Close Menu
    Top News

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ: ಭಾಲ್ಕಿಯಲ್ಲಿ ಸಹಕಾರಿ ಸಂಘದ ಮೇಲೆ ಇ.ಡಿ. ದಾಳಿ

    October 12, 2026

    ಎರಡು ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ

    October 12, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ
    News

    ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ

    adminBy adminAugust 24, 2026

    ತೊಕ್ಕೊಟ್ಟು : ದಕ್ಷಿಣಕನ್ನಡ ಜಿಲ್ಲೆಯ ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ ತೊಕ್ಕೊಟ್ಟು ಇದರ 14ನೇ ವರ್ಷದ ವಾರ್ಷಿಕ ಮಹಾಸಭೆ ಭಾನುವಾರ ಕುತ್ತಾರು M.Y.M ಸಭಾಂಗಣದಲ್ಲಿ ಅಧ್ಯಕ್ಷರಾದ ವಿಜಯ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಸದಸ್ಯರಾದ ಸುಕೇಶ್ ಮಂಜನಾಡಿ ಸ್ವಾಗತಿಸಿದರು. ಮಹಾಸಭೆಯನ್ನು ಸಹಕಾರಿಯ ಅಧ್ಯಕ್ಷರು ವಿಜಯ ಗೌಡ, ಉಪಾಧ್ಯಕ್ಷರು ಸುಂದರ ಗಟ್ಟಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉದ್ಘಾಟಿಸಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿಯ ಅಧ್ಯಕ್ಷರಾದ ವಿಜಯ ಗೌಡ, ಸಂಘವು ಪ್ರಸ್ತುತ ರೂ.4.82 ಕೋಟಿ ವ್ಯವಹಾರ ನಡೆಸಿದ್ದು, ರೂ.7,37,460.83 ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.5 ಪ್ರತಿಶತ ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಕ್ರಮ್ ಶೆಟ್ಟಿಯವರು 2025 – 26ನೇ ಸಾಲಿನ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು.

    2026ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದ ಸ್ವಸಹಾಯ ಸಂಘದ ಸದಸ್ಯರ 5 ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು 1 ರಿಂದ 10ನೇ ತರಗತಿಯವರೆಗಿನ ಸ್ವಸಹಾಯ ಸದಸ್ಯರ 25 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. 2 ಅತ್ಯುತ್ತಮ ಸ್ವಸಹಾಯ ಸಂಘ ಪ್ರಶಸ್ತಿ ಹಾಗೂ 15 ಉತ್ತಮ ಸ್ವಸಹಾಯ ಸಂಘಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಾರ್ಷಿಕ ಸಭೆಯಲ್ಲಿ ಕಳೆದ 2021-2026ರ ವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರಿಗೆ ಜನ್ಮಭೂಮಿ ಅಭಿನಂದನೆ ನೀಡಿ ಗೌರವಿಸಲಾಯಿತು. ಈ ವಾರ್ಷಿಕ ಮಹಾಸಭೆಗೆ ಸಹಕಾರಿಯ ನಿರ್ದೇಶಕರಾದ ಸೂರಜ್, ಜಗನ್ನಾಥ ಶೆಟ್ಟಿ, ಮಹೇಶ್ ಕೆ., ಚಂದು ನಾಯ್ಕ, ವಿಶ್ವನಾಥ, ಶೋಭಾ ಕಜೆ, ನಾಗವೇಣಿ ಶೆಟ್ಟಿ, ವೀಣಾ ಭಟ್, ಅಮಿತಾ ಶೆಟ್ಟಿ, ಸಹಕಾರಿಯ ಸಿಬ್ಬಂದಿಗಳು, ಪಿಗ್ಮಿ ಏಜೆಂಟರು ಮತ್ತು ಸಹಕಾರಿಯ ಸದಸ್ಯರು ಹಾಜರಿದ್ದರು. ಹರೀಶ್ ಕೆ ಯವರು ವಂದಿಸಿದರು. ಸಹಕಾರಿಯ ಸದಸ್ಯರಾದ ಸುಕೇಶ್ ಮಂಜನಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.

     

    Co Operative ministry Cooperative Cooperative Department Cooperative Registrar Janmabhoomi Swasahaya Souharda Sahakari Sangha Tokkottu
    Previous Articleಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು
    Next Article ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.51.13 ಲಕ್ಷ ನಿವ್ವಳ ಲಾಭ ಶೇ.25 ಡಿವಿಡೆಂಡ್ ಘೋಷಣೆ

    Related Posts

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ: ಭಾಲ್ಕಿಯಲ್ಲಿ ಸಹಕಾರಿ ಸಂಘದ ಮೇಲೆ ಇ.ಡಿ. ದಾಳಿ

    October 12, 2026

    ಎರಡು ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ

    October 12, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ: ಭಾಲ್ಕಿಯಲ್ಲಿ ಸಹಕಾರಿ ಸಂಘದ ಮೇಲೆ ಇ.ಡಿ. ದಾಳಿ

    October 12, 2026

    ಎರಡು ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ

    October 12, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.