Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪ್ರಣವ ಸೌಹಾರ್ದ ಸಹಕಾರಿಗೆ ಸ್ವಂತ ಪ್ರಧಾನ ಕಚೇರಿಯ ಆಶಯ ಶೀಘ್ರ ಸಾಕಾರ
    News

    ಪ್ರಣವ ಸೌಹಾರ್ದ ಸಹಕಾರಿಗೆ ಸ್ವಂತ ಪ್ರಧಾನ ಕಚೇರಿಯ ಆಶಯ ಶೀಘ್ರ ಸಾಕಾರ

    adminBy adminSeptember 18, 2024

    ಮುಂದಿನ ದಶಕದೊಳಗೆ 25 ಶಾಖೆಗಳನ್ನು ತೆರೆಯುವ ಕನಸು, ಸಂಸ್ಥೆಯ ಅಧ್ಯಕ್ಷ ಜಿ.ಆರ್‌.ಪ್ರಸಾದ್‌ ಅಭಿಪ್ರಾಯ

    ಮಂಗಳೂರು: ಸಂಸ್ಥೆಯ ಗೌರವಾನ್ವಿತ ಗ್ರಾಹಕರು, ಸದಸ್ಯರು, ಠೇವಣಿದಾರರ ನಿರಂತರ ಗುಣಮಟ್ಟದ ವ್ಯವಹಾರ ಮತ್ತು ಪ್ರೋತ್ಸಾಹದ ಕಾರಣದಿಂದ ಪ್ರಣವ ಸಂಸ್ಥೆ ರಾಜ್ಯಮಟ್ಟದಲ್ಲಿ ಶಾಖೆಗಳನ್ನು ತೆರೆದು ಜನಮನ್ನಣೆಗೆ ಪಾತ್ರವಾಗಿದೆ. ಮುಂದಿನ ದಶಕದೊಳಗೆ 25 ಶಾಖೆಗಳನ್ನು ತೆರೆಯುವ ಗುರಿ ಹೊಂದಿದ್ದು ಬ್ಯಾಂಕ್‌ ಮಾದರಿಯ ವ್ಯವಹಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮುಂದಡಿಯಿಡಲಾಗುತ್ತಿದೆ. ಸಂಸ್ಥೆಗೆ ಸ್ವಂತ ಕಟ್ಟಡದ ಪ್ರಧಾನ ಕಚೇರಿ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರಿನ ಕುಲಶೇಖರದಲ್ಲಿ ಜಾಗ ಖರೀದಿಸಲಾಗಿದ್ದು, ಎಲ್ಲ ನಿರ್ದೇಶಕರ, ಸದಸ್ಯರ ಸಹಕಾರದಿಂದ ಶೀಘ್ರ ಕಟ್ಟಡ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳುವ ಚಿಂತನೆ ಇದೆ ಎಂದು ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಆರ್.ಪ್ರಸಾದ್‌ ಹೇಳಿದರು.

    ಪದವಿನಂಗಡಿಯಲ್ಲಿ ಭಾನುವಾರ ಪ್ರಣವ ಸೌಹಾರ್ದ ಸಹಕಾರಿಯ ಒಂಬತ್ತನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    https://chat.whatsapp.com/Ge11n7QCiMj5QyPvCc0H19

    ಯೆಯ್ಯಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಕಚೇರಿ ಸೇರಿದಂತೆ ವಾಮಂಜೂರು, ಬೆಂಗ್ರೆ, ಎಡಪದವು, ಪುತ್ತೂರು, ಸುಳ್ಯ, ಮೈಸೂರು ಮತ್ತು ಕುಶಾಲನಗರ ಸೇರಿ ಒಟ್ಟು ಎಂಟು ಶಾಖೆಗಳನ್ನು ಪ್ರಣವ ಸಹಕಾರಿ ಸಂಸ್ಥೆ ಹೊಂದಿದೆ. ಸಂಸ್ಥೆಯು ತನ್ನ ಸೇವಾತತ್ಪರತೆ, ನಿಯಮಬದ್ಧ ಆಡಳಿತದ ಪರಿಣಾಮ ನಿರಂತರ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಶಾಖೆ ತೆರೆಯುವ ಕಾರ್ಯ ಪ್ರಗತಿಯಲ್ಲಿದ್ದು, ಗ್ರಾಹಕರ ಅನುಕೂಲಕ್ಕಾಗಿ ಮುಂದಿನ ಮೂರು ತಿಂಗಳೊಳಗೆ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್ ಕಾರ್ಯಗತಗೊಳಿಸುವ ಲಕ್ಷ್ಯ ಹೊಂದಲಾಗಿದೆ. ಪ್ರಸಕ್ತ ವರ್ಷ 17 ಕೋಟಿ ರೂ. ಸಾಲ ವಿತರಿಸುವ ಗುರಿ ಇದ್ದು, ಈ ವರ್ಷ ಆಗಸ್ಟ್‌ ಒಳಗೆ ಎಂಟು ಕೋಟಿ ರೂ. ಸಾಲ ನೀಡಲಾಗಿದೆ. ಈ ವರ್ಷ ಒಂದು ಕೋಟಿ ರೂ. ಲಾಭದ ನಿರೀಕ್ಷೆಯನ್ನೂ ಹೊಂದಲಾಗಿದೆ ಎಂದು ಹೇಳಿದರು.

