ಹೊನ್ನಾವರ: ಇಲ್ಲಿನ ಅರ್ಬನ್ ಬ್ಯಾಂಕ್ನ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಘವ ವಿಷ್ಣು ಬಾಳೇರಿ ಪುನರಾಯ್ಕೆಯಾಗಿದ್ದಾರೆ. ಇದರೊಂದಿಗೆ ಈ ಸೊಸೈಟಿಯ ಅಧ್ಯಕ್ಷರಾಗಿ ಸತತ ಆರನೇ ಬಾರಿ ಅವರು ಅಧ್ಯಕ್ಷ ಪದವಿ ಅಲಂಕರಿಸಿದಂತಾಗಿದೆ. ಸತತ 25 ವರ್ಷಗಳಿಂದ ಅವರು ಅಧ್ಯಕ್ಷರಾಗಿ ಬ್ಯಾಂಕ್ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ.
ರಾಘವ ಬಾಳೇರಿ ಅವರು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಇತ್ತೀಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಲ್ಲ 12 ಜನರೂ ಅವಿರೋಧವಾಗಿ ಆಯ್ಕೆಯಾಗಿದ್ದರು. ಡಾ.ಗೌತಮ ಕಿರಣ ಬಳ್ಕೂರ, ತಿಮ್ಮಪ್ಪ ಅನಂತ ಪೈ, ನಾರಾಯಣ ವೈಕುಂಠ ಭಂಡಾರಕರ, ರಘುನಾಥ ಗೋವಿಂದರಾಯ ಪೈ, ರಾಘವ ವಿಷ್ಣು ಬಾಳೇರಿ, ರಾಮದಾಸ ವೆಂಕಟೇಶ ಪ್ರಭು, ವಸಂತ ವೆಂಕಟೇಶ ಪ್ರಭು, ಅಣ್ಣಪ್ಪ ಹನುಮಂತ ನಾಯ್ಕ, ವಸಂತ ದೀಪಣ್ಣ ಶೆಟ್ಟಿ ಜೈನ್, ಅಂಕಿತಾ ನಾಗರಾಜ ಕಾಮತ, ತಾರಾ ನಾಯ್ಕ ಹಾಗೂ ರತ್ನಾಕರ ದೇವಪ್ಪ ಪಾವಸ್ಕರ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.