಸ್ವಾಗತಿಸಿದರು. ಸಿಬ್ಬಂದಿ ರಿತೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಶಾಖಾ ವ್ಯವಸ್ಥಾಪಕಿ ಶೈನಿ ಲಸ್ರಾದೊ ವಂದಿಸಿದರು. ನಿರ್ದೇಶಕರಾದ ಎಲ್ರಾಯ್ ಕೆ. ಕ್ರಾಸ್ಟೊ, ಡಾ|ಜೆರಾಲ್ಡ್ ಪಿಂಟೊ, ಶಿಕ್ಷಕರು ಮತ್ತು ಗಣ್ಯರು ಭಾಗವಹಿಸಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

     

    Anil Lobo Belman MCC BANK Sarvapalli Radhakrishnan Teachers Day
    Previous Articleಶಿವ ಪಾರ್ವತಿ ಗಣೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ರೂ 13.18 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ 12% ಡಿವಿಡೆಂಡ್‌
    Next Article ಆತ್ಮಶಕ್ತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.