Close Menu
    Top News

    ಎಸ್.ಕೆ ಗೋಲ್ಡ್ ಸ್ಮಿತ್ಸ್, ಒಡಿಯೂರು, ಕಾವೂರು ಸೊಸೈಟಿಗಳಿಗೆ ಪುರಸ್ಕಾರ

    November 17, 2026

    ಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉತ್ತಮ ಹೆಸರು ಪಡೆಯಲಿ

    November 16, 2026

    ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆ ಮುಂಚೂಣಿ

    November 16, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ರೈತರು, ಬಡವರ ಸೇವೆಗೆ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬದ್ಧ
    News

    ರೈತರು, ಬಡವರ ಸೇವೆಗೆ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬದ್ಧ

    adminBy adminSeptember 28, 2026

    ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವಾರ್ಷಿಕ ಮಹಾಸಭೆಯಲ್ಲಿ ಬೆನಕನಕಟ್ಟೆ ಯುವರಾಜ್ ಅಭಿಪ್ರಾಯ

    ಚಿಕ್ಕನಾಯಕನಹಳ್ಳಿ: ಸಹಕಾರ ಸಂಘಗಳು ಕೇವಲ ಸಾಲ ನೀಡುವ ಸಂಸ್ಥೆಗಳಾಗದೆ ರೈತರು, ಬಡವರು, ಶ್ರಮಿಕರು ಹಾಗೂ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನೈಜ ಸೇವೆ ಸಲ್ಲಿಸಬೇಕು ಎಂದು ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೆನಕನಕಟ್ಟೆ ಯುವರಾಜ್ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಕುಪ್ಪೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ 50ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ತಾಲೂಕಿನಲ್ಲಿಯೇ ಸಂಘವನ್ನು ಮೊದಲಿಗೆ ಗಣಕೀಕರಣಗೊಳಿಸಲಾಗಿದ್ದು, ಇದರಿಂದ ಆಡಳಿತದಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ಹೆಚ್ಚಾಗಿ ಸದಸ್ಯರಿಗೆ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಅನುಕೂಲವಾಗಿದೆ ಎಂದು ತಿಳಿಸಿದರು.


