69 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ, ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿ
ವಿಟ್ಲ: ಕಳೆದ 69 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ಪ್ರತಿ ವರ್ಷವೂ ಉತ್ತಮ ಲಾಭ ಗಳಿಸಿ ಸಮಾಜಮುಖಿ ಕೆಲಸಗಳಲ್ಲಿ ಕೈ ಜೋಡಿಸಿರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2023-24ನೇ ಸಾಲಿನಲ್ಲಿ 2.97 ಕೋಟಿ ರೂ.ಗಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇಕಡಾ 22 ಡಿವಿಡೆಂಡ್ ಘೋಷಿಸಲಾಗಿದೆ.
ವರದಿ ವರ್ಷದಲ್ಲಿ 8025 ಸದಸ್ಯರು, 127.19 ಕೋಟಿ ರೂ. ಠೇವಣಾತಿ ಇದೆ. ಸುಮಾರು 154.65 ಕೋಟಿ ರೂ. ದುಡಿಯುವ ಬಂಡವಾಳ ಹಾಗೂ 83.76 ಕೋಟಿ ರೂ. ಸಾಲ ವಿತರಿಸಿದೆ. ವರದಿ ಸಾಲಿನಲ್ಲಿ ದಾಖಲೆಯ 690.20 ಕೋಟಿ ರೂ.ಗಳ ವ್ಯವಹಾರ ನಡೆಸಿ, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲ ತಾಲೂಕಿನ ಕಾರ್ಯವ್ಯಾಪ್ತಿ ಹೊಂದಿರುವ ಬ್ಯಾಂಕ್, ವಿಟ್ಲದಲ್ಲಿ ಪ್ರಧಾನ ಕಛೇರಿ, ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್, ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದ್ದು, ಬ್ಯಾಂಕ್ ಸಂಪೂರ್ಣ ಕಂಪ್ಯೂಟರೀಕರಣಗೊಂಡಿದ್ದು ಸಿ.ಬಿ.ಎಸ್. ವ್ಯವಸ್ಥೆಯಲ್ಲಿ ತ್ವರಿತ ಸೇವೆ ಒದಗಿಸಲಾಗುತ್ತಿದೆ. ಗ್ರಾಹಕರಿಗೆ ವ್ಯವಹಾರದ ಬಗ್ಗೆ ತ್ವರಿತವಾಗಿ ತಿಳಿದುಕೊಳ್ಳಲು ಉಚಿತವಾಗಿ ಎಸ್.ಎಂ.ಎಸ್ ಸೇವೆ ನೀಡಲಾಗುತ್ತಿದೆ.
https://chat.whatsapp.com/Ge11n7QCiMj5QyPvCc0H19
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಮಾರ್ಗದರ್ಶನದಲ್ಲಿ ದಿ.ಉರಿಮಜಲು ವೆಂಕಪ್ಪಯ್ಯರ ನೇತೃತ್ವದಲ್ಲಿ 1955ನೇ ಇಸವಿಯಲ್ಲಿ ಸ್ಥಾಪಿತವಾದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರತಿ಼ಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ.
ಬ್ಯಾಂಕಿನ ಪ್ರಧಾನ ಕಛೇರಿ ಮತ್ತು ಪುತ್ತೂರು ಶಾಖೆಯಲ್ಲಿ ಇ-ಸ್ಟಾಂಪಿಂಗ್ (ಠಸೆ ಪೇಪರ್) ದೊರೆಯುತ್ತದೆ. ಇದಲ್ಲದೆ ಬ್ಯಾಂಕಿನ ಪ್ರಧಾನ ಕಛೇರಿ ಮತ್ತು ಕಲ್ಲಡ್ಕ ಶಾಖೆಯಲ್ಲಿ ಉತ್ಪತ್ತಿ ಈಡಿನ ಸಾಲ ಮತ್ತು ಗೋದಾಮು ವ್ಯವಸ್ಥೆ ಇದೆ. ಪ್ರಧಾನ ಕಛೇರಿ ಮತ್ತು ಕನ್ಯಾನ ಶಾಖೆಯಲ್ಲಿ ರಸಗೊಬ್ಬರ, ಕೀಟನಾಶಕ ಮಾರಾಟದ ವ್ಯವಸ್ಥೆ ಇದೆ ಹಾಗೂ ಪ್ರಧಾನ ಕಛೇರಿಯಲ್ಲಿ ಪಡಿತರ ವಿತರಣೆ, ಬೆಳ್ತಂಗಡಿ ರಬ್ಬರ್ ಬೆಳೆಗಾರರ ಸಹಕಾರಿ ಸಂಘ ಉಜಿರೆಯ ಮೂಲಕ ಪ್ರಧಾನ ಕಛೇರಿಯಲ್ಲಿ ರಬ್ಬರ್ ಶೀಟು ಖರೀದಿ ಹಾಗೂ ರಬ್ಬರ್ ಪರಿಕರಗಳ ಮಾರಾಟದ ವ್ಯವಸ್ಥೆಯೂ ಇದೆ. ಬ್ಯಾಂಕಿನಲ್ಲಿ ಗ್ರಾಹಕರಿಗೆ ಭದ್ರತಾಕೋಶ ( ಲಾಕರ್), ಆರ್.ಟಿ.ಜಿ.ಎಸ್./ ನೆಫ್ಟ್ ಸೌಲಭ್ಯ ಒದಗಿಸಲಾಗಿದೆ.
ಹೆಚ್.ಜಗನ್ನಾಥ ಸಾಲ್ಯಾನ್ ವಿಟ್ಲಅಧ್ಯಕ್ಷ, ಮೋಹನ್ ಕೆ.ಎಸ್ ಉರಿಮಜಲು ಉಪಾಧ್ಯಕ್ಷ
ಬ್ಯಾಂಕಿನ ಅಧ್ಯಕ್ಷರಾಗಿ ಹೆಚ್.ಜಗನ್ನಾಥ ಸಾಲ್ಯಾನ್ ವಿಟ್ಲ, ಮೋಹನ್ ಕೆ.ಎಸ್ ಉರಿಮಜಲು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಹರೀಶ್ ನಾಯಕ್ ವಿಟ್ಲ, ಮನೋರಂಜನ್ ಕೆ.ಆರ್.ಕರೈ, ವಿಶ್ವನಾಥ ಎಂ. ವೀರಕಂಭ , ಉದಯಕುಮಾರ್ ಆಲಂಗಾರು, ಬಾಲಕೃಷ್ಣ ಪಿ.ಎಸ್ ಸಂಚಯಗಿರಿ, ಬಿ.ಸಿ.ರೋಡ್, ಗೋವರ್ಧನ್ ಕುಮಾರ್ ಐ.ವಿಟ್ಲ, ಕೆ.ದಯಾನಂದ ಆಳ್ವ ಕಡಂಬು, ಡಿ.ಸುಂದರ ಕನ್ಯಾನ, ದಿವಾಕರ ವಿಟ್ಲ, ಜಯಂತಿ ಹೆಚ್.ರಾವ್ ವಿಟ್ಲ, ಶುಭಲಕ್ಷ್ಮೀ ವಿಟ್ಲ ಇವರು ನಿರ್ದೇಶಕರಾಗಿ ಹಾಗೂ ಕೃಷ್ಣಮುರಳಿ ಶ್ಯಾಮ್ ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com