ಬೆಳಗಾವಿ: ಇಲ್ಲಿನ ಅಂಕಲಿ ಗ್ರಾಮದ ಡಾ.ಪ್ರಭಾಕರ ಕೋರೆ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ (ಬಹುರಾಜ್ಯ) 2024-25ನೇ ಸಾಲಿನಲ್ಲಿ 25.30 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ರಾಜ್ಯಾದ್ಯಂತ 55 ಶಾಖೆಗಳನ್ನು ಹೊಂದಿರುವ ಸೊಸೈಟಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.92 ಸಾಲ ವಸೂಲಾತಿ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಲಿ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಂಸ್ಥೆಯು 1989ರಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಲಿಂಗೈಕ್ಯ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತಹಸ್ತದಿಂದ ಪ್ರಾರಂಭವಾಗಿ ಸಂಸ್ಥಾಪಕರಾದ ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನ ಮತ್ತು ಅಮಿತ್ ಕೋರೆ ಹಾಗೂ ಪ್ರೀತಿ ದೊಡವಾಡ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಗ್ರಾಮೀಣ ಭಾಗದ ಶಾಖೆಗಳಿಂದ ರೈತಾಪಿ ವರ್ಗದವರಿಗೆ ಆಧುನಿಕ ತಂತ್ರಜ್ಞಾನಗಳ ಮೂಲಕ ತ್ವರಿತ ಸೇವೆಗಳನ್ನು ನೀಡುತ್ತಿದ್ದು, ವರ್ಷಾಂತ್ಯಕ್ಕೆ 97,727 ಸದಸ್ಯರನ್ನು ಹೊಂದಿದೆ. ರೂ.4 ಕೋಟಿಗೂ ಮಿಕ್ಕಿ ಶೇರು ಬಂಡವಾಳ ಹೊಂದಿದ್ದು, 141 ಕೋಟಿಗೂ ಮಿಕ್ಕಿ ನಿಧಿಗಳನ್ನು ಸಂಗ್ರಹಿಸಿ 1511 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದೆ. 1064 ಕೋಟಿಗೂ ಅಧಿಕ ಸಾಲ ವಿತರಿಸಿದೆ. 1657 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿದ್ದು, 22,076 ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ನಡೆಸಿದೆ. ಸಂಸ್ಥೆಯು ರೂ.25 ಕೋಟಿ ಮೌಲ್ಯದ 8 ಸ್ವಂತ ಕಟ್ಟಡಗಳನ್ನು ಹೊಂದಿರುತ್ತದೆ ಮತ್ತು ಭವಿಷ್ಯದಲ್ಲಿ ಶಾಖೆಗಳಿಗೆ ಸ್ವಂತ ನೀವೇಶನ ಹಾಗೂ ಕಟ್ಟಡಗಳನ್ನು ಖರೀದಿಸುವ ಗುರಿ ಹೊಂದಲಾಗಿದೆ ಎಂದರು,ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮತ್ತು ಠೇವಣಿಗಳ ಬಡ್ಡಿದರಗಳಿಗೆ ಸ್ಪರ್ದಾತ್ಮಕ ರೀತಿಯಲ್ಲಿ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಸಂಸ್ಥೆಯು ಅಳವಡಿಸಿಕೊಂಡಿದೆ ಎಂದು ತಿಳಿಸಿದರು.