    ಸಂಘದ ಅಭಿವೃದ್ಧಿಯಲ್ಲಿ ಹಿರಿಯರು ಹಾಗೂ ಮಾರ್ಗದರ್ಶಕರ ಪಾತ್ರ ಮಹತ್ವದ್ದಾಗಿದೆ. ಸಂಘದ ಸಂಸ್ಥಾಪಕ ಅಧ್ಯಕ್ಷ ಶಂಕರಲಿಂಗಪ್ಪ ಅವರು ಕುಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಲು ಪ್ರಮುಖ ಕಾರಣರಾಗಿದ್ದರು. ರೈತರು ಹಾಗೂ ಹಾಲು ಉತ್ಪಾದಕರಿಗೆ ಅವರು ನೀಡಿದ ಮಾರ್ಗದರ್ಶನ ಮತ್ತು ಸೇವೆಯನ್ನು ಸದಾ ಸ್ಮರಿಸುವುದಾಗಿ ಹೇಳಿದರು.
    ಸಂಘದ ಮಾಜಿ ಅಧ್ಯಕ್ಷ ಅರಳೀಕೆರೆ ಉಮೇಶ್ ಮಾತನಾಡಿ, ಹಲವು ದೊಡ್ಡ ನಾಯಕರ ಸಹಕಾರ ಸಂಘಗಳನ್ನು ಗಮನಿಸಿದಾಗ ಕೆಲವೊಮ್ಮೆ ಭಾಷಣಗಳಲ್ಲಿ ಮಾತ್ರ ದೊಡ್ಡ ಮಾತುಗಳು ಕೇಳಿಬರುತ್ತವೆ. ಆದರೆ ವಾಸ್ತವದಲ್ಲಿ ರೈತರು ಹಾಗೂ ಬಡವರಿಗೆ ಅಗತ್ಯ ನೆರವು ಸಿಗುವುದಿಲ್ಲ. ನಮ್ಮ ಸಂಸ್ಥೆ ಬರೀ ಮಾತುಗಳಿಗೆ ಸೀಮಿತವಾಗದೆ ನೈಜವಾಗಿ ರೈತರು ಹಾಗೂ ಶ್ರಮಿಕರ ನೆರವಿಗೆ ನಿಲ್ಲುತ್ತದೆ ಎಂದರು. ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕಕ್ಕಾಗಿ ಆದ್ಯತೆಯ ಮೇರೆಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ದಾಖಲೆಗಳಲ್ಲಿ ಸಣ್ಣಪುಟ್ಟ ಕೊರತೆಗಳಿದ್ದರೂ ಪರಿಶೀಲಿಸಿ ಮಾನವೀಯ ನೆಲೆಯಲ್ಲಿ ಸ್ಪಂದಿಸುವಂತೆ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
    ನಿರ್ದೇಶಕ ಅಣೇಕಟ್ಟೆ ರಾಕೇಶ್ ಮಾತನಾಡಿ, ಆರಂಭದಲ್ಲಿ ಪಡಿತರ ವಿತರಣೆಯ ಮೂಲಕ ಸೇವೆ ಪ್ರಾರಂಭಿಸಿದ ಸಂಘವು ಇಂದು ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಇನ್ನಷ್ಟು ಸೇವೆಗಳನ್ನು ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.
    ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಶಂಕರಪ್ಪ ಅವರು ಸಂಘದ ಆಡಿಟ್ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಶೈಲಾ, ನಿರ್ದೇಶಕರಾದ ಶಾಂತಕುಮಾರ್, ನಾಗರಾಜ್ ಮಾತನಾಡಿದರು. ಜಯಣ್ಣ, ಅರಳೀಕೆರೆ ಶಶಿಕುಮಾರ್, ಅಂಬಿಕಾ, ಮಹೇಶ್, ಹಾಗೂ ಸಿಬ್ಬಂದಿ ಯತೀಶ್, ತೇಜಾವತಿ, ಪವಿತ್ರ, ಕೃಷ್ಣಮೂರ್ತಿ, ತೇಜಸ್ವಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

    Benakanakatte Yuvaraj Co Operative ministry Cooperative Cooperative Department Cooperative Registrar Kuppuru Prathamika Krushi Patthina Sahakara Sangha
    Previous Articleಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಬಜ್ಪೆ ಶಾಖೆ ಅಕ್ಟೋಬರ್‌ 2ರಂದು ಉದ್ಘಾಟನೆ
    Next Article ದ.ಕ ಜಿಲ್ಲಾ ಸಹಕಾರ ಯೂನಿಯನ್‌ನಿಂದ ವಿಶೇಷ ತರಬೇತಿ ಕಾರ್ಯಾಗಾರ

    Related Posts

    ಎಸ್.ಕೆ ಗೋಲ್ಡ್ ಸ್ಮಿತ್ಸ್, ಒಡಿಯೂರು, ಕಾವೂರು ಸೊಸೈಟಿಗಳಿಗೆ ಪುರಸ್ಕಾರ

    November 17, 2026

    ಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉತ್ತಮ ಹೆಸರು ಪಡೆಯಲಿ

    November 16, 2026

    ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆ ಮುಂಚೂಣಿ

    November 16, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಎಸ್.ಕೆ ಗೋಲ್ಡ್ ಸ್ಮಿತ್ಸ್, ಒಡಿಯೂರು, ಕಾವೂರು ಸೊಸೈಟಿಗಳಿಗೆ ಪುರಸ್ಕಾರ

    November 17, 2026

    ಸಹಕಾರಿ ರಂಗದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉತ್ತಮ ಹೆಸರು ಪಡೆಯಲಿ

    November 16, 2026

    ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆ ಮುಂಚೂಣಿ

    November 16, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.