Close Menu
    Top News

    ಎಸ್.ಕೆ ಗೋಲ್ಡ್ ಸ್ಮಿತ್ಸ್, ಒಡಿಯೂರು, ಕಾವೂರು ಸೊಸೈಟಿಗಳಿಗೆ ಪುರಸ್ಕಾರ

    November 17, 2026

    ಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉತ್ತಮ ಹೆಸರು ಪಡೆಯಲಿ

    November 16, 2026

    ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆ ಮುಂಚೂಣಿ

    November 16, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಸ್.ಕೆ ಗೋಲ್ಡ್ ಸ್ಮಿತ್ಸ್, ಒಡಿಯೂರು, ಕಾವೂರು ಸೊಸೈಟಿಗಳಿಗೆ ಪುರಸ್ಕಾರ
    News

    ಎಸ್.ಕೆ ಗೋಲ್ಡ್ ಸ್ಮಿತ್ಸ್, ಒಡಿಯೂರು, ಕಾವೂರು ಸೊಸೈಟಿಗಳಿಗೆ ಪುರಸ್ಕಾರ

    adminBy adminNovember 17, 2026

    ನವೆಂಬರ್ 20ರಂದು ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ ಮಾಣಿಕ್ಯ, ಉತ್ತಮ ಸಹಕಾರ ಸಂಘ ಪ್ರಶಸ್ತಿ ಪ್ರದಾನ

    ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ನೀಡಲಾಗುವ ‘ಸಹಕಾರ ಮಾಣಿಕ್ಯ’ ಮತ್ತು ಉತ್ತಮ ಸಹಕಾರ ಸಂಘ ಪ್ರಶಸ್ತಿಗೆ ಸಹಕಾರ ಸಂಘಗಳನ್ನು ಆಯ್ಕೆ ಮಾಡಲಾಗಿದ್ದು ನವೆಂಬರ್ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

    https://chat.whatsapp.com/FCEnlTkAKCC0MGPhXtX4i4
    ಉಭಯ ಜಿಲ್ಲೆಗಳಿಂದ ತಲಾ ಒಂದರಂತೆ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ‘ಸಹಕಾರ ಮಾಣಿಕ್ಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ದ.ಕ. ಜಿಲ್ಲೆಯಿಂದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪುತ್ತೂರು, ಉಡುಪಿ ಜಿಲ್ಲೆಯಿಂದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಕುಂದಾಪುರ ಹಾಗೂ ವಿವಿಧೋದ್ದೇಶ ಸಹಕಾರ ಸಂಘದಿಂದ ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಮಂಗಳೂರು ಮತ್ತು ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಪ್ರಶಸ್ತಿಗೆ ಆಯ್ಕೆಯಾಗಿವೆ.
    ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ದ.ಕ. ಜಿಲ್ಲೆಯಿಂದ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘ ಮಂಗಳೂರು, ಉಡುಪಿ ಜಿಲ್ಲೆಯಿಂದ ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘ ಉಡುಪಿ, ಉತ್ತಮ ಮಹಿಳಾ ಸಹಕಾರಿ ಸಂಘ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಪುತ್ತೂರು ಮಹಿಳಾ ಸಹಕಾರಿ ಸಂಘ ಪುತ್ತೂರು, ಉಡುಪಿ ಜಿಲ್ಲೆಯಿಂದ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರಿ ಸಂಘ ಕುಂದಾಪುರ, ಉತ್ತಮ ಮೀನುಗಾರಿಕಾ ಸಹಕಾರಿ ಸಂಘ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಮಂಗಳೂರು, ಉಡುಪಿ ಜಿಲ್ಲೆಯಿಂದ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉಡುಪಿ ಆಯ್ಕೆಯಾಗಿದೆ.


    ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಬಂಟ್ವಾಳ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಉಡುಪಿ ಜಿಲ್ಲೆಯಿಂದ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆಯ್ಕೆಯಾಗಿದೆ. ಉತ್ತಮ ವಿವಿಧೋದ್ದೇಶ ಸಹಕಾರಿ ಸಂಘ ಪ್ರಶಸ್ತಿಗೆ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಪುತ್ತೂರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು, ಕುಂಬಾರರ ಗುಡಿ ಕೈಗಾರಿಕಾ ಸಂಘ ಪುತ್ತೂರು, ಸಜಿಪ ಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ಬಂಟ್ವಾಳ, ದಕ್ಷಿಣ ಕನ್ನಡ ಸಗಟು ಮಾರಾಟ ಸಂಘ ಮಂಗಳೂರು, ದಕ್ಷಿಣ ಕನ್ನಡ ಜೇನು ವ್ಯವಸಾಯ ಸಹಕಾರಿ ಸಂಘ ಪುತ್ತೂರು ಹಾಗೂ ಉತ್ತಮ ಟಿ.ಎ.ಪಿ.ಸಿ.ಎಂ.ಎಸ್ ಪ್ರಶಸ್ತಿಗೆ ಕಾರ್ಕಳ ಟಿ.ಎ.ಪಿ.ಸಿ.ಎಂ.ಎಸ್. ಆಯ್ಕೆಯಾಗಿದೆ.
    ಶತಮಾನೋತ್ಸವ ಪೂರೈಸಿದ ಸಹಕಾರ ಸಂಘ ಪ್ರಶಸ್ತಿಗೆ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಮಂಗಳೂರು ಹಾಗೂ ಉತ್ತಮ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿಗೆ ಪದ್ಮುಂಜ ಹಾಲು ಉತ್ಪಾದಕ ಸಹಕಾರ ಸಂಘ ಬೆಳ್ತಂಗಡಿ ಮತ್ತು ಬೆಳಪು ಹಾಲು ಉತ್ಪಾದಕ ಸಹಕಾರ ಸಂಘ ಉಡುಪಿ ಆಯ್ಕೆಗೊಂಡಿದೆ. ಉತ್ತಮ ನವೋದಯ ಸ್ವಸಹಾಯ ಗುಂಪುಗಳ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಉಜ್ವಲ ನವೋದಯ ಸ್ವಸಹಾಯ ಗುಂಪು ಮಂಗಳೂರು, ಉಡುಪಿ ಜಿಲ್ಲೆಯಿಂದ ಸಿಂಚನ ನವೋದಯ ಸ್ವಸಹಾಯ ಗುಂಪು ಕುಂದಾಪುರ ಆಯ್ಕೆಯಾಗಿದೆ.

    ಮೂಡುಬಿದಿರೆ ಸಹಕಾರ ತರಬೇತಿ ಕೇಂದ್ರದ ರ್ಯಾಂಕ್ ವಿಜೇತರಾದ ನಿಖಿತಾ ಬಂಟ್ವಾಳ ಹಾಗೂ ಯಜ್ಞಾಕ್ಷಿ ಬಂಟ್ವಾಳ ಮತ್ತುಪತ್ರಿಕಾ ರಂಗದ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಮಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷಪಿ. ಬಿ. ಹರೀಶ್ ರೈ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Co Operative ministry Cooperative Cooperative Department Cooperative Registrar Kavooru Vyavasay Seva Sahakari Sangha Odiyuru Shree Vividhoddesha Co Operative Society Sahakara Manikya award SK Goldsmiths Industrial Co Operative Society
    Previous Articleಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉತ್ತಮ ಹೆಸರು ಪಡೆಯಲಿ

    Related Posts

    ಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉತ್ತಮ ಹೆಸರು ಪಡೆಯಲಿ

    November 16, 2026

    ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆ ಮುಂಚೂಣಿ

    November 16, 2026

    ಕೃಷಿ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ

    November 14, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಎಸ್.ಕೆ ಗೋಲ್ಡ್ ಸ್ಮಿತ್ಸ್, ಒಡಿಯೂರು, ಕಾವೂರು ಸೊಸೈಟಿಗಳಿಗೆ ಪುರಸ್ಕಾರ

    November 17, 2026

    ಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉತ್ತಮ ಹೆಸರು ಪಡೆಯಲಿ

    November 16, 2026

    ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆ ಮುಂಚೂಣಿ

    November 16, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.