ಕೋಟ: ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸಾಹೇಬರಕಟ್ಟೆ-ಶಿರಿಯಾರ ಇದರ ನೂತನ ಕಟ್ಟಡ “ಸೌಹಾರ್ದ ಸಿರಿ’ʼ ಇದರ ಉದ್ಘಾಟನೆ ಜು13ರಂದುಬೆಳಗ್ಗೆ9.30ಕ್ಕೆ ಜರಗಲಿದೆ.
https://chat.whatsapp.com/EbVKVnWB6rlHT1mWtsgbch
ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 17 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಜನಸ್ನೇಹಿ ಸೇವೆ ನೀಡುತ್ತಿದ್ದು ಜನಮಾನಸದಲ್ಲಿ ತನ್ನದೇ ಛಾಪು ಮೂಡಿಸಿದೆ. ಸಂಸ್ಥೆಯು ಸಾಹೇಬರಕಟ್ಟೆಯ ಹೃದಯಭಾಗದಲ್ಲಿ ಸ್ವಂತ ಜಾಗ ಖರೀದಿಸಿ ಇದೀಗ ಕೋಟ್ಯಂತರ ರೂ. ವೆಚ್ಚದಲ್ಲಿ ಆಧುನೀಕೃತ ಹವಾನಿಯಂತ್ರಿತ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಳಿಸುತ್ತಿದೆ.
ಸಂಸ್ಥೆಯ ಅಧ್ಯಕ್ಷ ಅಶೋಕ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಿರಾಲಿಯ ಮಹಾಗಣಪತಿ ಮಹಾಮಾಯ ದೇಗುಲದ ಆಡಳಿತ ಮೊಕ್ತಸರ ಗೋಪಿನಾಥ ಕಾಮತ್ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.






ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಧಾನ ಕಚೇರಿ ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದು, ಆಡಳಿತ ಕಚೇರಿಯ ಸಭಾಂಗಣ ಉದ್ಘಾಟನೆಯನ್ನು ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ ನೆರವೇರಿಸಲಿದ್ದಾರೆ. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಭದ್ರತಾ ಕೋಶ ಉದ್ಘಾಟನೆಯನ್ನು ಗರಿಕೆಮಠ ಅರ್ಕ ಗಣಪತಿ ದೇಗುಲದ ಮುಖ್ಯಸ್ಥ ವೇದಮೂರ್ತಿ ರಾಮಪ್ರಸಾದ ಅಡಿಗ ನೆರವೇರಿಸಲಿದ್ದಾರೆ. ವಿಶೇಷ ಠೇವಣಿ ಪತ್ರ ‘ಸೌಹಾರ್ದ ಸಿರಿ’ ಬಿಡುಗಡೆಯನ್ನು ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ನೆರವೇರಿಸಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನ ಗೌಡ ಅವರು ಶಾಖಾ ಕಟ್ಟಡ ಉದ್ಘಾಟಿಸಲಿದ್ದಾರೆ.
ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಎಸ್.ಕೆ.ಮಂಜುನಾಥ, ಶಿರಿಯಾರ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರದೀಪ ಬಲ್ಲಾಳ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಳಬೈಲು, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸೌಹಾರ್ದ ಸಹಕಾರಿ ಜಿಲ್ಲಾಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಜೈ ಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸ್ಥಾಪಕಾಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್, ಉಪಾಧ್ಯಕ್ಷ ಎಚ್. ನಾರಾಯಣ ಶೆಣೈ ಗಾವಳಿ, ನಿರ್ದೇಶಕರಾದ ಮಧುವನ ಮಾಧವ ಹೆಗ್ಡೆ ಎಂ., ರವೀಂದ್ರನಾಥ ಕಿಣಿ ಸಾಹೇಬರಕಟ್ಟೆ, ರಾಘವೇಂದ್ರ ಹೆಗ್ಡೆ ಸಾಹೇಬರಕಟ್ಟೆ ಎಸ್. ವೆಂಕಟೇಶ ಪೈ ಸಾಸ್ತಾನ, ಯು.ಪ್ರಸಾದ ಭಟ್ ಕಲ್ಲೆಟ್ಟು ಶಿರಿಯಾರ, ಜಗದೀಶ ಹೆಗ್ಡೆ ಸಾಹೇಬರಕಟ್ಟೆ ರಾಘವೇಂದ್ರ ಪ್ರಭು ಗುಡ್ಡೆಯಂಗಡಿ, ಪಲ್ಲವಿ ವೈ.ನಾಯಕ್ ಕಲ್ಮರ್ಗಿ, ಸುನೀತಾ ಹೆಗ್ಡೆ ಎತ್ತಿನಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎತ್ತಿನಟ್ಟಿ ಶಿವಾನಂದ ಶ್ಯಾನುಭಾಗ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

