ಉತ್ತರ ಪ್ರದೇಶ ಬಜೆಟ್‌ನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಘೋಷಣೆ
ಲಖ್ನೋ: ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಖನ್ನಾ ಮಂಡಿಸಿರುವ ರಾಜ್ಯ ಬಜೆಟ್ ಸಹಕಾರಿ ವಲಯವನ್ನು ಬಲಪಡಿಸುವ ಇರಾದೆ ವ್ಯಕ್ತಪಡಿಸಿದ್ದು 2025ರ ವರ್ಷವನ್ನು ಸಹಕಾರಿ ಮಹಾಕುಂಭ ವರ್ಷವೆಂದು ಘೋಷಿಸಿದೆ.
https://chat.whatsapp.com/EbVKVnWB6rlHT1mWtsgbch
ಸಹಕಾರಿ ವಲಯಕ್ಕೆ ಒಟ್ಟು 16 ಕೋಟಿ ರೂ. ವೆಚ್ಚದ ಮೂರು ಹೊಸ ಯೋಜನೆಗಳನ್ನು ರಾಜ್ಯ ಬಜೆಟ್‌ನಲ್ಲಿ ಪರಿಚಯಿಸಲಾಗಿದೆ. ಅಂತಾರಾಷ್ಟ್ರೀಯ ಸಹಕಾರಿ ವರ್ಷ (ಐವೈಸಿ) 2025 ಕಾರ್ಯಕ್ರಮಗಳಿಗೆ 5 ಕೋಟಿ ರೂ., ಯುಪಿ ರಾಜ್ಯ ಸಹಕಾರಿ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ತಂತ್ರಜ್ಞಾನ ನವೀಕರಣ ಮತ್ತು ಸೈಬರ್ ಭದ್ರತೆಗಾಗಿ 10 ಕೋಟಿ ರೂ. ಮತ್ತು ಬಲರಾಂಪುರ ಮತ್ತು ಗೊಂಡಾದಲ್ಲಿ ಎರಡು ಹೊಸ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ನಿರ್ಮಿಸಲು 1 ಕೋಟಿ ರೂ. ಘೋಷಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಗಣಕೀಕರಣ ಮತ್ತು ಆರ್ಥಿಕ ಬೆಂಬಲಕ್ಕಾಗಿ 647.27 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ನ್ಯಾನೊ ಯೂರಿಯಾ ಸೇರಿದಂತೆ ಕೃಷಿ ರಾಸಾಯನಿಕ ಮತ್ತು ರಸಗೊಬ್ಬರ ಸಂಗ್ರಹಣೆಗಾಗಿ B-PACS ಗೆ ಸುಲಭ ಸಾಲ ಸೌಲಭ್ಯಗಳನ್ನು ಒದಗಿಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮಕ್ಕಾಗಿ ರೂ. 55 ಕೋಟಿಗಳನ್ನು ಮೀಸಲಿಡಲಾಗಿದೆ. ಕೃಷಿ ರಾಸಾಯನಿಕಗಳ ಪೂರ್ವಭಾವಿ ಗೋದಾಮಿಗೆ 170 ಕೋಟಿ ರೂ. ನಿಗದಿಪಡಿಸಲಾಗಿದೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸಲು, ಸರ್ಕಾರದ ESG (ಪರಿಸರ, ಸಾಮಾಜಿಕ ಮತ್ತು ಆಡಳಿತ) ಬದ್ಧತೆಗೆ ಅನುಗುಣವಾಗಿ ಸಹಕಾರಿ ವ್ಯವಸ್ಥೆಯ ಮೂಲಕ ಪರಿಸರ ಸ್ನೇಹಿ ಮುಂದಿನ ಪೀಳಿಗೆಯ ಕೃಷಿ ಪದ್ಧತಿಗಳನ್ನು ಬೆಂಬಲಿಸುವ ಸಹಕಾರಿ ಗೋದಾಮು ಯೋಜನೆಗೆ ರೂ. 10 ಕೋಟಿ ಮೀಸಲಿಡಲಾಗಿದೆ.
ಉತ್ತರ ಪ್ರದೇಶದ ಎಲ್ಲಾ ಸಹಕಾರಿ ಸಂಘಗಳ ಕೇಂದ್ರೀಕೃತ ಡೇಟಾಬೇಸ್‌ಗಾಗಿ ರೂ. 10 ಕೋಟಿ ನಿಗದಿಪಡಿಸಲಾಗಿದೆ. ಈ ಉಪಕ್ರಮವು ಸಹಕಾರಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮಹತ್ವವನ್ನು ಸಾರುತ್ತಿವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com