Close Menu
    Top News

    ಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ಸಂಪನ್ನ, ಶೇ.15 ಡಿವಿಡೆಂಡ್ ಘೋಷಣೆ

    September 7, 2026

    ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ, ವಿಶೇಷ ಗೌರವಾರ್ಪಣೆ

    September 7, 2026

    ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ

    September 7, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀಶಾ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಆರನೇ ಶಾಖೆ ಪದವಿನಂಗಡಿಯಲ್ಲಿ ಉದ್ಘಾಟನೆ
    News

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಆರನೇ ಶಾಖೆ ಪದವಿನಂಗಡಿಯಲ್ಲಿ ಉದ್ಘಾಟನೆ

    adminBy adminSeptember 7, 2026

    ಮಂಗಳೂರು: ಸಹಕಾರಿ ರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಶ್ರೀಶಾ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ಸುಸಜ್ಜಿತ 6ನೇ ಶಾಖೆ ಪದವಿನಂಗಡಿ -ಬೋಂದೆಲ್ ಚರ್ಚ್ ಸನಿಹದ ಸನ್ನಿಧಿ ಎನ್‌ಕ್ಲೇವ್ ಕಟ್ಟಡದಲ್ಲಿ ಭಾನುವಾರ ಉದ್ಘಾಟನೆಗೊಂಡಿತು.

    https://chat.whatsapp.com/FCEnlTkAKCC0MGPhXtX4i4
    ಧರ್ಮಗುರು ವಂ| ಬೇಸಿಲ್ ವಾಸ್ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮೂಲಕ ವೈದ್ಯಕೀಯ ನೆರವು, ವಿದ್ಯಾರ್ಥಿವೇತನ ನೀಡುವಂತಹ ಸೇವಾ ಕಾರ್ಯಗಳು ಶ್ಲಾಘನೀಯ. ಸೊಸೈಟಿಯು ಬೆಳೆದು ಮತ್ತಷ್ಟು ಶಾಖೆಗಳನ್ನು ಪ್ರಾರಂಭಿಸಿ ಅತ್ಯುತ್ತಮ ಸೇವೆ ನೀಡುವಂತಾಗಲಿ ಎಂದರು.

    ಸದಸ್ಯರಿಗೆ ಶೇ. 25 ಡಿವಿಡೆಂಡ್:
    ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್. ಗುರುರಾಜ್ ಮಾತನಾಡಿ, 2019ರಲ್ಲಿ ಮಂಗಳೂರಿನ ಉರ್ವಸ್ಟೋರ್ ಬಳಿಯ ರಘು ಬಿಲ್ಡಿಂಗ್ ನಲ್ಲಿ ಆರಂಭವಾದ ಶ್ರೀಶಾ ಸೊಸೈಟಿಯು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮ ಹಾಗೂ ನಗುಮುಖದ ಸೇವೆಯಿಂದ ಏಳು ವರ್ಷಗಳಲ್ಲಿ ಆರನೇ ಶಾಖೆ ತೆರೆಯಲು ಸಾಧ್ಯವಾಯಿತು. ಸಂಸ್ಥೆಯು ಆರೋಗ್ಯ, ಶಿಕ್ಷಣ, ಸೈನ್ಯ ದ ಕುರಿತು ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸೊಸೈಟಿಯು ಆರಂಭದ ವರ್ಷದಿಂದಲೂ ನಿವ್ವಳ ಲಾಭ ಗಳಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಗರಿಷ್ಠ ಶೇ.25 ಡಿವಿಡೆಂಡ್ ನೀಡುತ್ತಿದ್ದು ಸದಸ್ಯರ ಪ್ರೀತಿ, ಗೌರವಕ್ಕೆ ಪಾತ್ರವಾಗಿದೆ. 2025-26ನೇ ಸಾಲಿನಲ್ಲಿ ಶ್ರೀಶಾ ಸೌಹಾರ್ದ ಸಹಕಾರಿಯು 2.25 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು ದಾಖಲೆಯಾಗಿದೆ ಎಂದರು.
    ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಶುಭ ಹಾರೈಸಿದರು. ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯೆ ಸಂಗೀತಾ ನಾಯಕ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಇದರ ನಿರ್ದೇಶಕಿ ಭಾರತಿ ಜಿ. ಭಟ್, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಸೊಸೈಟಿಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಶ್ರೀಶಾ ಸೌಹಾರ್ದ ಸೊಸೈಟಿಯ ಉಪಾಧ್ಯಕ್ಷ ಉದಯ ವಿ.ಶಾಸ್ತ್ರಿ, ಪದವಿನಂಗಡಿ ಶಾಖೆಯ ಪ್ರಬಂಧಕರಾದ ರಂಜನಾ ಹೆಗಡೆ ಇದ್ದರು. ನಿರ್ದೇಶಕರಾದ ಪ್ರಸನ್ನ ಕುಮಾರ್, ಸುರೇಶ್ ಬೈಂದೂರು, ರಾಜೇಶ್ ಪುಂಜಾಲಕಟ್ಟೆ, ರಾಧಾ ರಾಘವೇಂದ್ರ, ವತ್ಸಲಾ ಟಿ, ರವಿಚಂದ್ರ ಕೆ, ರಾಜೇಶ್ ನಾಯರ್, ಮಾಧವ ಎಂ. ಎಸ್., ಅನಿಲ್ ಪ್ರಶಾಂತ್‌ ಡಿಸೋಜ ಸಹಕರಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ ವಂದಿಸಿದರು. ಸಿಂಧೂ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

     

    Atmashakthi Vividhoddesha Sahakari Sangha Bondel Church Co Operative ministry Cooperative Cooperative Department Cooperative Registrar M S Gururaj Shreesha Souharda Co Operative Society Mangaluru
    Previous Articleಸೆಪ್ಟೆಂಬರ್ 8ರಂದು ಎಸ್.ಕೆ.ಗೋಲ್ಡ್‌ಸ್ಮಿತ್ ಸೊಸೈಟಿಯಿಂದ ಭಾಷಣ ಸ್ಪರ್ಧೆ
    Next Article ರೈತರ ಒಳಿತಿಗಾಗಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಶ್ರಮ

    Related Posts

    ಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ಸಂಪನ್ನ, ಶೇ.15 ಡಿವಿಡೆಂಡ್ ಘೋಷಣೆ

    September 7, 2026

    ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ, ವಿಶೇಷ ಗೌರವಾರ್ಪಣೆ

    September 7, 2026

    ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ

    September 7, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ಸಂಪನ್ನ, ಶೇ.15 ಡಿವಿಡೆಂಡ್ ಘೋಷಣೆ

    September 7, 2026

    ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ, ವಿಶೇಷ ಗೌರವಾರ್ಪಣೆ

    September 7, 2026

    ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ

    September 7, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.