ನಕಲಿ ಚಿನ್ನ ಅಡವಿಟ್ಟು ಹಣ ಹೊಡೆಯಲು ವಂಚಕರ ಕುತಂತ್ರ
ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನಕಲಿ ಚಿನ್ನ ಅಡವಿಟ್ಟು ಹಣ ಲಪಟಾಯಿಸಲು ಕುತಂತ್ರ ನಡೆಸಿರುವ ವಂಚಕರು ಸಹಕಾರಿ ಸಂಘವೊಂದರಲ್ಲಿ ಸಿಕ್ಕಿ ಬಿದ್ದಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಪ್ರತಿಷ್ಠಿತ ಸಹಕಾರಿ ಸಂಘವೊಂದಕ್ಕೆ ಆಗಮಿಸಿದ್ದವರು ನಕಲಿ ಬಂಗಾರ ಅಡವಿಡಲು ತಂತ್ರ ಹೂಡಿದ್ದರು. ಸೊಸೈಟಿಯ ಸಿಬ್ಬಂದಿಗಳು ಬಂಗಾರ ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದಿದೆ. ಕೆಲವರು ನಕಲಿ ಚಿನ್ನ ಅಡವಿಟ್ಟು ಎಲ್ಲಾ ಕಡೆ ಹೋಗಿ ಸಾಲ ಕೇಳುತಿದ್ದಾರೆ. ಈ ಹಿಂದೆಯೂ ಇದೇ ರೀತಿ ಅಡವಿಡಲು ಬಂದಿದ್ದರು ಎಂದು ತಿಳಿದುಬಂದಿದೆ.
ನಕಲಿ ಚಿನ್ನ ಅಡವಿಟ್ಟು ಮೋಸ ಮಾಡುವ ಗ್ಯಾಂಗ್ ಸಕ್ರಿಯವಾಗಿದ್ದು ಅವರ ಬಗ್ಗೆ ಬಳಿಕ ಪೊಲೀಸ್ ಕಮಿಷನರ್ ಅವರ ಕಚೇರಿಗೆ ಮಾಹಿತಿ ನೀಡಲಾಗಿದ್ದು ತಕ್ಷಣ ಪೊಲೀಸರು ಕಾರ್ಯಾಚರಣೆಗೆ ಇಳಿದು ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ನಕಲಿ ಚಿನ್ನ ಅಡವಿಟ್ಟು ಮೋಸ ಮಾಡುವ ಗ್ಯಾಂಗ್ ಬಗ್ಗೆ ಸೊಸೈಟಿಗಳ ಸಿಬ್ಬಂದಿಗಳು ಪರಸ್ಪರ ಮಾಹಿತಿ ಹಂಚಿಕೊಂಡು ಸಹಕಾರ ನೀಡುವಂತೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮನವಿ ಮಾಡಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

