Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ದರೋಡೆ ಪ್ರಕರಣದ ಸುಳಿವು ನೀಡಿದ ಇದರ್‌ ರೈಲ್ವೆ ಸ್ಟೇಶನ್‌ ಕಹಾಂ ಹೈ….
    News

    ದರೋಡೆ ಪ್ರಕರಣದ ಸುಳಿವು ನೀಡಿದ ಇದರ್‌ ರೈಲ್ವೆ ಸ್ಟೇಶನ್‌ ಕಹಾಂ ಹೈ….

    adminBy adminJanuary 21, 2025

    ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಪೊಲೀಸರನ್ನೇ ಯಾಮಾರಿಸಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದು ಹೀಗೆ!

    ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕಿನಲ್ಲಿ ಕಳೆದ ಶುಕ್ರವಾರ ಹಾಡಹಗಲೇ ನಡೆದಿದ್ದ ದರೋಡೆ ಪ್ರಕರಣದಲ್ಲಿ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ಮೂರೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆ ನೋಡಿದರೆ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯವನ್ನೂ ನೀಡದೆ ಪೊಲೀಸರನ್ನೇ ಯಾಮಾರಿಸಿ ಪರಾರಿಯಾಗಿದ್ದ ಆರೋಪಿಗಳು ಕೆಲವೊಂದು ಸಣ್ಣ ಪುಟ್ಟ ಸಾಕ್ಷ್ಯಗಳನ್ನು ತಾವು ಪರಾರಿಯಾಗಿದ್ದ ಹಾದಿಯಲ್ಲಿ ಬಿಟ್ಟುಹೋಗಿದ್ದರು. ಅದರ ಜಾಡನ್ನೇ ಹಿಡಿದು ಮುಂದುವರಿದ ಪೊಲೀಸರು ಪ್ರಮುಖ ಮೂವರು ಆರೋಪಿಗಳನ್ನು ಮುಂಬೈ ಮತ್ತು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಸುಮಾರು ಹತ್ತು ಆರೋಪಿಗಳಿದ್ದಾರೆ ಎನ್ನಲಾಗಿದ್ದು ಉಳಿದವರ ಪತ್ತೆ ಕಾರ್ಯ ಮುಂದುವರಿದಿದೆ.

    https://chat.whatsapp.com/Ge11n7QCiMj5QyPvCc0H19

    ಶುಕ್ರವಾರ ನಡು ಮಧ್ಯಾಹ್ನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆ ಕೃತ್ಯ ನಡೆದ ಬಳಿಕ ಹೈ ಅಲರ್ಟ್‌ ಆಗಿದ್ದ ಪೊಲೀಸರು, ಸಿಎಂ ಸಿದ್ದರಾಮಯ್ಯ ಅವರಿಂದ ನೀವೆಲ್ಲ ಇದ್ದೂ ಹೀಗೇಕಾಯಿತು ಎಂದು ಹೇಳಿಸಿಕೊಂಡ ಬಳಿಕ ಪ್ರಕರಣವನ್ನು ಮತ್ತಷ್ಟು ಚಾಲೆಂಜಿಂಗ್‌ ಆಗಿ ಸ್ವೀಕರಿಸಿದ್ದರು. ಕೂಡಲೇ ಕಾರ್ಯತತ್ಪರರಾಗಿ ದರೋಡೆ ಕೃತ್ಯ ನಡೆದ ಸ್ಥಳದ ಆಸುಪಾಸಿನ ಸಿಸಿಟಿವಿಗಳ ದೃಶ್ಯಗಳನ್ನು ಸಂಗ್ರಹಿಸಿದ್ದರು. ಆದರೂ ಬ್ಯಾಂಕಿನೊಳಗಿನ ಸಿಸಿಟಿವಿ ಹಾಳಾಗಿದ್ದರಿಂದ ಒಳಗಡೆ ಬಂದು ದೋಚಿಕೊಂಡು ಹೋದ ದರೋಡೆಕೋರರ ಮುಖದ ಚಹರೆ ಸಿಗದೆ ಪ್ರಕರಣ ಒಂದಷ್ಟು ಕಗ್ಗಂಟಾಗಿದ್ದು ಹೌದು. ಈ ಮಧ್ಯೆ ಬ್ಯಾಂಕಿನ ಗ್ರಾಹಕರಿಂದಲೂ ಒತ್ತಡ ಕೇಳಿಬರತೊಡಗಿದ್ದು ಸಹಜವಾಗಿಯೇ ಪೊಲೀಸ್‌ ಇಲಾಖೆಯ ಮೇಲೆ ಒತ್ತಡ ಇತ್ತು.

