ಮಂಗಳೂರು: ಸಿಂಚನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 14ನೇ ವರ್ಷದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಪ್ರಫುಲ್ಲಾ ಕಾಮತ್ ಅಧ್ಯಕ್ಷತೆಯಲ್ಲಿ ವಿಠೋಭ ರುಕುಮಾಯಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಫುಲ್ಲಾ ಕಾಮತ್ ಮಾತನಾಡಿ ವಾರ್ಷಿಕ ವರದಿ ಮಂಡಿಸಿ ಲಾಭಾಂಶದ ವಿವರ ನೀಡಿ ಡಿವಿಡೆಂಡ್ ಘೋಷಿಸಿದರು. 2012ನೇ ಇಸವಿಯಲ್ಲಿ ಪ್ರಾರಂಭವಾದ ಸಿಂಚನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ನಿರಂತರ ಲಾಭ ಗಳಿಸುತ್ತ ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ ಎಂದು ಮಾಹಿತಿ ನೀಡಿದರು.

ಲೆಕ್ಕಪರಿಶೋಧಕರಾದ ಪಿ.ನರೇಂದ್ರ ಪೈ ಲೆಕ್ಕಪತ್ರ ಮಂಡಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅವರು ಅಂದಾಜು ಆಯವ್ಯಯ ಮಂಡಿಸಿದರು. ನಿರ್ದೇಶಕರಾದ ಮಹೇಶ್ ಸುವರ್ಣ ಮುಂದಿನ ವರ್ಷದ ಕಾರ್ಯಯೋಜನೆಗಳನ್ನು ಸಭೆಯ ಮುಂದಿಟ್ಟರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಹಕಾರಿಯ ಉಪಾಧ್ಯಕ್ಷ ಗುರುರಾಜ್, ನಿರ್ದೇಶಕರಾದ ಎಂ.ರಾಧಾಕೃಷ್ಣ ಕಾಮತ್, ಡಾ. ಜಯವಂತ ನಾಯಕ್, ಮೋಹನ್ ನಾಯಕ್, ಅನಿಲ್ ಕುಮಾರ್, ಗೌತಮ್ ಕಾಮತ್, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕಿ ಭಾರತಿ ಭಟ್, ಸಹಕಾರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಎಂ.ಆರ್ ಕಾಮತ್ ಸ್ವಾಗತಿಸಿದರು, ಡಾ.ಜಯವಂತ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಭಾರತಿ ಭಟ್ ವಂದಿಸಿದರು.

