ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 20ನೇ ಶಾಖೆ ಫೆಬ್ರವರಿ 7ರಂದು ಕಲ್ಲಡ್ಕ ಮುಖ್ಯ ರಸ್ತೆಯ ಚೈತನ್ಯ ವ್ಯವಹಾರ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
https://chat.whatsapp.com/Ge11n7QCiMj5QyPvCc0H19
ನೂತನ ಶಾಖೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್, ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ನಾಯಕ್, ಉದ್ಯಮಿ ವರದರಾಯ ಪ್ರಭು, ಚೈತನ್ಯ ವ್ಯವಹಾರ ಸಂಕೀರ್ಣದ ಮಾಲಕ ತಿರುಮಲೇಶ್ವರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಾಖಾ ಶುಭಾರಂಭದ ಪ್ರಯುಕ್ತ ಹೆಚ್ಚುವರಿ ಬಡ್ಡಿ
ಸಹಕಾರಿ ಸಂಘದಲ್ಲಿ ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶದ ಸಾಲಗಳು, ಜೀವವಿಮೆ ಹಾಗೂ ಸಾಮಾನ್ಯ ವಿಮೆಗಳು, ಪಾನ್ ಕಾರ್ಡ್ ಮುಂತಾದ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ. ಸಹಕಾರಿ ಸಂಘ ಆರಂಭದಿಂದಲೂ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು ದಿನಾಂಕ 31-01-2025ರಂತೆ 48734 ಸದಸ್ಯರನ್ನು ಹೊಂದಿದ್ದು ರೂ. 349.57 ಕೋಟಿ ಠೇವಣಾತಿ ಸಂಗ್ರಹಿಸಿ ರೂ. 328.78 ಕೋಟಿ ಸಾಲ ವಿತರಿಸಿ ರೂ 678.35 ಕೋಟಿ ವ್ಯವಹಾರ ದಾಖಲಿಸಿದೆ. ಮಾರ್ಚ್ ವರ್ಷಾಂತ್ಯಕ್ಕೆ ರೂ.5.19 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ 12% ಡಿವಿಡೆಂಡ್ ವಿತರಿಸಲಾಗಿದೆ. ಸಹಕಾರಿಯು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಸೇವಾ ಕಾರ್ಯದ ಭಾಗವಾಗಿ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಇದರ ಮೂಲಕ ಅಶಕ್ತರಿಗೆ ಆರ್ಥಿಕ ನೆರವು, ವಿವಿಧ ಪುಸ್ತಕಗಳ ಬಿಡುಗಡೆ, ಮಹಿಳೆಯರಿಗೆ ಟೈಲರಿಂಗ್ ತರಬೇತಿ ಆರೋಗ್ಯ ಮಾಹಿತಿ ಶಿಬಿರ ಮೊದಲಾದ ಚಟುವಟಿಕೆಗಳನ್ನು ಮಾಡುತ್ತಿದೆ. ಪ್ರಸಕ್ತ ಶಾಖಾ ಶುಭಾರಂಭದ ಪ್ರಯುಕ್ತ 1 ವರ್ಷ ಅವಧಿಯ ನಿರಖು ಠೇವಣಿಗೆ ಶೇ.0.15% ಹೆಚ್ಚುವರಿ ಬಡ್ಡಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com