ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ, ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಮಂಗಳೂರು: ಪದವು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಪದವು ಕೈಕಂಬ, ಮಂಗಳೂರು, ಇದರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷೆ ಸುಮನಾ ಶರಣ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು 2023-24ರ ಸಾಲಿನಲ್ಲಿ 2.72 ಕೋಟಿ ರೂ. ಪಾಲು ಬಂಡವಾಳ ಹೊಂದಿದ್ದು ರೂ. 43.73 ಕೋಟಿ ಠೇವಣಿ ಹಾಗೂ ರೂ. 7.12 ಕೋಟಿ ನಿಧಿಗಳು ಇದೆ. ರೂ.38.81 ಕೋಟಿ ಸಾಲದ ಹೊರಬಾಕಿ ಇದೆ. 2023-24ರ ಸಾಲಿನಲ್ಲಿ ರೂ. 1.35 ಕೋಟಿ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಿಸಲಾಗಿದೆ. ಸದ್ರಿ ಸಂಘವು ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ಎ ತರಗತಿ ಕಾಯ್ದುಕೊಂಡಿದೆ. ಸಂಘದ ಆರ್ಥಿಕ ಲೆಕ್ಕಪತ್ರಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಂಡು ಮಂಜೂರು ಮಾಡಲಾಯಿತು.
ಅಧ್ಯಕ್ಷೆ ಸುಮನಾ ಶರಣ್ ಸ್ವಾಗತಿಸಿ, ಸಂಘದ ಸಮಗ್ರ ಚಿತ್ರಣವನ್ನು ವಿವರಿಸಿದರು. 2024-25ರ ಸಾಲಿಗೆ ಸಂಘದ ಕಾರ್ಯಚಟುವಟಿಕೆಗಳ ವಿವರಣೆ ನೀಡಿ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಸಹಕಾರ ಕೋರಿದರು.
https://chat.whatsapp.com/Ge11n7QCiMj5QyPvCc0H19
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಎಂ. ವಾರ್ಷಿಕ ವರದಿ ಮಂಡಿಸಿದರು. ಮೃತಪಟ್ಟಿರುವ ಸಂಘದ ಹಿರಿಯ ನಿರ್ದೇಶಕ ಉಮೇಶ್ ಡಿ. ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ವಿಜಯ ಕುಮಾರ್ ಶೆಟ್ಟಿ, ತಾರಾನಾಥ ಬಿ., ಕಿಶೋರ್ ಕುಮಾರ್, ಶಿವರಾಮ ಭಂಡಾರಿ, ಎಸ್.ಸುಧಾಕರ ಜೋಗಿ, ಎಂ.ಶ್ರೀನಿಧಿ ಭಾರದ್ವಾಜ್, ಸದಾಶಿವ ಕೋಟ್ಯಾನ್, ಕಮಲಾಕ್ಷಿ ಭಂಡಾರಿ, ಈಶ್ವರ ನಾಯ್ಕ, ನಾಗಮ್ಮ ಉಪಸ್ಥಿತರಿದ್ದರು. ಉಪಾಧ್ಯಕ್ಷ ಗೌತಮ್ ನೊರೋನ್ಹಾ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com