    51 ಲಕ್ಷ ರೂ. ಲಾಭ, 10 ಶೇ. ಡಿವಿಡೆಂಡ್‌

    ಆರ್ಥಿಕ ವರ್ಷದಲ್ಲಿ 51 ಲಕ್ಷ ರೂ. ಲಾಭ ಹೊಂದಲಾಗಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್‌ ನೀಡಲಾಗುವುದು ಎಂದು ಜಿ.ಆರ್‌.ಪ್ರಸಾದ್‌ ಹೇಳಿದರು. ಲಾಕ್‌ಡೌನ್‌ ಅವಧಿಯಲ್ಲಿ ನಮ್ಮ ಸೇವೆ ಗ್ರಾಹಕ ಸ್ನೇಹಿಯಾಗಿದ್ದು, ಸಂಸ್ಥೆಯ ಸಿಬ್ಬಂದಿಯ ಕಾರ್ಯವೈಖರಿ ಶ್ಲಾಘನೆಗೆ ಪಾತ್ರವಾಗಿತ್ತು. 6000 ಸದಸ್ಯರ ರೂಪಾಯಿ ರೂ.150 ಲಕ್ಷ ಪಾಲು ಬಂಡವಾಳ ಮತ್ತು 113 ಲಕ್ಷ ವಿವಿಧ ನಿಧಿ ಕ್ರೋಢೀಕರಣವಾಗಿದೆ ಎಂದರು.

    ಅನಾರೋಗ್ಯ ಪೀಡಿತ ಮಹಾಬಲ ಶೆಟ್ಟಿಗಾರ್‌ ಅವರಿಗೆ ಕಾರ್ಯಕ್ರಮದಲ್ಲಿಸಹಾಯಧನ ನೀಡಲಾಯಿತು.  ಸಮಾಜಸೇವೆಯಲ್ಲಿ ಉತ್ತಮ ರೀತಿಯಲ್ಲಿ ತೊಡಗಿಸಿಕೊಂಡ ಕಾರ್ಪೊರೇಟರ್‌ ಸಂಗೀತಾ ಆರ್.ನಾಯಕ್ ಮತ್ತು ನಿವೃತ್ತ ಸೈನಿಕ ಹಾಗೂ ಪ್ರಸ್ತುತ ಸಾವಯವ ಕೃಷಿಕ ರಮೇಶ್ ನೂಜಿಪ್ಪಾಡಿ ಅವರನ್ನು ಗೌರವಿಸಲಾಯಿತು. ಉತ್ತಮ ಪಿಗ್ಮಿ ಕಲೆಕ್ಟರ್ ಶ್ವೇತಾ ಕಾಮತ್ ಅವರನ್ನೂ ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ್‌ ಜಿ.ಪೈ, ನಿರ್ದೇಶಕರಾದ ರವಿಶಂಕರ್‌ ಪಿ.ಎನ್‌., ರವೀಂದ್ರನಾಥ್‌ ಪಿ., ಎಚ್‌.ಸುಬ್ರಹ್ಮಣ್ಯ ಭಟ್‌, ಬಿ.ಪದ್ಮರಾಜ ಬಲ್ಲಾಳ್‌, ಸೋಮಪ್ಪ ನಾಯಕ್‌, ದಯಾಸಾಗರ್‌ ಪೂಂಜ, ಭಗವಾನ್‌ದಾಸ್‌ ಅಡ್ಯಂತಾಯ, ಮೀರಾ ಕರ್ಕೇರ, ಜಯಲಕ್ಷ್ಮೀ ಚಂದ್ರಹಾಸ್‌, ವೃತ್ತಿಪರ ನಿರ್ದೇಶಕರಾದ ಕೃಷ್ಣ ಕಾಮತ್‌, ಸಿಎ ಮಮತಾ ರಾವ್‌, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ವೈ.ಶೆಟ್ಟಿಗಾರ್‌ ಉಪಸ್ಥಿತರಿದ್ದರು.

    ಸಭೆಯ ಆರಂಭಕ್ಕೆ ಮೊದಲು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಕೃಷ್ಣ ಕಾಮತ್‌ ಸನ್ಮಾನಿತರ ವಿವರ ಒದಗಿಸಿದರು. ಉತ್ತಮ ಶಾಖೆ ಎಂಬ ಹಿರಿಮೆಗೆ ಪಾತ್ರವಾದ ಪುತ್ತೂರು ಶಾಖೆಯ ಸಾಧನೆಯ ಬಗ್ಗೆ ಸೋಮಪ್ಪ ನಾಯಕ್‌ ವಿವರ ಒದಗಿಸಿದರು. ನಿರ್ದೇಶಕ ಸುಬ್ರಹ್ಮಣ್ಯ ಭಟ್‌ ವಂದಿಸಿದರು. ಬಾಲಕೃಷ್ಣ ಪಚ್ಚನಾಡಿ ಕಾರ್ಯಕ್ರಮ ನಿರ್ವಹಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Cooperative Cooperative Department Cooperative Registrar Pranava Souharda Sahakari Sahakara Spandana Spandana Spandana Cooperative Spandana NEws
    Previous Articleಉಡುಪಿ ಕಥೋಲಿಕ್‌ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ 17% ಡಿವಿಡೆಂಡ್
    Next Article ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸುರತ್ಕಲ್ ಶಾಖೆಯ ನವೀಕೃತ ಕಛೇರಿ ಉದ್ಘಾಟನೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.