Close Menu
    Top News

    ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ

    November 13, 2026

    ಜಾಕೆ ಮಾಧವ ಗೌಡ, ಪದ್ಮನಾಭ ಕೊಟ್ಟಾರಿ, ಎಚ್ ‌ವಸಂತ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ

    November 13, 2026

    ಎಂಸಿಸಿ ಬ್ಯಾಂಕಿನ ಮೂಡುಬಿದಿರೆ ಶಾಖೆ ನವೀನ ಸೌಲಭ್ಯಗಳೊಂದಿಗೆ ನೂತನ ಆವರಣಕ್ಕೆ ಸ್ಥಳಾಂತರ

    November 13, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ
    News

    ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ

    adminBy adminNovember 13, 2026

    ಹಳೆಯಂಗಡಿ: ಸಹಕಾರ ಕ್ಷೇತ್ರದಲ್ಲಿ ಬದ್ಧತೆ, ಪ್ರಾಮಾಣಿಕತೆ, ದಕ್ಷ ಆಡಳಿತ ಹಾಗೂ ದೂರದೃಷ್ಟಿಯ ಕಾರ್ಯಯೋಜನೆಯ ಮೂಲಕ ವಿಶಿಷ್ಟ ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸಿರುವ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾಡ್ ಅವರು ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    https://chat.whatsapp.com/FCEnlTkAKCC0MGPhXtX4i4
    ಮೂಲ್ಕಿ ತಾಲೂಕಿನ ಹಳೆಯಂಗಡಿ ಪರಿಸರದ ಸಹಕಾರಿ ಭೀಷ್ಮ ದಿವಂಗತ ಎಚ್. ನಾರಾಯಣ ಸನಿಲ್ ಅವರ ಮಾರ್ಗದರ್ಶನದಲ್ಲಿ ಬೆಳೆದು 1995ರಲ್ಲಿ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಸುಧೀರ್ಘವಾಗಿ 31 ವರ್ಷಗಳಿಂದ ನಿರ್ದೇಶಕರಾಗಿ ದಿನಾಂಕ 20-05-2021ರಂದು ಹಳೆಯಂಗಡಿಯಲ್ಲಿ ಪ್ರಿಯದರ್ಶಿನಿ ಸಹಕಾರ ಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಅತ್ಯಲ್ಪ ಅವಧಿಯಲ್ಲಿಯೇ ಉಭಯ ಜಿಲ್ಲೆಗಳಲ್ಲಿ ಗುರುತಿಸಲ್ಪಟ್ಟ ಪ್ರಗತಿಪರ ಸಹಕಾರಿ ಸಂಸ್ಥೆಯಾಗಿ ರೂಪಿಸುವಲ್ಲಿ ವಸಂತ ಬೆರ್ನಾಡ್‌ ಅವರ ನಾಯಕತ್ವವನ್ನು ಗುರುತಿಸಿ ಈ ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.


