Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಂತೆಕಟ್ಟೆ, ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕಿನ ಹೊಸ ಶಾಖೆಗಳು ಆರಂಭ
    News

    ಸಂತೆಕಟ್ಟೆ, ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕಿನ ಹೊಸ ಶಾಖೆಗಳು ಆರಂಭ

    adminBy adminAugust 18, 2025

    ಎಂಸಿಸಿ ಬ್ಯಾಂಕ್ ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಅನಿಲ್‌ ಲೋಬೊ ಹೇಳಿಕೆ

    ಮಂಗಳೂರು: ಗ್ರಾಹಕರು ನೀಡಿದ ಅಚಲ ಬೆಂಬಲ ಮತ್ತು ಸಹಕಾರದಿಂದ ಎಂಸಿಸಿ ಬ್ಯಾಂಕ್‌ ಉನ್ನತ ಪ್ರಗತಿ ಸಾಧಿಸಿದೆ. 113 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕ್ ಅನ್ನು ಬೆಂಬಲಿಸುವುದನ್ನು ಗ್ರಾಹಕರು ಮುಂದುವರಿಸಬೇಕು. ಬ್ಯಾಂಕಿನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಸಂತೆಕಟ್ಟೆ ಮತ್ತು ದೇರಳಕಟ್ಟೆಯಲ್ಲಿ ಶೀಘ್ರ ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್‌ ಲೋಬೊ ಹೇಳಿದರು.

    https://chat.whatsapp.com/EbVKVnWB6rlHT1mWtsgbch
    ಗ್ರಾಹಕರ ಅನುಕೂಲಕ್ಕಾಗಿ ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಭಾನುವಾರ ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸದಸ್ಯರು, ಗ್ರಾಹಕರು ಮತ್ತು ನಿರ್ದೇಶಕರ ಮಂಡಳಿಯ ಬೆಂಬಲ, ವಿಶ್ವಾಸ ಹಾಗೂ ಸಿಬ್ಬಂದಿಯ ಕಠಿಣ ಪರಿಶ್ರಮವು ಬ್ಯಾಂಕನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿದೆ. ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ದೃಷ್ಟಿಯಿಂದ ಬ್ಯಾಂಕ್ ವಿವಿಧ ಸಾರ್ವಜನಿಕ ಮತ್ತು ದತ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು.

    ಮಂಗಳೂರಿನ ಬಿಕರ್ನಕಟ್ಟೆಯ ಇನ್‌ಫಂಟ್‌ ಜೀಸಸ್ ಶ್ರೈನ್‌ನ ನಿರ್ದೇಶಕ ವಂದನೀಯ ಸ್ಟೀಫನ್ ಪಿರೇರ ದೀಪ ಬೆಳಗಿಸಿ ಮಾತನಾಡಿ, ಎಂಸಿಸಿ ಬ್ಯಾಂಕ್ ರೂ.1300 ಕೋಟಿ ವಹಿವಾಟು ದಾಟಿದ್ದು, ಗ್ರಾಹಕ ಸೇವೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆರೆಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ. ಎಂಸಿಸಿ ಬ್ಯಾಂಕ್ ಕೇವಲ ಹಣಕಾಸು ಸಂಸ್ಥೆಯಲ್ಲ, ಅತ್ಯುತ್ತಮ ಗ್ರಾಹಕ ಸೇವೆಯನ್ನು ನೀಡುವಲ್ಲಿ ಮತ್ತು ಸಾಧಿಸುವಲ್ಲಿ ಆಧುನೀಕರಣ, ಬದ್ಧತೆ ಮತ್ತು ಸೃಜನಶೀಲತೆಯ ಸಂಕೇತವಾಗಿದೆ ಎಂದು ಹೇಳಿದರು.


