ಉಡುಪಿ: ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ಪ್ರೌಢಶಾಲೆ, ಪ್ದವಿಪೂರ್ವ ವಿಭಾಗ, ಕಾಲೇಜು ವಿಭಾಗ, ವೃತ್ತಿಪರ ಹಾಗೂ ತಾಂತ್ರಿಕ ವಿದ್ಯಾಸಂಸ್ಥೆಗಳ ವಿಭಾಗ ಹಾಗೂ ಠೇವಣಾತಿ ಸದಸ್ಯ ವಿಭಾಗದ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು ನಿರ್ದೇಶಕರ ಆಯ್ಕೆ ನಡೆದಿದೆ.
https://chat.whatsapp.com/Ge11n7QCiMj5QyPvCc0H19
ಆಡಳಿತ ಮಂಡಳಿಯ 19 ಸದಸ್ಯರ ಸ್ಥಾನಗಳ ಪೈಕಿ ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾಲಯಗಳ ವಿಭಾಗದಿಂದ ಧರಣೇಂದ್ರ ಕೆ., ರಾಜೀವ ಶೆಟ್ಟಿ, ಮನೋಹರ, ಮಹಿಳಾ ಮೀಸಲು ಸ್ಥಾನದಿಂದ ಕಸ್ತೂರಿ ಎಚ್. ಆರ್, ಕಾಲೇಜು ವಿಭಾಗದಿಂದ ವಿದ್ಯಾಧರ ಹೆಗ್ಡೆ ಎಸ್., ಶೇಷಪ್ಪಕೆ, ಇದೇ ಕ್ಷೇತ್ರದ ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ರಾಜೇಂದ್ರ ಕೆ., ವೃತ್ತಿಪರ ಹಾಗೂ ತಾಂತ್ರಿಕ ವಿದ್ಯಾಸಂಸ್ಥೆಗಳ ವಿಭಾಗದಿಂದ ಅವಿನ್ ಬಿ.ಆರ್. ಅಳ್ವ ಹಾಗೂ ಕುಮಾರ್ ನಾಯ್ಕ ಎ.ಎಸ್. ಮತ್ತು ಠೇವಣಾತಿ ಸದಸ್ಯ ವಿಭಾಗದಿಂದ ನಿತ್ಯಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಗಳ ಸಾಮಾನ್ಯ ವಿಭಾಗದಿಂದ ಮಂಜುನಾಥ, ಸೀತಾರಾಮ ಹೆಗಡೆ, ಕಿಶನ್‌ರಾಜ್ ಶೆಟ್ಟಿ, ಗಣೇಶ್ ಕುಮಾರ್ ಶೆಟ್ಟಿ, ಎಂ.ದಿನಕರ ಶೆಟ್ಟಿ ಕೆ, ಸಂತೋಷ್ ಕುಮಾರ್ ಶೆಟ್ಟಿ ಇದೇ ಕ್ಷೇತ್ರದ ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ಆನಂದ ಪೂಜಾರಿ, ಮಹಿಳಾ ಮೀಸಲು ಸ್ಥಾನದಿಂದ ನಾಗರತ್ನಾ ಎಸ್, ಪರಿಶಿಷ್ಟ ಸಂಗಡ ಮೀಸಲು ಸ್ಥಾನದಿಂದ ಚಂದ್ರಪ್ಪ ಎಂ. ಹಾಗೂ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಮಂಜ ನಾಯ್ಕ ಬಿ.ಇ ಅವಿರೋಧ ಆಯ್ಕೆಯಾಗಿರುತ್ತಾರೆ ಎಂದು ಬ್ಯಾಂಕ್ ಪ್ರಕಟನೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com