ನವದೆಹಲಿ: ಬಹುರಾಜ್ಯ ಸಹಕಾರ ಸಂಘಗಳ ಮಂಡಳಿಗಳಲ್ಲಿ ಮಹಿಳೆಯರಿಗೆ ಎರಡು ಸ್ಥಾನಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಂದು ಸ್ಥಾನ ಮೀಸಲಿಡಲಾಗಿದೆ ಎಂದು ಸಹಕಾರ ಸಚಿವ ಅಮಿತ್ ಷಾ ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಹಕಾರಿ ವಲಯದಲ್ಲಿ ಎಸ್‌ಸಿ-ಎಸ್‌ಟಿ ಸದಸ್ಯರ ಭಾಗವಹಿಸುವಿಕೆ ಹೆಚ್ಚಿಸುವ ಕುರಿತು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಅಮಿತ್ ಷಾ, ಎಲ್ಲ ರಾಜ್ಯಗಳಿಗೆ ವಿತರಿಸಲಾದ ಪ್ರಾಥಮಿಕ ಕೃಷಿ ಸಾಲ ಸಂಘ (ಪ್ಯಾಕ್ಸ್)ಗಳ ಮಾದರಿಯ ಉಪ ಕಾನೂನಿನಲ್ಲಿ ಸರ್ಕಾರ ಇದೇ ರೀತಿಯ ನಿಬಂಧನೆಗಳನ್ನು ಸೇರಿಸಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಗಣಕೀಕರಣಗೊಳಿಸಲು, ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಬಲಪಡಿಸಲು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಮತ್ತು ಸಹಕಾರಿ ಸಂಸ್ಥೆಗಳಿಗೆ ಐಟಿ ಮಧ್ಯಸ್ಥಿಕೆಗಳು ಸೇರಿ ಹಲವು ಯೋಜನೆಗಳನ್ನು ಸಚಿವಾಲಯ ಜಾರಿಗೊಳಿಸುತ್ತಿದೆ. ಈ ಯೋಜನೆಗಳೂ ಸಹಕಾರಿ ಸಂಘಗಳ ರೈತ ಸದಸ್ಯರಿಗೆ ಪ್ರಯೋಜನ ನೀಡುತ್ತಿವೆ. ಇದರಲ್ಲಿ ಎಸ್‌ಸಿ-ಎಸ್‌ಟಿ ರೈತರೂ ಸೇರಿದ್ದಾರೆ ಎಂದು ಷಾ ಮಾಹಿತಿ ನೀಡಿದ್ದಾರೆ.
ಹಾಲು ಸಂಗ್ರಹ 5 ಪಟ್ಟು ಹೆಚ್ಚಳ
ಗುಜರಾತ್ ನಲ್ಲಿ 2001-02ರಲ್ಲಿ 50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. 2024-25ರಲ್ಲಿ ಹಾಲು ಸಂಗ್ರಹ ಪ್ರಮಾಣ 250 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಕಳೆದ 25 ವರ್ಷಗಳಲ್ಲಿ ಹಾಲು ಸಂಗ್ರಹ 5 ಪಟ್ಟು ಹೆಚ್ಚಳವಾಗಿದೆ. ರೈತರಿಗೆ ಪಾವತಿಸುವ ಹಾಲಿನ ಬೆಲೆಗಳೂ ಕಳೆದ 15 ವರ್ಷಗಳಲ್ಲಿ ಶೇ.140ರಷ್ಟು ಹೆಚ್ಚಾಗಿದೆ ಎಂದು ಅಮಿತ್ ಷಾ ತಿಳಿಸಿದ್ದಾರೆ.