    ಕೋರ್ಡೆಲ್ ಹೋಲಿಕ್ರಾಸ್ ಚರ್ಚ್‌ ಧರ್ಮಗುರು ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಹೊಸ ಕಚೇರಿಯನ್ನು ಆಶೀರ್ವದಿಸಿ ಮಾತನಾಡಿ, ಶಿಸ್ತು, ಸಕಾರಾತ್ಮಕ ಮನಸ್ಥಿತಿ, ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಯ ತತ್ವಗಳು ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಯುವಕರು ಶ್ರದ್ಧೆಯಿಂದ ಕೆಲಸ ಮಾಡಲು, ಎಂಸಿಸಿ ಬ್ಯಾಂಕಿನ ಬೆಂಬಲದೊಂದಿಗೆ ಸ್ಟಾರ್ಟ್-ಅಪ್‌ಗಳನ್ನು ಅನ್ವೇಷಿಸಲು ಮತ್ತು ಒಂದೇ ಆದಾಯದ ಮೂಲವನ್ನು ಅವಲಂಬಿಸಿರಬಾರದು ಎಂದು ಹೇಳಿದರು.
    ಮುಖ್ಯ ಅತಿಥಿ ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ವ್ಯಾಲೆಂಟೈನ್ ಡಿಸಿಲ್ವ ಮಾತನಾಡಿ, ಕುಲಶೇಖರದಲ್ಲಿ ಶಾಖೆ ಸ್ಥಾಪಿಸುವಲ್ಲಿ ತಮ್ಮ ಪ್ರಯತ್ನಗಳನ್ನು ನೆನೆಯುತ್ತ ಅವರ ಅಧಿಕಾರಾವಧಿಯಲ್ಲಿ ನೇಮಕಗೊಂಡ ಹಲವಾರು ಸಿಬ್ಬಂದಿ ಈಗ ಎಂಸಿಸಿ ಬ್ಯಾಂಕಿನಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದಲ್ಲಿ ಬ್ಯಾಂಕಿನ ಉನ್ನತ ಪ್ರಗತಿಯನ್ನು ಕೊಂಡಾಡಿದರು.
    ಸೇಫ್ ರೂಮ್ ಅನ್ನು ಮುಖ್ಯ ಅತಿಥಿ, ಸಿಸ್ಟರ್ಸ್ ಆಫ್ ದಿ ಲಿಟಲ್ ಫ್ಲವರ್ ಆಫ್ ಬೆಥನಿಯ ಪ್ರೊಕ್ಯುರೇಟರ್ ಸಿ.ಫ್ಲೋಸಿ ಮಿನೇಜಸ್ ಉದ್ಘಾಟಿಸಿದರು. ಎಟಿಎಂ ಸೌಲಭ್ಯವನ್ನು ಮಂಗಳೂರಿನ ವೈಟ್ ಡವ್ಸ್‌ ಸ್ಥಾಪಕಿ ಮತ್ತು ಅಧ್ಯಕ್ಷೆ ಕೊರಿನ್ ರಸ್ಕ್ವಿನ್ಹಾ ಉದ್ಘಾಟಿಸಿದರು. ಮೊದಲ ಎಟಿಎಂ ನಗದು ಹಿಂಪಡೆಯುವಿಕೆಯನ್ನು ಮಂಗಳೂರಿನ ಪ್ರಸಾದ್ ಪ್ರಿಂಟರ್ಸ್‌ ಮಾಲೀಕ ಪ್ರವೀಣ್ ಪತ್ರಾವೊ ನೆರವೆರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಸರ್ಕಾರಿ ವಕೀಲ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಎಂ.ಪಿ.ನೊರೋನ್ಹಾ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಐಡಿಯಲ್ ಚಿಕನ್) ವ್ಯವಸ್ಥಾಪಕ ನಿರ್ದೇಶಕರಾದ ವಿನ್ಸೆಂಟ್ ಕುಟಿನ್ಹಾ, ಕೋರ್ಡೆಲ್‌ ಹೋಲಿಕ್ರಾಸ್ ಚರ್ಚ್‌ ಪ್ಯಾರಿಶ್ ಕೌನ್ಸಿಲ್ ಉಪಾಧ್ಯಕ್ಷರಾದ ರುತ್ ಕ್ಯಾಸ್ಟಲಿನೊ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಾಪ್ರಬಂಧಕ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿ ವಿಲ್ಮಾ ಜ್ಯೋತಿ ಸಿಕ್ವೇರ ವೇದಿಕೆಯಲ್ಲಿ ಹಾಜರಿದ್ದರು.


    ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ, ಜೋಸೆಫ್ ಅನಿಲ್ ಪತ್ರಾವೊ, ಜೆ.ಪಿ.ರೋಡ್ರಿಗಸ್, ರೋಶನ್ ಡಿಸೋಜ, ಹೆರಾಲ್ಡ್ ಜಾನ್ ಮೊಂತೇರೊ, ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಸಿ.ಜಿ.ಪಿಂಟೊ, ಶರ್ಮಿಳಾ ಮಿನೆಜಸ್, ಆಲ್ವಿನ್ ಪಿ.ಮೊಂತೇರೊ ಉಪಸ್ಥಿತರಿದ್ದರು. ಆಲ್ವಿನ್ ಡಿಸೋಜ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಶಾಖಾ ನಿರ್ದೇಶಕಿ ಐರೀನ್ ರೆಬೆಲ್ಲೊ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ವಿಲ್ಮಾ ಜ್ಯೋತಿ ಸಿಕ್ವೇರ ವಂದಿಸಿದರು. ಅಲೋಶಿಯಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

    ಸನ್ಮಾನ, ದತ್ತಿನಿಧಿ ವಿತರಣೆ

    ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಂಡ ಎಂ.ಪಿ.ನೊರೊನ್ಹಾ ಅವರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಪ್ರತಿಭಾನ್ವಿತರಾದ ಎಂಸಿಸಿ ಬ್ಯಾಂಕಿನ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಸಮಾಜ ಸೇವಾ ಸಂಸ್ಥೆಗಳಾದ ಅವ್ ಮಾರಿಯಾ ಪ್ಯಾಲಿಯೇಟಿವ್ ಕೇರ್, ಸಾನಿಧ್ಯ, ವೈಟ್ ಡವ್ಸ್ ಮತ್ತು ರಿಯಾ ಫೌಂಡೇಶನ್‌ಗೆ ಬ್ಯಾಂಕಿನ ದತ್ತಿ ನಿಧಿಯಿಂದ ತಲಾ ರೂ.50,000 ನೀಡಲಾಯಿತು. ಯುವ ಸಾಧಕರಾದ ವೆನ್ಸಿಟಾ ಡಯಾಸ್, ವಿ.ಜೆ.ಡಿಕ್ಸನ್, ಸಪ್ನಾ ಕ್ರಾಸ್ತಾ ಮತ್ತು ಸೋನಾಲ್ ಮೊಂತೇರೊ ಅವರನ್ನು ಹಾಗೂ ರ‍್ಯಾಂಕ್ ಪಡೆದ ಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು. ಹಳೆಯ ಕಟ್ಟಡದ ಮಾಲೀಕರಾದ ಫ್ರಾನ್ಸಿಸ್ ಕುಟಿನ್ಹೋ, ಹೊಸ ಆವರಣದ ನಿರ್ಮಾಣಕಾರ ಅವಲಾನ್ ಪತ್ರಾವೊ, ಅಜಿತ್ ಕುಮಾರ್ ಮತ್ತು ಆರ್ಕಿಟೆಕ್ಟ್ ದೀಪಕ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Anil Lobo Cordel Holy Cross Church Kalpane Kulshekar M.P Noronha MCC BANK Mcc Bank Kulashekhara Branch Praveen Patrao Proprietor of Prasad Printers Rev. Fr Stifan Pereira Spectrum Business Centre Sr Flossy Menezes
    Previous Articleರಾಷ್ಟ್ರೀಯ ಗೋಪಾಲರತ್ನ ಪ್ರಶಸ್ತಿಗೆ ನಾಮನಿರ್ದೇಶನ ಪ್ರಕ್ರಿಯೆ ಆರಂಭ
    Next Article ಭಾರತ್ ಟ್ಯಾಕ್ಸಿ ಲೋಗೋ, ಟ್ಯಾಗ್‌ಲೈನ್ ಸ್ಪರ್ಧೆ: ವಿಜೇತರಿಗೆ 30,000 ರೂ. ನಗದು ಬಹುಮಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.