ಸುಮಾರು 200 ಪವರ್ ಕಾರ್ಟಗಳಿಗೆ, 5 ಬೃಹತ ಕಬ್ಬು ಕಟಾವು ಯಂತ್ರಗಳಿಗೆ, ಶಾಲಾ ಬಸ್ಸು ಮತ್ತು ನಾಲ್ಕು ಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ವಾಹನ ಸಾಲ, ಸದಸ್ಯರ ಅನುಕೂಲಕ್ಕಾಗಿ ಗೃಹ ಸಾಲ, ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸುಮಾರು 1200 ಎಕರೆ ಭೂಮಿಗೆ 900 ಫಲಾನುಭವಿ ರೈತ ಸದಸ್ಯರಿಗೆ ಏತ ನೀರಾವರಿ ಸಾಲ ನೀಡಲಾಗಿದೆ. ಬಂಗಾರ ಸಾಲವನ್ನು ತ್ವರಿತವಾಗಿ ಅತಿ ಕಡಿಮೆ ಬಡ್ಡಿದರದಲ್ಲಿ ವಿತರಿಸಲಾಗುತ್ತಿದೆ. ಸಂಸ್ಥೆಯು ತನ್ನ ಸದಸ್ಯರಿಗೆ ಸೇಫ್ ಲಾಕರ್ ವ್ಯವಸ್ಥೆ, ಪಾನ್ ಕಾರ್ಡ್, ಪಾಸ್‌ಪೋರ್ಟ್, ಇ-ಸ್ಟ್ಯಾಂಪ್, ಆರ್ಟಿಸಿ, ಬಸ್, ರೈಲು ಹಗೂ ವಿಮಾನ ಟಿಕೆಟ್ ಕಾಯ್ದಿರಿಸುವಿಕೆ, ಇತರೆ ಬ್ಯಾಂಕುಗಳ ಸಹಯೋಗದೊಂದಿಗೆ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಸೌಲಭ್ಯ ನೀಡುತ್ತಿದೆ. ಎಲ್ಲಾ ಶಾಖೆಗಳು ಲಾಭದಲ್ಲಿದ್ದು ಸಂಸ್ಥೆಯ ಆಡಳಿತ ಮಂಡಳಿ, ಶಾಖೆಗಳ ಸಲಹಾ ಸಮಿತಿಗಳ ನಿಸ್ವಾರ್ಥ ಸೇವೆ, ಸಿಬ್ಬಂದಿ ವರ್ಗದವರ ಸತತ ಪ್ರಯತ್ನ ಹಾಗೂ ಸಂಸ್ಥೆಯ ಸದಸ್ಯರ ಸಹಕಾರವೆ ಈ ಯಶಸ್ಸಿಗೆ ಕಾರಣ ಎಂದು ಮಹಾಂತೇಶ ಲಿ.ಪಾಟೀಲ ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ವರ್ಷಾಂತ್ಯಕ್ಕೆ 260ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ 200ಕ್ಕೂ ಅಧಿಕ ಸಿಬ್ಬಂದಿಯ ವೇತನ ಶ್ರೇಣಿ ಖಾಯಂಗೊಳಿಸಲಾಗಿದೆ. ಸಂಸ್ಥೆಯು ಸಿಬ್ಬಂದಿಗಳಿಗೆ ಸಾಮಾನ್ಯ ಮತ್ತು ಆರೋಗ್ಯ ವಿಮೆ ಸೌಲಭ್ಯ ಒದಗಿಸುತ್ತಿದೆ. ಸಂಸ್ಥೆಯಲ್ಲಿ ಒಟ್ಟು 64 ಪಿಗ್ಮಿ ಸಂಗ್ರಾಹಕರು ಇದ್ದಾರೆ. ಅತಿ ಶೀಘ್ರದಲ್ಲಿ ಸಂಸ್ಥೆಯು ಗಡಿರಾಜ್ಯ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ 30ಕ್ಕೂ ಅಧಿಕ ಶಾಖೆಗಳನ್ನು ಪ್ರಾರಂಭಿಸಲಿದ್ದು, ಗೋವಾ ರಾಜ್ಯಕ್ಕೂ ಕಾರ್ಯವನ್ನು ವಿಸ್ತರಿಸಿಕೊಳ್ಳಲಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಸಿದ್ದಗೌಡ ಮಗದುಮ, ನಿರ್ದೇಶಿಕಿ ಪ್ರೀತಿ ದೊಡವಾಡ, ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ, ಅಣ್ಣಾಸಾಬ ಸಂಕೇಶ್ವರಿ,ಬಸನಗೌಡ ಆಸಂಗಿ, ಸುಕುಮಾರ ಚೌಗಲೆ, ಪಿಂಟು ಹಿರೇಕುರಬರ, ಅಮಿತ್ ಜಾಧವ, ಪ್ರಫುಲ್ಲ ಶೆಟ್ಟಿ, ಅಶೋಕ ಚೌಗಲಾ, ಬಾಳಪ್ಪಾ ಉಮರಾಣೆ, ಅನಿಲ್ ಪಾಟೀಲ, ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದೇವೆಂದ್ರ ಕರೋಶಿ ಹಾಗೂ ಸಿಬ್ಬಂದಿ ವರ್ಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com