    ಇವೆಲ್ಲವನ್ನೂ ನಿಭಾಯಿಸಿದ ಪೊಲೀಸ್‌ ಇಲಾಖೆ ಪ್ರಕರಣ ನಡೆದ ಸ್ಥಳದಲ್ಲಿ ಸಿಕ್ಕ ಸಣ್ಣಪುಟ್ಟ ಸಾಕ್ಷ್ಯಗಳನ್ನು ಸಂಗ್ರಹಿಸುತ್ತ ಅಧ್ಯಯನ ನಡೆಸುತ್ತ ಹೋದಾಗ ಸಿಕ್ಕಿದ್ದು ಆರೋಪಿಗಳಲ್ಲಿ ಒಬ್ಬಾತ ಕಾರಿನಿಂದ ಇಳಿದು ಬೈಕಿನಲ್ಲಿ ಲಿಫ್ಟ್ ಪಡೆದಿದ್ದು ತಿಳಿದುಬಂತು. ಕಾರಿನಿಂದಿಳಿದ ಆ ಆರೋಪಿ ಬೈಕಿನಲ್ಲಿ ಲಿಫ್ಟ್ ಪಡೆದು ಇದರ್ ರೈಲ್ವೆ ಸ್ಟೇಶನ್ ಕಹಾಂ ಹೈ ಎಂದು ಕೇಳಿದ್ದ ಎಂಬ ಸುಳಿವು ಸಿಕ್ಕಿದೆ. ಪೊಲೀಸರು ಆ ಬೈಕ್ ಸವಾರವನ್ನು ವಿಚಾರಿಸಿದಾಗ ರೈಲ್ವೆ ಸ್ಟೇಶನ್ ಬಗ್ಗೆ ವಿಚಾರಿಸಿದ್ದು ಗೊತ್ತಾಯಿತು. ಇಂಥ ಸಣ್ಣ ಸಣ್ಣ ಮಾಹಿತಿಗಳ ಬೆನ್ನತ್ತಿ ಹೊರಟ ಪೊಲೀಸರು, ಒಂದೊಂದೇ ಮಾಹಿತಿ ಕಲೆ ಹಾಕುತ್ತ ದರೋಡೆಕೋರರ ಬುಡ ತಲುಪಿದ್ದರು.

    ದರೋಡೆ ಪ್ರಕರಣದ ಆರೋಪಿಗಳ ಪೈಕಿ ಓರ್ವ ಬಸ್ಸಿನಲ್ಲಿ ಮಂಗಳೂರಿಗೆ ತೆರಳಿ ರೈಲ್ವೆ ಸ್ಟೇಶನ್‌ ತಲುಪಿರುವ ಸುಳಿವು ಸಿಕ್ಕ ತಕ್ಷಣ ಪೊಲೀಸರು ಕಂಕನಾಡಿ ಜಂಕ್ಷನ್ ಮತ್ತು ಸೆಂಟ್ರಲ್ ರೈಲ್ವೆ ಸ್ಟೇಶನ್‌ನಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ ಪತ್ತೆಯಾಗಿದ್ದು… ಒಬ್ಬಾತ ರಿಕ್ಷಾದಲ್ಲಿ ಬಂದು ಮತ್ಸ್ಯಗಂಧ ರೈಲಿನಲ್ಲಿ ಮುಂಬೈ ತೆರಳಿದ್ದ ಎಂಬುದು. ಇದರ ಜಾಢು ಹಿಡಿದ ಪೊಲೀಸರು ಒಂದು ತಂಡವಾಗಿ ಮುಂಬೈಗೆ ತೆರಳಿದರೆ, ಮತ್ತೊಂದು ತಂಡ ತಮಿಳುನಾಡು, ಕೇರಳಕ್ಕೆ ಹೋಗಿದೆ. ಅಷ್ಟರಲ್ಲಾಗಲೇ ಈ ದರೋಡೆ ಪ್ರಕರಣದಲ್ಲಿ ಮುಂಬೈನ ನಂಟು ಕಂಡುಬಂದಿತ್ತು. ಮಂಗಳೂರು ಪೊಲೀಸರು ಮುಂಬೈ ತಲುಪುವಾಗ ಆರೋಪಿ ಅಲ್ಲಿಂದ ತಮಿಳುನಾಡಿಗೆ ತೆರಳುವ ರೈಲಿನಲ್ಲಿ ಹೊರಟಿದ್ದ ಎಂಬ ವಿಷಯ ತಿಳಿದು ತಮಿಳುನಾಡಿಗೆ ತೆರಳಿದ್ದ ಪೊಲೀಸ್‌ ತಂಡಕ್ಕೆ ಆ ಮಾಹಿತಿ ರವಾನಿಸಿ ಸನ್ನದ್ಧರಾಗಿರುವಂತೆ ಮಾಹಿತಿ ನೀಡಿದ್ದರು. ಈ ಮಧ್ಯೆ ಮುಂಬೈನಲ್ಲಿ ಜೋಶ್ವಾ ರಾಜೇಂದ್ರನ್ ಎಂಬಾತ ಪೊಲೀಸ್‌ ಬಲೆಗೆ ಬಿದ್ದಿದ್ದ. ಆತ ತಮಿಳುನಾಡಿನವನಾಗಿದ್ದು, ಮುಂಬೈನ ದೊಂಬಿವಿಲಿಯಲ್ಲಿ ನೆಲೆಸಿದ್ದ. ಆತನ ವಿಚಾರಣೆ ವೇಳೆ ಈ ಪ್ರಕರಣದ ಉಳಿದ ಆರೋಪಿಗಳು ಕೇರಳದ ಮೂಲಕ ತಮಿಳುನಾಡಿಗೆ ತೆರಳಿರುವ ಮಾಹಿತಿ ಸಿಕ್ಕಿದೆ.

