ಷೇರುದಾರರಿಗೆ ಶೇ. 14 ಡಿವಿಡೆಂಡ್: ಅಧ್ಯಕ್ಷ ನಾಗೇಶ್ ಕಲ್ಲಡ್ಕ ಮಾಹಿತಿ
ಬಂಟ್ವಾಳ: ಪಾಣೆಮಂಗಳೂರಿನ ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2024-25ನೇ ಸಾಲಿನಲ್ಲಿ 446.68 ಕೋಟಿ ರೂ. ವ್ಯವಹಾರ ನಡೆಸಿ 1.65 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗೇಶ್ ಕಲ್ಲಡ್ಕ ತಿಳಿಸಿದರು.
https://chat.whatsapp.com/EbVKVnWB6rlHT1mWtsgbch
ಭಾನುವಾರ ಪಾಣೆಮಂಗಳೂರಿನ ಸುಮಂಗಲಾ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2025ರ ಮಾರ್ಚ್ ಅಂತ್ಯಕ್ಕೆ 2843 ಎ ತರಗತಿ ಸದಸ್ಯರಿದ್ದು, 5.55 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 2025ರ ಮಾರ್ಚ್ ಅಂತ್ಯಕ್ಕೆ 70.51 ಕೋಟಿ ರೂ. ಠೇವಣಾತಿ, 5.95 ಕೋಟಿ ರೂ. ವಿವಿಧ ನಿಧಿಗಳಲ್ಲಿ ಇದ್ದು 68.32 ಕೋಟಿ ರೂ. ಸಾಲ ಹೊರಬಾಕಿ ಇರುತ್ತದೆ. 2024-25ನೇ ಸಾಲಿನಲ್ಲಿ 104.71 ಕೋಟಿ ರೂ. ಸಾಲ ವಿತರಿಸಿದ್ದು, 91.01 ಕೋ.ಟಿ ರೂ. ಸಾಲವನ್ನುವಸೂಲಿ ಮಾಡಲಾಗಿದೆ. ವರದಿ ವರ್ಷದಲ್ಲಿ ಷೇರುದಾರರಿಗೆ ಶೇ.14 ಡಿವಿಡೆಂಡ್ ಘೋಷಿಸಲಾಗಿದೆ. ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ ನಾಲ್ಕನೇ ಬಾರಿಗೆ ಸಾಧನಾ ಪ್ರಶಸ್ತಿ ಪಡೆದಿದೆ. 1993ರಲ್ಲಿ ಸ್ಥಾಪನೆಗೊಂಡ ನಮ್ಮ ಸಹಕಾರ ಸಂಘವು ಒಂಬತ್ತು ಶಾಖೆಗಳನ್ನು ಹೊಂದಿದ್ದು, ತುಂಬೆ ಶಾಖೆಗೆ ಸ್ವಂತ ಕಟ್ಟಡ ಖರೀದಿಸಲಾಗಿದೆ ಎಂದು ಹೇಳಿದರು.


ಉಪಾಧ್ಯಕ್ಷ ಎಂ.ಕೆ.ಸಚಿನ್ ಮೆಲ್ಕಾರ್ ಮಾತನಾಡಿ, ಹಿರಿಯರು ಸ್ಥಾಪಿಸಿದ ಈ ಸಂಘವು ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಸದಸ್ಯರು ತಮ್ಮ ಸಹಕಾರ ಸಂಘದಲ್ಲಿ ವ್ಯವಹಾರ ನಡೆಸುವಂತೆ ವಿನಂತಿಸಿದರು. ಬಂಟ್ವಾಳ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪಗಾಣಿಗ ಸಂಘದ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ್ ಪಿ. ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿದರು.
ಲೆಕ್ಕಿಗ ಸುರೇಂದ್ರ ಕಳೆದ ಮಹಾಸಭೆಯ ನಿರ್ಣಯಗಳನ್ನು ಓದಿ ಹೇಳಿದರು. ನಿರ್ದೇಶಕರಾದ ನರ್ಸಪ್ಪ ಅಮೀನ್, ಈಶ್ವರ ಸಪಲ್ಯ ಮೆಲ್ಕಾರ್, ಪೂವಪ್ಪ ಸಪಲ್ಯ ದರಿಬಾಗಿಲು, ಸದಾಶಿವ ಬರಿಮಾರು, ಪ್ರಕಾಶ್ ಸಪಲ್ಯ ಜಕ್ರಿಬೆಟ್ಟು ದಿನೇಶ್ ಬಂಗೇರ, ಭುವನೇಶ್ ಮೊಗರ್ನಾಡು, ಶರತ್ ಕುಮಾರ್, ಚೇತನ್ ಕಲ್ಲಡ್ಕ, ಪುಷ್ಪಾ ನಾಗೇಶ್, ಪವಿತ್ರ ಪದ್ಮನಾಭ ಉಪಸ್ಥಿತರಿದ್ದರು. ನಿರ್ದೇಶಕ ಬಾಲಕೃಷ್ಣಸೆರ್ಕಳ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



