Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸುರತ್ಕಲ್ ಶಾಖೆಯ ನವೀಕೃತ ಕಛೇರಿ ಉದ್ಘಾಟನೆ
    News

    ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸುರತ್ಕಲ್ ಶಾಖೆಯ ನವೀಕೃತ ಕಛೇರಿ ಉದ್ಘಾಟನೆ

    adminBy adminSeptember 18, 2024

    1,000 ಕೋಟಿ ರೂ. ದಾಟಿದ ವ್ಯವಹಾರ, ಆರು ವರ್ಷಗಳಿಂದ ಶೇ.25ರಷ್ಟು ಡಿವಿಡೆಂಡ್‌: ಕೆ. ಜೈರಾಜ್ ಬಿ. ರೈ

    ಮಂಗಳೂರು: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುರತ್ಕಲ್ ಶಾಖೆಯ ನವೀಕೃತ ಶಾಖಾ ಕಛೇರಿಯನ್ನು ಹರುಷ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಇತ್ತೀಚೆಗೆ ಉದ್ಘಾಟಿಸಿದರು.

    https://chat.whatsapp.com/Ge11n7QCiMj5QyPvCc0H19

    ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಸದಸ್ಯ ಗ್ರಾಹಕರಿಗೆ ಹೆಚ್ಚಿನ ಅನುಕೂಲಗಳನ್ನು, ಸೌಲಭ್ಯಗಳನ್ನು ಒದಗಿಸುವುದು ಸಂಘದ ಕರ್ತವ್ಯ. ಈ ನಿಟ್ಟಿನಲ್ಲಿ ಸುರತ್ಕಲ್ ಶಾಖಾ ಕಛೇರಿಯನ್ನು ಆಧುನೀಕರಿಸಿ, ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ನವೀಕರಿಸಿ ಗ್ರಾಹಕರ ಸೇವೆಗೆ ಅರ್ಪಿಸಲಾಗಿದೆ.

    ಸಂಘವು ಸದಸ್ಯರ ಸಹಕಾರದಿಂದ ರೂ.1,000 ಕೋಟಿ ವ್ಯವಹಾರವನ್ನು ದಾಟಿದ್ದು, ಕಳೆದ ಆರು ವರ್ಷಗಳಿಂದ ಶೇ.25ರಷ್ಟು ಡಿವಿಡೆಂಡ್‌ ನೀಡುತ್ತಿದ್ದೇವೆ. ಸಂಘವು ಸಣ್ಣ ಮೊಬಲಗಿನ ರಿಟೇಲ್ ಸಾಲ ನೀಡುವಿಕೆಗೆ ಒತ್ತು ನೀಡುತ್ತಿದ್ದು, 40 ಸಾವಿರಕ್ಕಿಂತ ಹೆಚ್ಚು ಸಾಲಗಾರ ಗ್ರಾಹಕರಿದ್ದಾರೆ. ಸಾಲ ವಸೂಲಾತಿ ಅತ್ಯುತ್ತಮವಾಗಿದ್ದು, ಕಳೆದ 17 ವರ್ಷಗಳಿಂದ ನೆಟ್ ಎನ್.ಪಿ.ಎ. ಶೂನ್ಯ ಪ್ರಮಾಣದಲ್ಲಿದೆ. ಸಂಘದ ಈ ಎಲ್ಲಾ ಸಾಧನೆಗೆ ಸಹಕರಿಸುತ್ತಿರುವ ಎಲ್ಲಾ ಸದಸ್ಯ ಗ್ರಾಹಕರನ್ನು ಅಭಿನಂದಿಸಿದರು.


