ಚಾಲಕರ ಮಾಲೀಕತ್ವದ ಸಹಕಾರಿ ಮಾದರಿಯನ್ನು ಬಲಪಡಿಸುವ ಕಾರ್ಯಯೋಜನೆಗೆ ಒತ್ತು
ನವದೆಹಲಿ: ಭಾರತ್ ಟ್ಯಾಕ್ಸಿ ತನ್ನ ಮೊದಲ ವಾರ್ಷಿಕ ಸಾಮಾನ್ಯ ಸಭೆ ನಡೆದಿದ್ದು, ಸಹಕಾರಿಯ ಇದುವರೆಗಿನ ಪ್ರಗತಿಯನ್ನು ಪರಿಶೀಲಿಸುವುದರೊಂದಿಗೆ ಮುಂದಿನ ಅವಧಿಯ ಬೆಳವಣಿಗೆಗೆ ಕಾರ್ಯಯೋಜನೆ ರೂಪಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಸಭೆಯಲ್ಲಿ ಭಾರತ್ ಟ್ಯಾಕ್ಸಿ ಅಧ್ಯಕ್ಷ ಜಯೇನ್ ಮೆಹ್ತಾ, ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಬನ್ಸಲ್, ಉಪಾಧ್ಯಕ್ಷ ರೋಹಿತ್ ಗುಪ್ತಾ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. NAFED, IFFCO, KRIBHCO, NDDB, NCEL ಮತ್ತು NABARD ಸೇರಿದಂತೆ ಹಲವು ಪ್ರಮುಖ ಸಹಕಾರಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ದೆಹಲಿ ಸಂಚಾರ ಪೊಲೀಸರ ವಿಶೇಷ ಆಯುಕ್ತ ಅಜಯ್ ಚೌಧರಿ ಹಾಗೂ ಭಾರತ್ ಟ್ಯಾಕ್ಸಿಯ ಸಿಇಒ ಕರ್ನಲ್ ಹಿಮಾಂಶು ಪೂರಕ ಮಾಹಿತಿಗಳನ್ನು ನೀಡಿದರು. ವಾರ್ಷಿಕ ವರದಿ, ಹಣಕಾಸು ಹೇಳಿಕೆಗಳು ಹಾಗೂ ಸಹಕಾರಿಯ ಇದುವರೆಗಿನ ಪ್ರಗತಿಯನ್ನು ಪರಿಶೀಲಿಸಲಾಯಿತು. ಮುಂದಿನ ಒಂದು ವರ್ಷದ ಕಾರ್ಯಯೋಜನೆ, ಆದ್ಯತೆಗಳು, ಜವಾಬ್ದಾರಿಗಳು ಮತ್ತು ಸಾಧಿಸಬೇಕಾದ ಗುರಿಗಳ ಕುರಿತು ಚರ್ಚೆ ನಡೆಯಿತು.

ಚಾಲಕರೇ ಮಾಲೀಕರಾಗಿರುವ ಸಹಕಾರಿ ಮಾದರಿಯ ಮೇಲೆ ಭಾರತ್ ಟ್ಯಾಕ್ಸಿ ಕಾರ್ಯನಿರ್ವಹಿಸುತ್ತಿದ್ದು, ಚಾಲಕರಿಗೆ ಮಾಲೀಕತ್ವದಲ್ಲಿ ಪಾಲು, ಸಾಮೂಹಿಕ ಭಾಗವಹಿಸುವಿಕೆ ಮತ್ತು ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಗೆ ಒತ್ತು ನೀಡುತ್ತಿದೆ. ಮೊದಲ ವಾರ್ಷಿಕ ಮಹಾಸಭೆಯು ಭಾರತ್ ಟ್ಯಾಕ್ಸಿಯ ಮುಂದಿನ ಹಂತದ ಬೆಳವಣಿಗೆಗೆ ಮಹತ್ವದ ಮೈಲಿಗಲ್ಲಾಗಿದೆ. ಹಂಚಿಕೆಯ ಮಾಲೀಕತ್ವ, ಸಾಮೂಹಿಕ ಬದ್ಧತೆ ಮತ್ತು ಪರಸ್ಪರ ನಂಬಿಕೆ ಆಧಾರದಲ್ಲಿ ಸಹಕಾರಿಯನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯಗೊಂಡಿತು.











