Close Menu
    Top News

    ನಾಳೆಯೂ ಕೆಲಸ: ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ಸೂಚನೆ

    September 26, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಬಜ್ಪೆ ಶಾಖೆ ಅಕ್ಟೋಬರ್‌ 2ರಂದು ಉದ್ಘಾಟನೆ

    September 26, 2026

    ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 65 %ಬೋನಸ್, 15 % ಡಿವಿಡೆಂಡ್‌ ವಿತರಣೆ

    September 25, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 65 %ಬೋನಸ್, 15 % ಡಿವಿಡೆಂಡ್‌ ವಿತರಣೆ
    News

    ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 65 %ಬೋನಸ್, 15 % ಡಿವಿಡೆಂಡ್‌ ವಿತರಣೆ

    adminBy adminSeptember 25, 2026

    ಕಾರ್ಕಳ: ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ 21ನೇ ವಾರ್ಷಿಕ ಮಹಾಸಭೆ ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಗುರುವಾರ ಸಂಘದ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ಅಧ್ಯಕ್ಷತೆಯಲ್ಲಿ ಜರುಗಿತು.

    https://chat.whatsapp.com/FCEnlTkAKCC0MGPhXtX4i4
    ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘವು ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಕಾಯ್ದುಕೊಂಡಿದ್ದು, ₹3,02,518.51 ಲಾಭ ಗಳಿಕೆಯ ಜೊತೆಗೆ ಪ್ರಸಕ್ತ ವರ್ಷ ಹೈನುಗಾರ ಸದಸ್ಯರಿಗೆ 65% ಬೋನಸ್ ಮತ್ತು 15% ಡಿವಿಡೆಂಡ್‌ ವಿತರಿಸಿದೆ. ನಿರಂತರ ಏರುತ್ತಿರುವ ಹೈನುಗಾರಿಕೆಯ ಖರ್ಚು ವೆಚ್ಚಗಳ ಮಧ್ಯೆಯೂ, ಗುಣಮಟ್ಟದ ಹಾಲಿನ ಉತ್ಪಾದನೆಯ ಸಾಧನೆ ತೋರಿಸುತ್ತಿರುವ ಹೈನುಗಾರರಿಗೆ ಸರಕಾರದ ಸಹಾಯಧನ ಪ್ರತಿ ಲೀಟರ್‌ಗೆ ₹5 ಹೆಚ್ಚಿಸಬೇಕು ಮತ್ತು ದುಬಾರಿ ಆಗಿರುವ ನಂದಿನಿ ಪಶುಆಹಾರದ ದರದಲ್ಲಿ ಕೆಜಿಗೆ ಕನಿಷ್ಠ ₹5 ದರದಲ್ಲಿ ಸಬ್ಸಿಡಿ ಒದಗಿಸುವಂತೆ ರಾಜ್ಯ ಸರಕಾರ ಮತ್ತು ಒಕ್ಕೂಟ ಹಾಗೂ ಹಾಲು ಮಹಾಮಂಡಳಿಗೆ ಒತ್ತಾಯಿಸಿ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.


    ಸಂಘದ ಉಪಾಧ್ಯಕ್ಷ ರಾಯಲ್ ನೊರೋನ್ನಾ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಶೆಟ್ಟಿ 2024 -25ನೇ ಸಾಲಿನ ಮಹಾಸಭೆಯ ನಡಾವಳಿ ಓದಿ ಸ್ಥಿರೀಕರಿಸಿದರು. ನಿರ್ದೇಶಕ ಜಯ ಶೆಟ್ಟಿಗಾರ್ ವಾರ್ಷಿಕ ವರದಿ ಮಂಡಿಸಿದರು. 2026-27ನೇ ಸಾಲಿನ ಅಂದಾಜು ಆಯವ್ಯಯವನ್ನು ಸಂಘದ ನಿರ್ದೇಶಕರಾದ ಯಶೋಧ ಸುವರ್ಣ ಮತ್ತು ಸಂಘದ ಕಾರ್ಯ ಚಟುವಟಿಕೆಗಳು ಮತ್ತು ಯೋಜನೆಗಳ ವಿವರಗಳನ್ನು ನಿರ್ದೇಶಕರಾದ ಸೋಮಶೇಖರ್ ರಾವ್ ನೀಡಿದರು. ಸಂಘದ ನಿರ್ದೇಶಕರಾದ ದಿಲೀಪ್ ಶೆಟ್ಟಿ ಸಂಘದ ನೀತಿ ಸಂಹಿತೆಯನ್ನು ಮಂಡಿಸಿದರು. ಸಂಘದ ಲೆಕ್ಕಪರಿಶೋಧನಾ ವರದಿಯ ಪರಿಶೀಲನೆಯ ಜೊತೆಗೆ ಹೈನುಗಾರ ಸದಸ್ಯರಿಗೆ ಹಾಲು ಒಕ್ಕೂಟ, ಹಾಲು ಮಹಾಮಂಡಳಿ, ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸಿಗುವ ಹಲವಾರು ಯೋಜನೆಗಳು ಮತ್ತು ಸಾಲ ಸೌಲಭ್ಯಗಳ ಮಾಹಿತಿಯನ್ನು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಯಶವಂತ್ ನೀಡಿದರು.

    ಸಾಧಕರಿಗೆ ಸನ್ಮಾನ
    ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಸದಸ್ಯರಾದ ಮಾಲತಿ ಮೂಲ್ಯ, ರಾಯಲ್ ನೊರೋನ್ನಾ, ಜೆರೂಮ್ ವಿ.ಡಿಸಿಲ್ವ, ಲಿಯೋನಿಲಾ ಡಿಸೋಜ, ಶ್ಯಾಮಲಾ ಶೆಟ್ಟಿ, ಸೋಮಶೇಖರ್ ರಾವ್ , ಉಮೇಶ್ ಸುವರ್ಣ, ಕರುಣಾಕರ ದೇವಾಡಿಗ, ಸುಂದರ ಶೆಟ್ಟಿ ಮತ್ತು ಪ್ರೇಮ ಶೆಟ್ಟಿ ಜೊತೆಗೆ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸಿದ ಸದಸ್ಯರಾದ ದಾದು ಪೂಜಾರಿ, ಶ್ರೀಧರ ಸಮಗಾರ ಮತ್ತು ಸುಂದರ ಶೆಟ್ಟಿಯವರನ್ನು ನಗದು ಪುರಸ್ಕಾರದ ಜೊತೆಗೆ ಗೌರವಿಸಲಾಯಿತು. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳ ಸಾಧನೆ ಮಾಡಿದ ಪದವಿಪೂರ್ವ ವಿಭಾಗದ ಲಕ್ಷ್ಮಿತಾ ಡಿ. ಕುಲಾಲ್, ಪ್ರಜ್ಞಾ ಮೂಲ್ಯ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳ ಸಾಧನೆಗೈದ ಲಹರಿ ಜೆ. ಶೆಟ್ಟಿಗಾರ್, ಅವ್ನಿ ಪಿ.ಶೆಟ್ಟಿ ಮತ್ತು ಕೌಶಿಕ ದೇವಾಡಿಗರವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಅದೃಷ್ಟಶಾಲಿ ಹೈನುಗಾರ ಪುರಸ್ಕಾರವನ್ನು ವಿನಿತಾ ಅವರಿಗೆ ನೀಡಿ ಗೌರವಿಸಲಾಯಿತು.

    ವೇದಿಕೆಯಲ್ಲಿ ನಿರ್ದೇಶಕರಾದ ಕೊರಗ ಶೆಟ್ಟಿ, ಜಯಾನಂದ ಮೂಲ್ಯ, ಶ್ರೀಧರ ಸಮಗಾರ ಮತ್ತು ಸಂಜೀವಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಪೂರ್ಣಿಮಾ ಕಿಣಿ ಪ್ರಾರ್ಥನೆಗೈದರು. ಸಂಘದ ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಹಾಲು ಪರೀಕ್ಷಕಿ ಪ್ರಮೀಳಾ ವಂದಿಸಿದರು.

    Milk Producers Co Operative Society Sanooru Halu utpadakara Sahakara Sangha Sanooru Narasimha Kamath Suvarna Gramodaya Soudha Sanooru
    Previous Articleಯುಎಪಿಎ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸಂಬಂಧಿಸಿ ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ಎಚ್ಚರಿಕೆ
    Next Article ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಬಜ್ಪೆ ಶಾಖೆ ಅಕ್ಟೋಬರ್‌ 2ರಂದು ಉದ್ಘಾಟನೆ

    Related Posts

    ನಾಳೆಯೂ ಕೆಲಸ: ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ಸೂಚನೆ

    September 26, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಬಜ್ಪೆ ಶಾಖೆ ಅಕ್ಟೋಬರ್‌ 2ರಂದು ಉದ್ಘಾಟನೆ

    September 26, 2026

    ಯುಎಪಿಎ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸಂಬಂಧಿಸಿ ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ಎಚ್ಚರಿಕೆ

    September 25, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಾಳೆಯೂ ಕೆಲಸ: ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ಸೂಚನೆ

    September 26, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಬಜ್ಪೆ ಶಾಖೆ ಅಕ್ಟೋಬರ್‌ 2ರಂದು ಉದ್ಘಾಟನೆ

    September 26, 2026

    ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 65 %ಬೋನಸ್, 15 % ಡಿವಿಡೆಂಡ್‌ ವಿತರಣೆ

    September 25, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.