ಮೈಸೂರು: ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಜಿ. ನಿರಂಜನ್ ಮತ್ತು ಉಪಾಧ್ಯಕ್ಷರಾಗಿ ಎಂ.ರಾಮಕೃಷ್ಣ ಆಯ್ಕೆಯಾಗಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಬ್ಯಾಂಕಿನಲ್ಲಿ ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿ.ನಿರಂಜನ್ ಅವರನ್ನು ಅಧ್ಯಕ್ಷ ಹಾಗೂ ಎಂ ರಾಮಕೃಷ್ಣ ಅವರನ್ನು ಉಪಾಧ್ಯಕ್ಷರನ್ನಾಗಿ ಆರಿಸಲಾಯಿತು. ಚುನಾವಣಾ ಪ್ರಕ್ರಿಯೆಯ ವೇಳೆ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರಾದ ಜೆ.ಯೋಗೇಶ್, ಉಪಾಧ್ಯಕ್ಷರಾದ ಟಿ.ರವಿ, ನಿರ್ದೇಶಕರುಗಳಾದ ಎಸ್.ಬಿ.ಎಂ ಮಂಜು, ಎನ್.ಯೋಗಾನಂದ, ಹೆಚ್. ಹರೀಶ್ ಕುಮಾರ್, ಆರ್.ರವಿಕುಮಾರ್, ಆರ್.ಸೋಮಣ್ಣ, ಕೆ.ಗಿರೀಶ್, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಹರ್ಷಿತ್ ಗೌಡ ಅವರು ಉಪಸ್ಥಿತರಿದ್ದು ನೂತನ ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಿದರು.










