ಹಿರೇಕೆರೂರ ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದ ಆಶ್ರಯದ ವಿದ್ಯಾಸಂಸ್ಥೆ ಉನ್ನತ ಸಾಧನೆ
ಹಿರೇಕೆರೂರು: ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ನಡೆಯುತ್ತಿರುವ ಡಿ.ಆರ್ ತಂಬಾಕದ ಆಂಗ್ಲಮಾಧ್ಯಮ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉನ್ನತ ಸಾಧನೆ ಮಾಡಿದ್ದು ಶೇ.89.58 ಫಲಿತಾಂಶ ದಾಖಲಿಸಿದೆ. ಒಟ್ಟು 48 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
https://chat.whatsapp.com/EbVKVnWB6rlHT1mWtsgbch
ತೇರ್ಗಡೆಯಾದ ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 21 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 08 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.
ಸೀಮಾ ಬಸರಿಹಳ್ಳಿ 625ಕ್ಕೆ 619 ಶೇ.99.04 ಅಂಕ ಪಡೆದು ಹಿರೇಕೆರೂರು & ರಟ್ಟಿಹಳ್ಳಿ ಅವಳಿ ತಾಲೂಕಿಗೆ ದ್ವಿತೀಯ, ಕಾರ್ತೀಕ ಸಣ್ಣಮನಿ 618 ಶೇ. 98.88 ಅಂಕ ಪಡೆದು ಅವಳಿ ತಾಲೂಕಿಗೆ ತೃತೀಯ ಸ್ಥಾನ, ಶಶಿಧರ ಆರ್.ಡಿ 611 ಶೇ.97.76 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ, ಸುಶ್ಮಿತಾ ಬಂಗೇರ 608 ಅಂಕ ಪಡೆದು ನಾಲ್ಕನೇ ಸ್ಥಾನ, ಚಿನ್ಮಯಿಸ್ವಾಮಿ ಮಠದ 598 ಅಂಕ ಪಡೆದು ಐದನೇ ಸ್ಥಾನ, ಸಿಂಧು ಎಚ್.ಎಂ 590 ಅಂಕ ಆರನೇ ಸ್ಥಾನ, ಪ್ರಿಯಾ ಎಲ್.ಡಿ 574 ಅಂಕ ಏಳನೇ ಸ್ಥಾನ, ಲಕ್ಷ್ಮಣ ಸಿಂಗ್ 568, ಉತ್ತನ್ ಅರಕೇರಿ 566, ಪ್ರಜ್ವಲ್ ಪಾಟೀಲ 556, ಸ್ನೇಹಾ ಪಾಟೀಲ 539 ಅಂಕ, ಭೂಷಣ್ ಪೂಜಾರ 536, ಮನು ಆರ್.ಬೆಟ್ಟಳ್ಳೇರ 533, ಐಶ್ವರ್ಯ ಎನ್.ಜಿ 532 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ, ಆಡಳಿತಾಧೀಕಾರಿ ಎಸ್.ವೀರಭದ್ರಯ್ಯ, ಸಂಸ್ಥೆಯ ನಿರ್ದೇಶಕರು, ಶಾಲೆಯ ಪ್ರಾಚಾರ್ಯ ಸತೀಶ ಬಣಕಾರ ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com