ಸಾಸ್ತಾನ: ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಸಾಸ್ತಾನ ಶಾಖೆಯ ಉದ್ಘಾಟನಾ ಸಮಾರಂಭ ಸಾಸ್ತಾನ ಗೋಳಿಗರಡಿ ರಸ್ತೆಯ ದಿವ್ಯ ಕಾಂಪ್ಲೆಕ್ಸ್‌ನಲ್ಲಿ ಆ.20ರಂದು ಬುಧವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ.
https://chat.whatsapp.com/EbVKVnWB6rlHT1mWtsgbch
ನಾಡೋಜ ಡಾ.ಜಿ.ಶಂಕರ್ ಅವರು ಶಾಖೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಶಾಸಕ ಹಾಲಾಡಿ ಶೀನಿವಾಸ ಶೆಟ್ಟಿಯವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್ ಭದ್ರತಾ ಕೋಶ ಉದ್ಘಾಟನೆ ಮಾಡಲಿದ್ದಾರೆ. ಪಾಂಡೇಶ್ವರದ ವಿದ್ವಾನ್ ಶ್ರೀ ವಿಜಯ ಮಂಜರ್ ಆಶೀರ್ವಚನ ನೀಡಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ ಗಣಕೀಕೃತ ಬ್ಯಾಂಕಿಂಗ್‌ಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಮಂಜುನಾಥ್ ಎಸ್.ಕೆ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಗೋಳಿಗರಡಿ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿಠ್ಠಲ ಪೂಜಾರಿ ಗೋಳಿಗರಡಿ ಆವರ್ತನ ಠೇವಣಿಗೆ ಚಾಲನೆ ನೀಡಲಿದ್ದಾರೆ. ಕೋಟ ವ್ಯವಸಾಯಕ ಸೇವಾ ಸಹಕಾರ ಸಂಘದ ಅಧ್ಯಕ್ಷ ಶ್ರೀಕೃಷ್ಣ ಕಾಂಚನ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಂಕರ ಕುಂದರ್, ಕೋಟ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೊರಗ ಪೂಜಾರಿ, ಸಾಸ್ತಾನ ವ್ಯವಸಾಯಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಅಡಿಗ, ಕಟ್ಟಡದ ಮಾಲೀಕ ಉಮೇಶ್ ಪ್ರಭು, ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲಾ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಅಂಪಾರು, ಉಡುಪಿ ಜಿಲ್ಲಾ ಸೌಹಾರ್ದ ಅಭಿವೃಧ್ಧಿ ಅಧಿಕಾರಿ ವಿಜಯ ಬಿ.ಎಸ್ ಭಾಗವಹಿಸಲಿದ್ದಾರೆ.



ಮಾಧವ ಉಪಾಧ್ಯ , ವೇದಮೂರ್ತಿ ಸುಬ್ರಹ್ಮಣ್ಯ ಭಟ್, ಋಷಿಕುಮಾರ್ ಮಯ್ಯ, ವಿಘ್ನೇಶ್ವರ ಚಡಗ, ಶಿವ ಎಸ್ ಕರ್ಕೇರ, ಗೋಪಾಲ ಎ ಮೆಂಡನ್, ಡಾ.ಹೇಮಂತ್ ಕುಮಾರ್, ಡಾ.ಕರುಣಾಕರ, ಆನಂದ್, ಶಂಕರ್ ಪಾತ್ರಿ, ವಿಠ್ಠಲ್ ಪೂಜಾರಿ ಐರೋಡಿ, ಸುರೇಶ್ ಕುಂದರ್, ಜ್ಯೋತಿ ಉದಯ್ ಕುಮಾರ್, ಅನಿಲ್, ನಂದಿನಿ, ಸರಿತಾ, ಲೋಹಿತ್ ಜಿ.ಸಾಲಿಯಾನ್, ಗಿರೀಶ್ ಪೈ ಬಿ, ಪ್ರತಾಪ್ ಶೆಟ್ಟಿ, ಎಮ್.ಸಿ. ಚಂದ್ರಶೇಖರ, ರೊನಾಲ್ಡ್ ಅಂದ್ರಾದೆ, ವೆಂಕಟೇಶ್ ಪೈ ಗೌರವ ಉಪಸ್ಥಿತಿ ಇರಲಿದ್ದಾರೆ.
ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ, ನಿರ್ದೇಶಕರಾದ ಭಾಸ್ಕರ ಕಾಂಚನ್, ದಯಾನಂದ ಕರ್ಕೇರ, ಲಕ್ಷ್ಮಣ ಖಾರ್ವಿ, ರಾಘವೇಂದ್ರ ಸುವರ್ಣ, ಉದಯ್ ಕಾಂಚನ್, ಜಯಕುಮಾರ್ ಎ.ಎಸ್, ರೊನಾಲ್ಡ್ ಡಿಸೋಜ, ಆಶಾ ಉಪಾಧ್ಯ, ಜಯಂತಿ ಎಸ್ ಮೊಗವೀರ, ಸಹಕಾರಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಪಾಲ್ಗೊಳ್ಳಲಿದ್ದಾರೆ.

