ಮೂಡುಬಿದಿರೆ: ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ಕರಿಂಜೆ, ಹೊಸಂಗಡಿ ಗ್ರಾಮ ಪಂಚಾಯತ್, ಶ್ರೀ ಜಗದ್ಗುರು ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಕರಿಂಜೆ, ಶ್ರೀಕೃಷ್ಣ ಗೆಳೆಯರ ಬಳಗ ಮಾರೂರು ಹೊಸಂಗಡಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇವರ ಸರಿಯುಕ್ತ ಆಶ್ರಯದಲ್ಲಿ ವೆನ್ಲಾಕ್ ರಕ್ತನಿಧಿ ಕೇಂದ್ರ ಮಂಗಳೂರು ಇವರ ಸಹಕಾರದೊಂದಿಗೆ ಭಾನುವಾರ ಸ್ವಯಂಪ್ರೇರಿತ ರಕ್ತಾದನ ಶಿಬಿರ ಆಯೋಜಿಸಲಾಯಿತು.
https://chat.whatsapp.com/Ge11n7QCiMj5QyPvCc0H19
ಗ್ರಾಮಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಆರ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ನೂಯಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಅಧ್ಯಕ್ಷ ಶಿವಯ್ಯ ಎಸ್.ಎಲ್ , ವೆನ್ಲಾಕ್ ಆಸ್ಪತ್ರೆಯ ವೈದ್ಯ.ರಾದ ಡಾ.ಅಂತೋಣಿ, ಡಾ.ಫಾತಿಮಾ, ಗ್ರಾಮ ಪಂಚಾಯತ್ ಪಿಡಿಒ ಗಣೇಶ್ ಶೆಟ್ಟಿ, ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿಯ ಸಿಇಒ ಶಶಿಕಲಾ ಉಪಸ್ಥಿತರಿದ್ದರು.
ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ.ಅಂತೋಣಿ ಮಾತನಾಡಿ, ರಕ್ತದಾನ ಶ್ರೇಷ್ಠವಾದ ದಾನ. ಯುವಕರು 3 ತಿಂಗಳಿಗೊಮ್ಮೆ ರಕ್ತ ನೀಡಿದರೆ, ಯುವತಿಯರು 4 ತಿಂಗಳಿಗೊಮ್ಮೆ ರಕ್ತ ನೀಡಬಹುದು ಎಂದು ಮಾಹಿತಿ ನೀಡಿದರು. ಒಟ್ಟಾಗಿ 55 ಮಂದಿ ರಕ್ತ ನೀಡಿದರು. ಗ್ರಾಮ ಪಂಚಾಯತ್ ಪಿಡಿಒ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸುಧಾಕರ ನೂಯಿ ಸ್ವಾಗತಿಸಿ, ಶಶಿಕಲಾ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com