ಮಂಗಳೂರು: ದಿ ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 15ನೇ ಪಡೀಲ್ ಶಾಖೆಯು ಏಪ್ರಿಲ್ 13ರಂದು ಭಾನುವಾರ ಬೆಳಗ್ಗೆ 10.05ಕ್ಕೆ ಪಡೀಲಿನ “ಪ್ಯಾರಡೈಸ್ ಕಾಂಪ್ಲೆಕ್ಸ್”ನಲ್ಲಿ ಉದ್ಘಾಟನೆಗೊಳ್ಳಲಿದೆ.
https://chat.whatsapp.com/EbVKVnWB6rlHT1mWtsgbch
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮೂಲ್ಯಣ್ಣ ದೀಪ ಪ್ರಜ್ವಲನೆ ಮಾಡುವರು. ದಿ ಕರಾವಳಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ಎ.ಎಸ್. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಗುಡ್ಡೆಗುತ್ತು ಭದ್ರತಾ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ಪಡೀಲು ರೆಹಮಾನಿಯಾ ಜುಮ್ಮಾ ಮಸೀದಿಯ ಉಸ್ತಾದ್ ಜವಾದ್ ಮಿಸ್ಬಾಹಿ ಕಂಪ್ಯೂಟರ್ ಉದ್ಘಾಟನೆ ಮಾಡಲಿದ್ದಾರೆ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಪ್ರವರ್ತಕ ಡಾ. ಎಂ. ಅಣ್ಣಯ್ಯ ಕುಲಾಲ್ ಕ್ಯಾಶ್ ಕೌಂಟರ್ ಉದ್ಘಾಟಿಸಲಿದ್ದಾರೆ. ನಾಗುರಿ ಏಂಜಲೋರ್ ಚರ್ಚ್‌ನ ಧರ್ಮಗುರು ರೆ.ಫಾ.ಫೆಡ್ರಿಕ್ ಮೊಂತೇರೊ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಮಾತೃ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ರಮೇಶ್ ಎಚ್.ಎನ್., ನಿಕಟಪೂರ್ವ ಕಾರ್ಪೊರೇಟರ್ ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಚಂದ್ರಾವತಿ ವಿಶ್ವನಾಥ್, ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಕೇಶವ ಮಳಲಿ, ಸುಮಂಗಲಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಭಾಗವಹಿಸಲಿದ್ದಾರೆ.
ಸಂಘದ ಉಪಾಧ್ಯಕ್ಷ ರಮೇಶ್ ಮೆಂಡನ್ ಟಿ., ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಎಂ., ಶಾಖಾಧಿಕಾರಿ ದಿವ್ಯಾ ಎಂ., ನಿರ್ದೇಶಕರಾದ ತಾರಾನಾಥ್ ಸುವರ್ಣ, ನಾಗೇಶ್ ಎನ್, ಉಷಾ, ವಿಶ್ವಾಸ್‌ಕುಮಾರ್‌ದಾಸ್, ಭರತ್ ಕುಮಾರ್ ವಿ., ರಾಜನ್ ಕುಮಾರ್ ಎಚ್.ಎಸ್., ಅನಿಲ್ ಕುಮಾರ್ ಎಂ., ಶೋಭಾ, ದಯಾನಂದ ಎಚ್., ಪ್ರಕಾಶ್ ಬಿ., ಪದ್ಮನಾಭ ಎಂ., ರವೀಂದ್ರ ಟಿ ಭಾಗವಹಿಸಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com