    ಕೋವಿಡ್-19ರ ಸಂಕಷ್ಟದ ನಡುವೆಯೂ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಮೊದಲ ವರ್ಷದಲ್ಲಿಯೇ ರೂ. 7.30 ಕೋಟಿ ನಿಕ್ಷೇಪ ಸಂಗ್ರಹಿಸಿ, ರೂ. 58 ಕೋಟಿ ವಾರ್ಷಿಕ ವಹಿವಾಟು ನಡೆಸಿ ಲಾಭದಾಯಕವಾಗಿ ಸಂಘವನ್ನು ಮುನ್ನಡೆಸುವಲ್ಲಿ ವಸಂತ ಬೆರ್ನಾಡ್‌ ಅವರ ನಾಯಕತ್ವ ಮುಂಚೂಣಿಯಲ್ಲಿತ್ತು. ಪಡುಬಿದ್ರೆ, ಕಿನ್ನಿಗೋಳಿ, ಮೂಡುಬಿದಿರೆ ಹಾಗೂ ಉಡುಪಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಶಾಖಾ ಜಾಲವನ್ನು ವಿಸ್ತರಿಸಿ, ವರದಿ ವರ್ಷ 2025-26ರಲ್ಲಿ ರೂ. 38.33 ಕೋಟಿ ನಿಕ್ಷೇಪ, ರೂ. 484.78 ಕೋಟಿ ವಾರ್ಷಿಕ ವಹಿವಾಟು ಹಾಗೂ ರೂ. 54,28,641.10 ನಿವ್ವಳ ಲಾಭ ಗಳಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಅವರ ಸಮರ್ಥ ಆಡಳಿತಕ್ಕೆ ಸಾಕ್ಷಿಯಾಗಿದೆ.
    ಪ್ರಿಯದರ್ಶಿನಿ ಸಹಕಾರ ಸಂಘವು ಸಂಘವು ಸತತವಾಗಿ ‘ಎ’ ಶ್ರೇಣಿಯ ಲೆಕ್ಕಪರಿಶೋಧನಾ ವರ್ಗೀಕರಣವನ್ನು ಪಡೆದುಕೊಂಡಿರುವುದಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 2023-24, 2024-25 ಹಾಗೂ 2025-26ನೇ ಸಾಲಿನ ವಿಶೇಷ ಸಾಧನಾ ಪ್ರಶಸ್ತಿಗಳನ್ನು ಮತ್ತು 72ನೇ ಅಖಿಲ ಭಾರತ ಸಹಕಾರ ಸಪ್ತಾಹ–2025ರ ದ. ಕ ಜಿಲ್ಲಾ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿಯನ್ನು ಗಳಿಸಿದೆ. ಕೇವಲ ಆರ್ಥಿಕ ಪ್ರಗತಿಗೆ ಸೀಮಿತವಾಗದೆ, 75 ಸ್ವಸಹಾಯ ಗುಂಪುಗಳ ಮೂಲಕ 750 ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆಯ ಅವಕಾಶ ಕಲ್ಪಿಸಿರುವುದು, ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಿರುವುದು, ಇ-ಸ್ಟಾಂಪ್ ಸೇವೆ ಹಾಗೂ ಆಧುನಿಕ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಜನಸ್ನೇಹಿ ಸಹಕಾರದ ಮಾದರಿಯಾಗಿದೆ.
    ವಿಶೇಷವಾಗಿ, ಸಂಘದ ಸಿಬ್ಬಂದಿ ನೇಮಕಾತಿಯಲ್ಲಿ ವಿವಿಧ ಜಾತಿ, ಧರ್ಮ ಹಾಗೂ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಆಶಯವನ್ನು ಕಾರ್ಯರೂಪಕ್ಕೆ ತಂದಿರುವ ವಸಂತ ಬೆರ್ನಾಡ್‌ ಅವರ ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯ. ಸಹಕಾರಿ ಸಂಸ್ಥೆಯ ಬೆಳವಣಿಗೆಯೊಂದಿಗೆ ಸದಸ್ಯರ ಆರ್ಥಿಕ ಸಬಲೀಕರಣ, ಉದ್ಯೋಗ ಸೃಷ್ಟಿ, ಮಹಿಳಾ ಸ್ವಾವಲಂಬನೆ ಹಾಗೂ ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಅವರ ಸೇವೆ ಸಹಕಾರಿ ಚಳವಳಿಗೆ ಪ್ರೇರಣಾದಾಯಕವಾಗಿದೆ.

    Banking Co Operative ministry Cooperative Cooperative Department Cooperative Registrar H Vasanath Bernad sahakara ratna
    Previous Articleಜಾಕೆ ಮಾಧವ ಗೌಡ, ಪದ್ಮನಾಭ ಕೊಟ್ಟಾರಿ, ಎಚ್ ‌ವಸಂತ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ

    Related Posts

    ಜಾಕೆ ಮಾಧವ ಗೌಡ, ಪದ್ಮನಾಭ ಕೊಟ್ಟಾರಿ, ಎಚ್ ‌ವಸಂತ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ

    November 13, 2026

    ಎಂಸಿಸಿ ಬ್ಯಾಂಕಿನ ಮೂಡುಬಿದಿರೆ ಶಾಖೆ ನವೀನ ಸೌಲಭ್ಯಗಳೊಂದಿಗೆ ನೂತನ ಆವರಣಕ್ಕೆ ಸ್ಥಳಾಂತರ

    November 13, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿ ಅವಿರೋಧ ಆಯ್ಕೆ

    November 13, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ

    November 13, 2026

    ಜಾಕೆ ಮಾಧವ ಗೌಡ, ಪದ್ಮನಾಭ ಕೊಟ್ಟಾರಿ, ಎಚ್ ‌ವಸಂತ ಬೆರ್ನಾಡ್‌ರಿಗೆ ಸಹಕಾರ ರತ್ನ ಪುರಸ್ಕಾರ

    November 13, 2026

    ಎಂಸಿಸಿ ಬ್ಯಾಂಕಿನ ಮೂಡುಬಿದಿರೆ ಶಾಖೆ ನವೀನ ಸೌಲಭ್ಯಗಳೊಂದಿಗೆ ನೂತನ ಆವರಣಕ್ಕೆ ಸ್ಥಳಾಂತರ

    November 13, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.