ನವದೆಹಲಿ: ಭಾರತದ ಜಾನುವಾರು ಮತ್ತು ಡೈರಿ ವಲಯದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಷ್ಟ್ರೀಯ ಗೋಪಾಲರತ್ನ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್‌ಡಿ) ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 15ರಿಂದ ಸೆಪ್ಟೆಂಬರ್ 15ರ ತನಕ ಸಾಧಕರ ಹೆಸರುಗಳನ್ನು ಶಿಫಾರಸು ಮಾಡಲು ಸೂಚಿಸಿದೆ. ನವಂಬರ್ 26ರಂದು ರಾಷ್ಟ್ರೀಯ ಹಾಲು ದಿನದಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
https://chat.whatsapp.com/EbVKVnWB6rlHT1mWtsgbch
2021ರಲ್ಲಿ ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳು ದೇಶೀಯ ದನ ಮತ್ತು ಎಮ್ಮೆ ತಳಿಗಳನ್ನು ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ನೀಡಲಾಗುತ್ತಿದ್ದು, ಡೈರಿ ರೈತರು, ಸಹಕಾರಿಗಳು, ಹಾಲು ಉತ್ಪಾದಕ ಕಂಪನಿಗಳು, ಡೈರಿ ರೈತ ಉತ್ಪಾದಕ ಸಂಸ್ಥೆಗಳು ಮತ್ತು ಕೃತಕ ಗರ್ಭಧಾರಣೆಯ ತಂತ್ರಜ್ಞರನ್ನು ಈ ಪ್ರಶಸ್ತಿಗೆ ಪುರಸ್ಕರಿಸಲಾಗುತ್ತದೆ. ಅತ್ಯುತ್ತಮ ಹೈನುಗಾರ, ಅತ್ಯುತ್ತಮ ಡೈರಿ ಸಹಕಾರಿ ಮತ್ತು ಅತ್ಯುತ್ತಮ ಎಐಟಿ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜೊತೆಗೆ ಈಶಾನ್ಯ ಭಾರತದ ಪ್ರದೇಶ ಮತ್ತು ಹಿಮಾಲಯನ್ ರಾಜ್ಯಗಳಿಗೆ ಹೆಚ್ಚುವರಿ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು. ರೈತ ಮತ್ತು ಸಹಕಾರಿ ವಿಭಾಗಗಳಲ್ಲಿ ವಿಜೇತರಿಗೆ ಮೊದಲ ಮೂರು ಸ್ಥಾನಗಳಿಗೆ 5 ಲಕ್ಷ ರೂ., 3 ಲಕ್ಷ ರೂ. ಮತ್ತು 2 ಲಕ್ಷ ರೂ. ನಗದು ಬಹುಮಾನಗಳನ್ನು ನೀಡಲಾಗುವುದು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com







