ಉಪ್ಪಿನಂಗಡಿ: ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಉಪ್ಪಿನಂಗಡಿ ಇದರ ಉಪ್ಪಿನಂಗಡಿ, ನೆಲ್ಯಾಡಿ ಹಾಗೂ ಕಡಬ ಶಾಖಾ ಸಿಬ್ಬಂದಿಗಳಿಗೆ ವೃತ್ತಿ ತರಬೇತಿ ಕಾರ್ಯಕ್ರಮ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತದ ಮೈಸೂರು ಪ್ರಾಂತ್ಯದ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ತರಬೇತಿ ನೀಡಿದರು. ಸಹಕಾರಿ ಸಂಸ್ಥೆಯಲ್ಲಿ ಸಿಬ್ಬಂದಿಯ ಕಾರ್ಯಚಟುವಟಿಕೆ, ಕಡತ ನಿರ್ವಹಣೆ, ಸಾಲ ವಸೂಲಾತಿಗೆ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಇತರ ವಿಷಯಗಳಲ್ಲಿ ಮಾಹಿತಿ ನೀಡಿದರು. ಸಂಘದ ಎಲ್ಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಂಘದ ಅಧ್ಯಕ್ಷ ರೋಬರ್ಟ್ ಡಿಸೋಜ, ಉಪಾಧ್ಯಕ್ಷ ಜೆರೋಮ್ ಬ್ರಾಕ್ಸ್, ನಿರ್ದೇಶಕರಾದ ಹೆನ್ರಿ ಲೋಬೊ, ಸೆಬೆಸ್ಟಿಯನ್ ಲೋಬೊ, ವಿನ್ಸೆಂಟ್ ವೇಗಸ್, ಮ್ಯಾಕ್ಸಿಂ ಲೋಬೊ ಹಾಗೂ ಐರಿನ್ ಲೋಬೊ ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com