    ಇಷ್ಟೆಲ್ಲ ನಡೆಯುತ್ತಿದ್ದಾಗಲೇ ತಮಿಳುನಾಡಿಗೆ ತೆರಳಿದ್ದ ಪೊಲೀಸರು ನಂಬಲರ್ಹ ಮಾಹಿತಿಗಳ ಮೂಲಕ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಇಬ್ಬರನ್ನು ಬಂಧಿಸಿದ್ದರು. ತಿರುನಲ್ವೇಲಿಯ ಮುರುಗನ್‌ ಡಿ.ಥೇವರ್‌ ಡಿ ದೇವರ್ ಹಾಗೂ ಮುಂಬೈನ ಮಣಿವಣ್ಣನ್‌ ಪೊಲೀಸರಿಂದ ಅರೆಸ್ಟ್‌ ಆಗಿದ್ದರು. ಬಂಧನಕ್ಕೊಳಗಾಗಿರುವ ಮೂರೂ ಆರೋಪಿಗಳು ತಮಿಳುನಾಡಿನವರೇ ಆಗಿದ್ದು ಮುಂಬೈನ ಧಾರಾವಿಯಲ್ಲಿ ನಟೋರಿಯಸ್ ಗ್ಯಾಂಗಿನಲ್ಲಿ ಸದಸ್ಯರಾಗಿದ್ದರು. ಇನ್ನಷ್ಟು ಆರೋಪಿಗಳ ಬಂಧನ ಆಗಬೇಕಿದೆ.

    ದರೋಡೆ ತಂಡಕ್ಕೆ ಮಾಹಿತಿ ಕೊಟ್ಟ ಸ್ಥಳೀಯ ಮಹಾಶಯರು ಯಾರು?

    ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮೂವರು ನಟೋರಿಯಸ್‌ ಆರೋಪಿಗಳೇನೋ ಸಿಕ್ಕಿಬಿದ್ದರು. ಆದರೆ ತಮಿಳುನಾಡು, ಮುಂಬೈನಿಂದ ಇಲ್ಲಿಗೆ ಬಂದು ಇಲ್ಲಿ ದರೋಡೆ ಕೃತ್ಯ ನಡೆಸುವಷ್ಟು ಧೈರ್ಯ ಬರಲು ಅವರಿಗೆ ಸಹಕಾರ ನೀಡಿರುವ ಸ್ಥಳೀಯ ಮಹಾಶಯರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಕೆ.ಸಿ.ರೋಡ್‌ನ ಶಾಖೆಯೊಂದರಲ್ಲಿ ಇಷ್ಟೊಂದು ಪ್ರಮಾಣದ ಚಿನ್ನಾಭರಣವಿದೆ, ನಗದು ಹಣವಿದೆ, ಇಲ್ಲಿ ಸಿಸಿಟಿವಿ ಕ್ಯಾಮರಾ ಕೆಟ್ಟಿದೆ, ಅದನ್ನು ಸರಿ ಮಾಡಲು ಈ ಹೊತ್ತಿಗೆ ಇಲ್ಲಿಗೆ ಬಂದಿದ್ದಾರೆ, ಬ್ಯಾಂಕ್‌ ಶಾಖೆಯಲ್ಲಿ ಮೂವರು ಮಹಿಳಾ ಸಿಬ್ಬಂದಿಗಳಷ್ಟೇ ಇದ್ದಾರೆ ಎಂಬ ಮಾಹಿತಿ ನೀಡಿದವರು ಯಾರು ಎಂಬ ಸಹಜ ಕುತೂಹಲ ಮನೆಮಾಡಿದೆ. ಒಂದು ಮೂಲದ ಪ್ರಕಾರ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರ ಕೈವಾಡವಿದೆ ಎಂಬ ಮಾಹಿತಿಯೂ ಲಭಿಸಿದ್ದು ಆ ಪ್ರಭಾವಿ ಯಾರು ಎಂಬುದನ್ನು ಪೊಲೀಸ್‌ ಇಲಾಖೆ ಪತ್ತೆ ಹಚ್ಚುವ ಕೆಲಸದಲ್ಲಿ ನಿರತವಾಗಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Dacoith Dharavi gang Kotekaru vyavasaya seva sahakari sangha Mangalore Police Robbery Case Theft Case thirunalveli
    Previous Articleಗ್ರಾಮ ಸಮೃದ್ದಿ ಸೌಹಾರ್ದ ಸಹಕಾರಿ ಸಂಘದಿಂದ ಆರೋಗ್ಯ ಶಿಬಿರ
    Next Article ಸ್ವಸ್ತಿಕ್‌ ಸೌಹಾರ್ದ ಸೊಸೈಟಿಯಿಂದ ಆರೋಗ್ಯ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.