ಬೆಳ್ತಂಗಡಿ: ಇಲ್ಲಿನ ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ ಭಾನುವಾರ ನಡೆದಿದ್ದು 58.35 ಕೋಟಿಗೂ ಅಧಿಕ ವ್ಯವಹಾರ, 44,45,999 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದ್ದು ಸದಸ್ಯರಿಗೆ 10% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ.
https://chat.whatsapp.com/Ge11n7QCiMj5QyPvCc0H19
ಸೊಸೈಟಿಯ ಅಧ್ಯಕ್ಷ ಹೆಚ್ ಪದ್ಮಗೌಡ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಂಘವು 58,35,33,301 ರೂಪಾಯಿ ಒಟ್ಟು ವ್ಯವಹಾರ ಮಾಡಿ 44,45,999 ಲಾಭ ಕಂಡಿದೆ. ಸದಸ್ಯರಿಗೆ 10% ಡಿವಿಡೆಂಡ್ ನೀಡುವುದಾಗಿ ತಿಳಿಸಿದರು.
ಸಹಕಾರಿಯ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜಿ, ನಿರ್ದೇಶಕರಾದ ಗೋಪಾಲಕೃಷ್ಣ ಬಿ.ಗುಲ್ಲೋಡಿ, ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ದೇವಸ, ಗೋಪಾಲಕೃಷ್ಣ ಜಿ.ಕೆ, ಮಾಧವ ಗೌಡ ಬೆಳ್ತಂಗಡಿ, ಸುರೇಶ್ ಬಿ.ಕೌಡಂಗೆ, ಯಶವಂತ ಬಿ.ಟಿ ಬೆಳಾಲು, ಸುನೀಲ್ ಅಣವು, ಪುರಂದರ ಗೌಡ ಎನ್.ಮೊಗ್ರು, ಶ್ರೀನಾಥ್ ಕೆ.ಎಂ ನಡ, ಸೋಮೇ ಗೌಡ, ಉಷಾದೇವಿ ಕಿನ್ಯಾಜಿ, ಭವಾನಿ ಕೆ.ಗೌಡ ಮೂಡಾಯೂರು, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಟಿ.ಎಸ್ ಉಪಸ್ಥಿತರಿದ್ದರು.
ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಸಿಂಚನ ಪ್ರಾರ್ಥನೆ ಹಾಡಿದರು.ಸೊಸೈಟಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸ್ವಾಗತಿಸಿ, ಭವಾನಿ ಕೆ.ಗೌಡ ವಂದಿಸಿದರು. ಶಾಖಾ ಪ್ರಬಂಧಕ ಉಮೇಶ್ ಎಂ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧನಂಜಯ ಕುಮಾರ್ ಟಿ.ಎಸ್ ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ವರ್ಗ ಕಾರ್ಯಕ್ರಮಕ್ಕೆ ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com