- ನವದೆಹಲಿ: ಮೊಬೈಲ್ ನಂಬರ್ ಗಳಿಗೆ ಬ್ಯಾಂಕ್ ಹಾಗೂ ಇತರ ಕಡೆಗಳಿಂದ ಬರುವ ಒನ್ ಟೈಮ್ ಪಾಸ್ ವರ್ಡ್(ಒಟಿಪಿ) ಶೀಘ್ರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಸೆಪ್ಟೆಂಬರ್ ಒಂದರಿಂದಲೇ ಅಂದರೆ ಮುಂದಿನ ಭಾನುವಾರದಿಂದಲೇ ಇದು ಜಾರಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಇದು ಜಾರಿಯಾದಲ್ಲಿ ಮುಂದೆ ಲಾಗ್‌ಇನ್, ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿ ಕೊಂಚಮಟ್ಟಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಸ್ಪಾಮ್ ಮೆಸೇಜ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಹೊರಡಿಸಿದ್ದ ಆದೇಶ ಸೆ.1ರಿಂದ ಜಾರಿಯಾಗಲಿದೆ. ಮೊಬೈಲ್ ಕಂಪೆನಿಗಳ ಜತೆ ನೋಂದಣಿ ಮಾಡಿಕೊಂಡಿಲ್ಲದಿದ್ದರೆ, ಅಂತಹ ಕಂಪೆನಿಗಳ ಮೆಸೇಜನ್ನು ನಿರ್ಬಂಧಿಸುವಂತೆ ಟ್ರಾಯ್ ಸೂಚಿಸಿತ್ತು. ಆದರೆ ಕಂಪನಿಗಳು ಇನ್ನೂ ಸಹ ತಮ್ಮ ಮೆಸೇಜ್‌ನ ಶೈಲಿಯನ್ನು ಮೊಬೈಲ್ ನೆಟ್ವರ್ಕ್ ಕಂಪೆನಿಗಳಿಗೆ ನೀಡಿ ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಇಂತಹ ಮೆಸೇಜ್‌ಗಳಿಗೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com