ಸಹಕಾರ ರತ್ನ ಡಾ.ಹರೀಶ್ ಆಚಾರ್ಯರಿಗೆ ಅಭಿನಂದಿಸಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ
ಮಂಗಳೂರು: ರಾಜ್ಯ ಸರಕಾರದಿಂದ ಇತ್ತೀಚೆಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಆರ್. ಹರೀಶ್ ಆಚಾರ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಸಹಕಾರ ಬ್ಯಾಂಕ್ ಹಿತೈಷಿಗಳ ಬಳಗ ಮತ್ತು ಸಹಕಾರಿ ಮಿತ್ರರು ಆಶ್ರಯದಲ್ಲಿ ರಥಬೀದಿಯ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು.
ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರಿನ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
https://chat.whatsapp.com/Ge11n7QCiMj5QyPvCc0H19
ಪಡುಕುತ್ಯಾರಿನ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಬದುಕು ಒಳ್ಳೆಯತನದಲ್ಲಿ ಇನ್ನೊಬ್ಬರಿಗೆ ಆದರ್ಶವಾಗಿರಬೇಕು. ನಮ್ಮ ನಡೆ -ನುಡಿಗಳು, ಬದುಕಿನ ರೀತಿ ದೇವರು ಮೆಚ್ಚುವಂತಿರಬೇಕು ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಉನ್ನತ ಸಾಧನೆಯಿಂದ ಡಾ.ಹರೀಶ್ ಆಚಾರ್ಯ ಅವರಿಗೆ ಸಹಕಾರ ರತ್ನ ಪುರಸ್ಕಾರ ಬಂದಿದೆ. ಅವರು ಇನ್ನಷ್ಟು ಎತ್ತರಕ್ಕೆ ಏರಲಿ. ಎಲ್ಲರ ಸಹಕಾರದಲ್ಲಿ ನಾವು ಬದುಕು ಕಟ್ಟಿಕೊಳ್ಳುತ್ತೇವೆ. ಎಲ್ಲರ ಕೊಡುಗೆ ನಮ್ಮ ಬದುಕಿಗೆ ಮೂಲ. ಅದಕ್ಕಾಗಿ ನಮ್ಮಿಂದಾದ ಸಹಕಾರ ನಾವು ಎಲ್ಲರಿಗೂ ಕೊಡುತ್ತ ಬಂದರೆ ಬದುಕು ಸಾರ್ಥಕವಾಗುತ್ತದೆ. ನಮ್ಮ ನಡೆಯಿಂದ, ನಡತೆಯಿಂದ ಮಾಧವ ಮೆಚ್ಚುವ ಹಾಗೆ ಅಂದರೆ ದೇವರು ಮೆಚ್ಚುವ ಹಾಗೆ ನಡೆದದ್ದೇ ಆದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಇನ್ನೊಬ್ಬರ ಹಾಗೆ ನಾವು ಇರಬೇಕು ಎಂದು ಉದಾಹರಣೆ ಕೊಡುವುದಕ್ಕಿಂತ ಒಳ್ಳೆಯ ಕೆಲಸಕ್ಕೆ ನಾವೇ ಒಂದು ಉದಾಹರಣೆಯಾಗಿ ಬೆಳೆದರೆ ನಮ್ಮ ಜೀವನ ಆದರ್ಶವಾಗಿ ಸಾರ್ಥಕವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ನಮ್ಮಿಂದಾಗಿ ಇನ್ನೊಬ್ಬರ ಬದುಕಲ್ಲಿ ನಗು ಮೂಡಿದರೆ ಅದುವೇ ಆದರ್ಶ ಜೀವನವಾಗುತ್ತದೆ. ನಾವು ಭೂಮಿಯಲ್ಲಿ ಬಂದು ಜೀವಿಸಿದ್ದಕ್ಕೆ ಒಂದು ಒಳ್ಳೆಯ ನಡತೆಯನ್ನು ಇಲ್ಲಿ ಬಿಟ್ಟು ಹೋಗಬೇಕು. ನಮ್ಮ ಜೀವನ ತೆಂಗಿನ ಮರದಂತೆ ಇರಬೇಕು. ತೆಂಗಿನ ಮರದ ಗರಿ ಮೂಡುವಲ್ಲಿ ಅದರ ಗುರುತು ಮೂಡುತ್ತದೆ. ಹಾಗೆಯೇ ನಮ್ಮ ಜೀವನವೂ ಗುರುತು ಮೂಡುವಷ್ಟರ ಮಟ್ಟಿಗೆ ಬೆಳೆಯಬೇಕು. ಆ ನಿಟ್ಟಿನಲ್ಲಿ ಹರೀಶ್ ಆಚಾರ್ಯ ಸಾಗುತ್ತಿದ್ದಾರೆ. ಮುಂದೆ ಹರೀಶ್ ಆಚಾರ್ಯ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿ ಇದೇ ವೇದಿಕೆಯಲ್ಲಿ ಅವರನ್ನು ಸನ್ಮಾನಿಸುವ ಯೋಗ ಒದಗಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಹಕಾರ ರತ್ನ ಡಾ.ಎಸ್.ಆರ್. ಹರೀಶ್ ಆಚಾರ್ಯ, ನನ್ನ ಬೆಳವಣಿಗೆಗೆ ಕಿರಿಯರಿಂದ ಹಿರಿಯರವರೆಗಿನ ಹಲವಾರು ಜನರ ಕೊಡುಗೆ ಇದೆ. 15 ವರ್ಷಗಳ ಹಿಂದೆ ವಿಶ್ವಕರ್ಮ ಬ್ಯಾಂಕ್ ಅಧ್ಯಕ್ಷನಾದಾಗ, 10 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷನಾದಾಗ ಈ ಕ್ಷೇತ್ರದ ಬಂಧುಗಳು ನನ್ನ ವಿಚಾರಗಳಿಗೆ ಸ್ಪಂದಿಸಿದ ರೀತಿ, ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದಾಗ, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಆರಂಭ ಮಾಡಿದಾಗ ನನಗೆ ಸ್ಪಂದಿಸಿದ ರೀತಿಯೇ ನಿಜವಾದ ಸ್ಪಂದನ. ಹಿಂದೆ ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಮೆಡಿಕಲ್ ಹಬ್ ನಗರದ ಹೊರಭಾಗಕ್ಕೂ ವ್ಯಾಪಿಸಿದೆ. ವೈದ್ಯಕೀಯ ಚಿಕಿತ್ಸೆಗೆ ದುಬಾರಿ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಸಹಕಾರಿ ಕ್ಷೇತ್ರದಿಂದ ಪರಿಹಾರ ಸಾಧ್ಯವಿದ್ದು ಇದಕ್ಕಾಗಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ.ಸುರೇಶ್ ರೈ, ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ, ಪ್ರಮುಖರಾದ ಉಪೇಂದ್ರ ಆಚಾರ್ಯ ಪೆರ್ಡೂರು, ವೆಂಕಟೇಶ್ ಎ.ಎಸ್., ದಯಾನಂದ ಅಡ್ಯಾರ್, ಭಾರತಿ ಜಿ.ಭಟ್, ಜೈರಾಜ್ ಬಿ.ರೈ, ಅಶೋಕ್ ಶೇಟ್, ಗಣೇಶ್‌ಶೆಣೈ, ಪ್ರಭಾಕರ ಶೆಟ್ಟಿ, ಮುನಿಯಾಲು ದಾಮೋದರ ಆಚಾರ್ಯ, ಸಂಜೀವ ಅಡ್ಯಾರ್, ರಾಮಚಂದ್ರ, ಸುಮನಾ ಶರಣ್, ಜಗದೀಶ್‌ಸಿದ್ದಕಟ್ಟೆ, ಜಯಂತಿ ಕೇಶವ ಆಚಾರ್ಯ, ಶೇಖರ ಆಚಾರ್ಯ, ಪ್ರೊ.ಖಾನ್, ಶೇಷಪ್ಪ ಅಮೀನ್, ಅರುಣಾ, ಪಶುಪತಿ ಉಳ್ಳಾಲ್, ಪ್ರೊ.ಗಣಪತಿ ಗೌಡ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್ ಹರೀಶ್ ಸ್ವಾಗತಿಸಿದರು. ಜಿತಿನ್ ಜೀಜೊ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಹರೀಶ್ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com