    ಸಂಘದ ನಿರ್ದೇಶಕ ವಿಠಲ ಪಿ.ಶೆಟ್ಟಿ ಹವಾನಿಯಂತ್ರಿತ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿ, ಉತ್ತಮ ಸೇವೆಯಿಂದ ಗ್ರಾಹಕರನ್ನು ಆಕರ್ಷಿಸಿ ಶಾಖೆಯ ವ್ಯವಹಾರವು ವರ್ಷಾನುವರ್ಷ ಹೆಚ್ಚಿಸುವಂತೆ ಮಾಡುವುದು ಸಿಬ್ಬಂದಿಗಳ ಕರ್ತವ್ಯ ಎಂದು ಹೇಳಿದರು. ನಿರ್ದೇಶಕ ಪಿ.ಬಿ.ದಿವಾಕರ ರೈ ಮಾತನಾಡಿ ಸಂತೃಪ್ತ ಗ್ರಾಹಕರೇ ಸಂಘದ ರಾಯುಭಾರಿಗಳು. ಇವರು ಸಂಘಕ್ಕೆ ಇನ್ನಷ್ಟು ಹೊಸ ಗ್ರಾಹಕರನ್ನು ಪರಿಚಯಿಸಿಕೊಟ್ಟು ವ್ಯವಹಾರಾಭಿವೃದ್ಧಿ ಹೊಂದಲು ಕಾರಣರಾಗುವರು ಎಂದು ಹೇಳಿದರು. ಸಂಘದ ಇನ್ನೋರ್ವ
    ನಿರ್ದೇಶಕ ದಯಾಕರ ಆಳ್ವ ಶುಭಾಶಂಶನೆಯನ್ನು ತಿಳಿಸಿ ಸಂಘದ ಕೇಂದ್ರ ಕಛೇರಿಗೆ ನೂತನ ಕಟ್ಟಡ ಹಾಗೂ ಇನ್ನೂ ಐದು ಶಾಖೆಗಳು ಶೀಘ್ರದಲ್ಲಿ ಶುಭಾರಂಭಗೊಳ್ಳಲಿದ್ದು, ಗ್ರಾಹಕರೇ ಸಂಘದ ಬೆನ್ನೆಲುಬು. ಇವರ ಸಹಕಾರವಿರುವುದರಿಂದ ಮಾತ್ರ ವರ್ಷಾನುವರ್ಷ ಸಂಘದ ವ್ಯವಹಾರ ವಿಸ್ತರಣೆ ಹೊಂದಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಹೇಳಿದರು.
    ಶಾಖಾ ಸಲಹಾ ಸಮಿತಿ ಅಧ್ಯಕ್ಷ ಡಾ.ಟಿ. ಆರ್. ಶೆಟ್ಟಿ ಮತ್ತು ಶಾಖಾಧಿಕಾರಿ ತುಳಸಿಯವರನ್ನು ಸನ್ಮಾನಿಸಲಾಯಿತು. ಶಾಖಾ ಸಲಹಾ ಸಮಿತಿ ಸದಸ್ಯರಾದ ರಮಾನಂದ ರಾವ್, ಬಾಲಕೃಷ್ಣ ಶೆಟ್ಟಿ ಮತ್ತು ಡಾ.ಕೆ.ಪಿ.ಕೆ. ಹೆಗ್ಡೆ ಅವರುಗಳನ್ನು ಮತ್ತು ಶಾಖಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಶಾಖಾ ಸಲಹಾ ಸಮಿತಿ ಅಧ್ಯಕ್ಷ ಡಾ. ಟಿ.ಆರ್. ಶೆಟ್ಟಿ ಸ್ವಾಗತಿಸಿದರು. ಸುರತ್ಕಲ್ ಶಾಖಾ ಸಿಬ್ಬಂದಿ ಶ್ರೀಲಕ್ಷ್ಮಿ ಪ್ರಾಥಿಸಿದರು, ಶಾಖಾಧಿಕಾರಿತುಳಸಿ ವಂದಿಸಿದರು, ಸಿಬ್ಬಂದಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    B Jairaj Rai Banking Cooperative Cooperative Registrar Sahakara Spandana Shree Ramakrishna Credit Co Operative Soceity Spandana Spandana NEws
    Previous Articleಪ್ರಣವ ಸೌಹಾರ್ದ ಸಹಕಾರಿಗೆ ಸ್ವಂತ ಪ್ರಧಾನ ಕಚೇರಿಯ ಆಶಯ ಶೀಘ್ರ ಸಾಕಾರ
    Next Article ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘ ಸದಸ್ಯರಿಗೆ 15 % ಡಿವಿಡೆಂಡ್

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.