14.26 ಕೋಟಿ ರೂ. ವ್ಯಾಪಾರ ವಹಿವಾಟು, ಶೇ.15 ಡಿವಿಡೆಂಡ್
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ ಮಂಗಳೂರು (ಹಾಪ್‌ಕಾಮ್ಸ್) ಇದರ 2023-24ನೇ ಸಾಲಿನ ಮಹಾಸಭೆ ಬಲ್ಮಠದ ಶಾಂತಿ ನಿಲಯದಲ್ಲಿ ಜರಗಿತು.
https://chat.whatsapp.com/Ge11n7QCiMj5QyPvCc0H19
ಸಂಸ್ಥೆಯು ವರದಿ ವರ್ಷದಲ್ಲಿ 14.26 ಕೋಟಿ ರೂ. ವ್ಯಾಪಾರ ವಹಿವಾಟಿನೊಂದಿಗೆ 34.86 ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ಅನ್ನು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಘೋಷಣೆ ಮಾಡಿದರು.
ಮುಂದಿನ ಕರ್ನಾಟಕ ಮಹಾಮಂಡಳದ ಯೋಜನೆಯಲ್ಲಿ ತೋಟಗಾರಿಕೆ ಅನುದಾನದಿಂದ ಪಡೀಲಿನ ತೋಟಗಾರಿಕೆ ಇಲಾಖೆಯ ಖಾಲಿ ಇರುವ ಸ್ಥಳದಲ್ಲಿ ರೈತರಿಂದ ತೆಂಗಿನಕಾಯಿ ಖರೀದಿಸುವ ಮತ್ತುಸಗಟು ವ್ಯಾಪಾರ ಕೇಂದ್ರದ ಮೂಲಭೂತ ಸೌಕರ್ಯಕ್ಕಾಗಿ 70 ಲಕ್ಷ ರೂ. ಅನುದಾನ ಮತ್ತುತೆಂಗಿನಕಾಯಿ ಸುಲಿಯುವ ವಿದ್ಯುತ್ ಚಾಲಿತ ಯಂತ್ರೋಪಕರಣ ಖರೀದಿಗಾಗಿ 4.25 ಲಕ್ಷ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವರದಿ ವರ್ಷದಲ್ಲಿ ಹಾಪ್‌ಕಾಮ್ಸ್ ಸಂಸ್ಥೆಯು ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿ ಮುಂದುವರಿದಿರುತ್ತದೆ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಹಾಪ್‌ಕಾಮ್ಸ್‌ನ ವ್ಯವಸ್ಥಾಪಕನಿರ್ದೇಶಕ ಕೆ.ಪ್ರವೀಣ ವಾರ್ಷಿಕ ವರದಿ ಮಂಡಿಸಿದರು.ಉಪಾಧ್ಯಕ್ಷೆ ವಿನಯ ರಾನಡೆ, ನಿರ್ದೇಶಕರಾದ ಕೆ.ಲಕ್ಷ್ಮೀನಾರಾಯಣ ಉಡುಪ, ಎಂ.ಜಯಕುಮಾರ್ ಪರ್ಕಳ, ಯಶೋದರ ಶೆಟ್ಟಿ ಬಿ., ಜಯಪ್ರಕಾಶ್ ಕೂಜುಗೋಡು, ಪ್ರಶಾಂತ್ ಗಟ್ಟಿ ಎ.ವಿಷ್ಣು ಭಟ್, ಸಚಿನ್ ಕುಮಾರ್, ವಿಷ್ಣು ಮರಾಠಿ, ಕೆ.ಚನ್ನಕೇಶವ ಕಾರಂತ, ಬಾಲಕೃಷ್ಣ ಪಕ್ಕಳ, ಹರೀಶ, ಗಣೇಶ್ ನಾಯ್ಕ ಉಪಸ್ಥಿತರಿದ್ದರು. ನಿರ್ದೇಶಕ ಹರೀಶ್ ಕುಮಾರ್ ಕಲ್ಯ ವಂದಿಸಿದರು. ಹಾಪ್‌ಕಾಮ್ಸ್ ಮ್ಯಾನೇಜರ್ ರವಿಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com