ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದಕ್ಷಿಣಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಮಂಗಳೂರು ಹಾಗೂ ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘ ಸುರತ್ಕಲ್ ಇದರ ಜಂಟಿ ಸಹಭಾಗಿತ್ವದಲ್ಲಿ ಅಕ್ಟೋಬರ್ 4ರಂದು ಕ್ಲಸ್ಟರ್ ತರಬೇತಿ ಹಮ್ಮಿಕೊಳ್ಳಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಸಹಕಾರಿ ಸಂಘದಲ್ಲಿ ಸಿಬ್ಬಂದಿಗಳ ಹಾಗೂ ನಿರ್ದೇಶಕರ ಕಾರ್ಯತತ್ಪರತೆ ಕುರಿತು ನಡೆಯುವ ತರಬೇತಿಯು ಕುಲಾಲ ಭವನ, ತಡಂಬೈಲ್ ಸುರತ್ಕಲ್ (ಸರ್ವಜ್ಞ ಮಿನಿ ಹಾಲ್) ನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘ ಸುರತ್ಕಲ್ ಇದರ ಅಧ್ಯಕ್ಷರಾದ ನಾಗೇಶ್ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ದ.ಕ.ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮೂಡುಬಿದಿರೆ ಕೆಐಸಿಎಂ ಉಪನ್ಯಾಸಕರಾದ ಬಿಂದು ನಾಯರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಸಂಘದ ಉಪಾಧ್ಯಕ್ಷರಾದ ಮಾಧವ ಬಂಗೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮೂಲ್ಯ, ನಿರ್ದೇಶಕರಾದ ಮುದ್ದು ಎಸ್.ಮೂಲ್ಯ, ಮೋಹನ್ ಐ ಮೂಲ್ಯ, ಗಂಗಾಧರ್ ಬಂಜನ್, ಭೋಜ ಬಂಗೇರ, ಮಮತಾ, ಉಷಾ ಆರ್.ಬಂಗೇರ, ಲೀಲಾ ಬಂಜನ್, ವಾಸು ಬಂಜನ್, ದಯಾನಂದ ಪಡ್ರೆ, ಬಾಬುಚಂದ್ರ ಐ., ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಮತ್ತು ಸಿಬ್ಬಂದಿಯೇತರ ವರ್ಗದವರು ಭಾಗವಹಿಸಲಿದ್ದಾರೆ.


