Top News

    ಅಡಕೆ ಹಾಳೆಯ ಪ್ಲೇಟ್‌ನಿಂದ ಕ್ಯಾನ್ಸರ್‌ ಹರಡುತ್ತದೆ ಎಂಬುದೇ ಹಾಸ್ಯಾಸ್ಪದ

    June 4, 2025

    ಸೌಹಾರ್ದ ಸಹಕಾರಿಗಳ ನಿರ್ದೇಶಕರಿಗೆ ತರಬೇತಿ ಕಾರ್ಯಕ್ರಮ

    June 3, 2025

    ಸಹಕಾರಿ ಪಿತಾಮಹ ಸಿದ್ದರಾಮನ ಗೌಡ ಸಣ್ಣರಾಮನ ಗೌಡ ಜನ್ಮದಿನ ಆಚರಣೆ

    June 3, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 4.04 ಲಕ್ಷ ರೂ. ಲಾಭ
    News

    ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 4.04 ಲಕ್ಷ ರೂ. ಲಾಭ

    adminBy adminSeptember 25, 2024

    ಉಪ್ಪಿನಂಗಡಿ: ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ವಾರ್ಷಿಕ 4.04 ಲಕ್ಷ ರೂ. ಲಾಭ ಗಳಿಸಿದ್ದು ಲಾಭಾಂಶದಲ್ಲಿ ಅರ್ಹ ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರೋಬರ್ಟ್ ಡಿಸೋಜ ಹೇಳಿದರು.


    ಉಪ್ಪಿನಂಗಡಿಯ ದೀನರ ಕನ್ಯಾಮಾತೆ ದೇವಾಲಯದ ಹಾಲ್‌ನಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ವರ್ಷಾಂತ್ಯದಲ್ಲಿ 41,44,500.00 ರೂ. ಪಾಲು ಬಂಡವಾಳ ಸಂಗ್ರಹಿಸಿದ್ದು, 8,14,26,876.15 ರೂ. ವಿವಿಧ ಖಾತೆಗಳಲ್ಲಿ ಜಮೆ ಇರುತ್ತದೆ. ಆರ್ಥಿಕ ವರ್ಷದ ಕೊನೆಗೆ ರೂ. 33,77,59,845.75 ವ್ಯವಹಾರ ಮಾಡಿದ್ದು 4.04 ಲಕ್ಷ ಲಾಭ ಬಂದಿದೆ ಎಂದು ಮಾಹಿತಿ ನೀಡಿದರು.

    https://chat.whatsapp.com/Ge11n7QCiMj5QyPvCc0H19
    ಸಂಘದ ನಿರ್ದೇಶಕರಾದ ಗ್ರೆಗೋರಿ ಲೋಬೊ, ವಿನ್ಸೆಂಟ್ ಮಿನೇಜಸ್, ಸಿಲ್ವೆಸ್ಟರ್ ವೇಗಸ್, ಸೆಬೆಸ್ಟಿಯನ್ ಲೋಬೊ, ಐರಿನ್‌ ಬೋಬೊ ಉಪಸ್ಥಿತರಿದ್ದರು.


    ಉಪ್ಪಿನಂಗಡಿ ಕೇಂದ್ರ ಕಚೇರಿಯ ಗುಮಾಸ್ತೆ ತನುಶ್ರೀ ಹಾಗೂ ಕಡಬ ಶಾಖೆಯ ಪೂಜಾಶ್ರೀ ಬಿ. ಪ್ರಾರ್ಥಿಸಿದರು. ನೆಲ್ಯಾಡಿ ಶಾಖೆಯ ಗುಮಾಸ್ತ ಜೋನ್ನಿ ಡಿಸೋಜ ಹಿಂದಿನ ಸಭೆಯ ನಡವಳಿಗಳನ್ನು ವಾಚಿಸಿದರು.

    ಕೇಂದ್ರ ಕಚೇರಿಯ ವಸೂಲಾತಿ ಅಧಿಕಾರಿ ಚಂದ್ರಶೇಖರ್ ಕೆ. 2022-23ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು. ಲಾಭ-ನಷ್ಟ ಹಾಗೂ ಆಸ್ತಿ ಜವಾಬ್ದಾರಿ ತಖ್ತೆಯನ್ನು ಕೇಂದ್ರ ಕಚೇರಿಯ ಲೆಕ್ಕಿಗ ಸಂತೋಷ್ ಫ್ರಾನ್ಸಿಸ್ ಪಿಂಟೊ ಮಂಡಿಸಿದರು. 2023 -24ನೇ ಸಾಲಿನ ಅಂದಾಜು ಮುಂಗಡ ಬಜೆಟನ್ನು ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಶ್ರೇಯಸ್ ಶೆಟ್ಟಿ ತಿಳಿಸಿದರು. ಸಂಘದ ಸಿಬ್ಬಂದಿಯ ಹೆಸರುಗಳನ್ನು ನಿರ್ದೇಶಕ ಮ್ಯಾಕ್ಸಿ ಲೋಬೊ ವಾಚಿಸಿದರು. ನಿರ್ದೇಶಕ ಹೆನ್ರಿ ಲೋಬೊ ಗೌರವಿಸಿದರು. ಸಂಘದ ಅಧ್ಯಕ್ಷ ರೋಬರ್ಟ್ ಡಿಸೋಜ ಸ್ವಾಗತಿಸಿದರು. ಉಪಾಧ್ಯಕ್ಷ ಜೆರೋಮ್ ಬ್ರ್ಯಾಗ್ಸ್‌ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಲ್ಫ್ರೆಡ್‌ ವಿನ್ಸೆಂಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಪಿಗ್ಮಿ ಸಂಗ್ರಾಹಕ ವಿಕ್ಟರ್ ಪಿಂಟೊ ಹಾಗೂ ಸೋಮನಾಥ ಸಹಕರಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Anugraha Credit Souharda Sahakari Sangha Banking Cooperative Cooperative Registrar Robert Dsouza Souharda Sahakari Spandana Spandana NEws Uppinangady
    Previous Articleಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ. 55.46 ಲಕ್ಷ ನಿವ್ವಳ ಲಾಭ
    Next Article ಪ್ರೇರಣಾ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮಹಾಸಭೆ

    Related Posts

    News

    ಅಡಕೆ ಹಾಳೆಯ ಪ್ಲೇಟ್‌ನಿಂದ ಕ್ಯಾನ್ಸರ್‌ ಹರಡುತ್ತದೆ ಎಂಬುದೇ ಹಾಸ್ಯಾಸ್ಪದ

    June 4, 2025
    News

    ಸೌಹಾರ್ದ ಸಹಕಾರಿಗಳ ನಿರ್ದೇಶಕರಿಗೆ ತರಬೇತಿ ಕಾರ್ಯಕ್ರಮ

    June 3, 2025
    News

    ಸಹಕಾರಿ ಪಿತಾಮಹ ಸಿದ್ದರಾಮನ ಗೌಡ ಸಣ್ಣರಾಮನ ಗೌಡ ಜನ್ಮದಿನ ಆಚರಣೆ

    June 3, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಅಡಕೆ ಹಾಳೆಯ ಪ್ಲೇಟ್‌ನಿಂದ ಕ್ಯಾನ್ಸರ್‌ ಹರಡುತ್ತದೆ ಎಂಬುದೇ ಹಾಸ್ಯಾಸ್ಪದ

    June 4, 2025

    ಸೌಹಾರ್ದ ಸಹಕಾರಿಗಳ ನಿರ್ದೇಶಕರಿಗೆ ತರಬೇತಿ ಕಾರ್ಯಕ್ರಮ

    June 3, 2025

    ಸಹಕಾರಿ ಪಿತಾಮಹ ಸಿದ್ದರಾಮನ ಗೌಡ ಸಣ್ಣರಾಮನ ಗೌಡ ಜನ್ಮದಿನ ಆಚರಣೆ

    June 3, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.