Close Menu
    Top News

    ದೇಶಾದ್ಯಂತ 55,500ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಡಿಜಿಟಲ್ ಸೇವಾಕೇಂದ್ರಗಳಾಗಿ ಪರಿವರ್ತನೆ

    October 23, 2026

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್ ನಿರ್ದೇಶಕರ ಅಧಿಕಾರಾವಧಿ ವಿವಾದ: ಪ್ರಕರಣಗಳನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಆರ್‌ಬಿಐ ಮನವಿ: ನ.2ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

    October 22, 2026

    ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾಪು ಶಾಖೆ ಉದ್ಘಾಟನೆ

    October 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀರಾಮ ಸೌಹಾರ್ದ ಕ್ರೆಡಿಟ್ ಸೊಸೈಟಿ ಬೈಂದೂರು ಮಹಾಸಭೆ: 80 ಲಕ್ಷ ರೂ.ಲಾಭ, ಶೇ.13 ಡಿವಿಡೆಂಡ್
    News

    ಶ್ರೀರಾಮ ಸೌಹಾರ್ದ ಕ್ರೆಡಿಟ್ ಸೊಸೈಟಿ ಬೈಂದೂರು ಮಹಾಸಭೆ: 80 ಲಕ್ಷ ರೂ.ಲಾಭ, ಶೇ.13 ಡಿವಿಡೆಂಡ್

    adminBy adminSeptember 8, 2026

    ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಬೈಂದೂರು ಕಳೆದ ಸಾಲಿನಲ್ಲಿ ಸುಮಾರು 300 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿ, 80,47,094.07 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಭಾನುವಾರ ನಡೆದ 2025-26ನೇ ಸಾಲಿನ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಈ ಸಂಸ್ಥೆ ಜಿಲ್ಲೆಯಲ್ಲಿ ಜನಸಾಮಾನ್ಯರ ಸಂಸ್ಥೆಯಾಗಿ ಹೆಸರು ಗಳಿಸಿದೆ. ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಕಳೆದ 17 ವರ್ಷದ ಹಿಂದೆ ಹುಟ್ಟಿಕೊಂಡ ನಮ್ಮ ಸಂಘವು ಬೈಂದೂರಿನ ಕೇಂದ್ರ ಸ್ಥಾನದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ನಾಗೂರು, ಗೋಳಿಹೊಳೆ, ನಾವುಂದ, ಉಪ್ಪುಂದ, ಮರವಂತೆ, ಕಂಬದಕೋಣೆಯಲ್ಲಿ ಶಾಖೆ ತೆರೆಯಲಾಗಿದ್ದು 300 ಕೋಟಿಗೂ ಅಧಿಕ ವ್ಯವಹಾರ ಹೊಂದಿದ್ದು ಶೇ.13 ಡಿವಿಡೆಂಡ್ ನೀಡಲಾಗುವುದು ಎಂದರು.


    ಸೊಸೈಟಿಯ ಉಪಾಧ್ಯಕ್ಷರಾದ ಎಂ.ವಿನಾಯಕ ರಾವ್, ನಿರ್ದೇಶಕರಾದ ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ, ರಾಮಕೃಷ್ಣಖಾರ್ವಿ, ಮಂಜು ಪೂಜಾರಿ, ಮಂಜುನಾಥ ಪೂಜಾರಿ, ಪ್ರಶಾಂತ ಪೂಜಾರಿ, ಪುಟ್ಟ ಎಂ.ಬಿಲ್ಲವ, ನಾಗರತ್ನ, ಬೇಬಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಉಪಪ್ರಾಂಶುಪಾಲ ಡಾ| ನಾಗರಾಜ ಪೂಜಾರಿ ಉಪಸ್ಥಿತರಿದ್ದರು. ಶಾಖಾಧಿಕಾರಿ ಸಂತೋಷ ಸ್ವಾಗತಿಸಿದರು. ಸಂಘದ ಪ್ರಭಾರ ಸಿಇಒ ಕಿಟ್ಟಣ್ಣ ರೈ ವಾರ್ಷಿಕ ವರದಿ ಮಂಡಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಕಂಬದಕೋಣೆ ಶಾಖಾಧಿಕಾರಿ ರಾಜೇಂದ್ರ ವಂದಿಸಿದರು. ಶಾಖಾಧಿಕಾರಿಗಳಾದ ರಾಘವೇಂದ್ರ ಪೂಜಾರಿ, ರತಿ ಆರ್.ಪೂಜಾರಿ, ಉಮೇಶ ಸಹಕರಿಸಿದರು.

    Cooperative Cooperative Department Cooperative Registrar Kittanna Rai S.Raju Poojary SRI RAM SOUHARDA CREDIT CO-OPERATIVE LTD. Sri Rama Souharda Credit Co Operative Society Ltd. Byndooru
    Previous Articleಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ಸಂಪನ್ನ, ಶೇ.15 ಡಿವಿಡೆಂಡ್ ಘೋಷಣೆ
    Next Article ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘ ಕೈಕಂಬ ಶೇ.25 ಲಾಭಾಂಶ ಘೋಷಣೆ

    Related Posts

    ದೇಶಾದ್ಯಂತ 55,500ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಡಿಜಿಟಲ್ ಸೇವಾಕೇಂದ್ರಗಳಾಗಿ ಪರಿವರ್ತನೆ

    October 23, 2026

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್ ನಿರ್ದೇಶಕರ ಅಧಿಕಾರಾವಧಿ ವಿವಾದ: ಪ್ರಕರಣಗಳನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಆರ್‌ಬಿಐ ಮನವಿ: ನ.2ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

    October 22, 2026

    ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾಪು ಶಾಖೆ ಉದ್ಘಾಟನೆ

    October 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ದೇಶಾದ್ಯಂತ 55,500ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಡಿಜಿಟಲ್ ಸೇವಾಕೇಂದ್ರಗಳಾಗಿ ಪರಿವರ್ತನೆ

    October 23, 2026

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್ ನಿರ್ದೇಶಕರ ಅಧಿಕಾರಾವಧಿ ವಿವಾದ: ಪ್ರಕರಣಗಳನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲು ಆರ್‌ಬಿಐ ಮನವಿ: ನ.2ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

    October 22, 2026

    ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾಪು ಶಾಖೆ ಉದ್ಘಾಟನೆ

    October 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.