Close Menu
    Top News

    ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.51.13 ಲಕ್ಷ ನಿವ್ವಳ ಲಾಭ ಶೇ.25 ಡಿವಿಡೆಂಡ್ ಘೋಷಣೆ

    August 24, 2026

    ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ

    August 24, 2026

    ಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು

    August 24, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ 8.08 ಕೋಟಿ ರೂ. ಲಾಭ
    News

    ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ 8.08 ಕೋಟಿ ರೂ. ಲಾಭ

    adminBy adminAugust 24, 2026

    ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಣೆ

    ಮಂಗಳೂರು: ಇಲ್ಲಿನ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
    ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅವರ ವಾರ್ಷಿಕ ವರದಿ, ಲೆಕ್ಕಪರಿಶೋಧಿತ ಆರ್ಥಿಕ ಪತ್ರಿಕೆಗಳು, ಅನುಪಾಲನಾ ವರದಿ, ಲಾಭಾಂಶದ ವಿಂಗಡಣೆ ಹಾಗೂ 2026-27ನೇ ಸಾಲಿನ ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿ ಸದಸ್ಯರ ಅನುಮೋದನೆ ಪಡೆಯಲಾಯಿತು. 2025-26ನೇ ಸಾಲಿಗೆ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಸಲು ಸಭೆ ಮಂಜೂರಾತಿ ನೀಡಿತು.

    https://chat.whatsapp.com/FCEnlTkAKCC0MGPhXtX4i4
    ಸಾಧನೆಗೈದ ಐವರು ಶಿಲ್ಪಿಗಳಿಗೆ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸ್ವರ್ಣಶಿಲ್ಪಿ ಜಯರಾಮ ಪೇಜಾವರ ಅತ್ತಾವರ, ಕಾಷ್ಠಶಿಲ್ಪಿ ಪ್ರಭಾಕರ ಆಚಾರ್ಯ ಕಂದಾವರ, ಅಯಸ್‌ ಶಿಲ್ಪ ಲಿಂಗಪ್ಪ ಆಚಾರ್ಯ ವಾಮಂಜೂರು, ಎರಕ ಶಿಲ್ಪ ಯಶೋಧರ ಆಚಾರ್ಯ ಪೆರಾಡಿ, ಶಿಲಾ ಶಿಲ್ಪ ಬಿ.ವಿಜಯ್‌ ಆಚಾರ್ಯ ಬಸ್ರೂರು ಇವರಿಗೆ ಎಸ್.ಕೆ.ಜಿ.ಐ. ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದಿಕ ಕ್ಷೇತ್ರದಲ್ಲಿ ಪುರೋಹಿತ್‌ ಎನ್‌. ಶ್ರೀಧರ ಶರ್ಮ, ಪತ್ರಿಕೋದ್ಯಮ -ಎಸ್‌.ವೀರೇಂದ್ರ ಆಚಾರ್‌, ಯಕ್ಷಗಾನ -ದಿವಾಕರ ಆಚಾರ್ಯ ಪೊಳಲಿ, ಕಲಾ ಕ್ಷೇತ್ರ -ಧನರಾಜ್‌ ಎಸ್‌.ಆರ್‌, ಚಿತ್ರಕಲಾ ಕ್ಷೃಏತ್ರ ರೂಪಾ ವಸುಂಧರ ಆಚಾರ್ಯ ಅವರನ್ನು ಗೌರವಿಸಲಾಯಿತು.


    2025-26ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳಿಗೆ ನೀಡಲಾದ ವಿಭಾಗವಾರು ಪ್ರಶಸ್ತಿಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಶಾಖೆಗಳನ್ನು ಗೌರವಿಸಲಾಯಿತು. ಮೊದಲ ವರ್ಗದಲ್ಲಿ ಕೋಟೇಶ್ವರ ಶಾಖೆ ಪ್ರಥಮ ಹಾಗೂ ಮಂಗಳೂರು ಶಾಖೆ ದ್ವಿತೀಯ ಸ್ಥಾನ ಪಡೆದರೆ, ಎರಡನೇ ವರ್ಗದಲ್ಲಿ ಬೆಳ್ಳಂಪಳ್ಳಿ ಶಾಖೆ ಪ್ರಥಮ ಹಾಗೂ ಪಡುಬಿದ್ರಿ ಮತ್ತು ಸಂತೆಕಟ್ಟೆ-ಕಲ್ಯಾಣಪುರ ಶಾಖೆಗಳು ದ್ವಿತೀಯ ಸ್ಥಾನ ಪಡೆದವು.


    ಸಂಘವು 2025-2026ನೇ ಸಾಲಿನಲ್ಲಿ 8,07,74,000.76 ರೂ. ನಿವ್ವಳ ಲಾಭ ಗಳಿಸಿದೆ. 31,700.96 ಲಕ್ಷ ರೂ. ಠೇವಣಿ, 28886.41 ಲಕ್ಷ ರೂ. ಸದಸ್ಯರ ಸಾಲ ಹೊರಬಾಕಿ, ಒಟ್ಟು ವ್ಯವಹಾರ 1788.67 ಕೋಟಿ ರೂ. ನಡೆಸಿದೆ. ಸೊಸೈಟಿಯ ದುಡಿಯುವ ಬಂಡವಾಳ 35516.39 ಲಕ್ಷ ರೂ. ಸೊಸೈಟಿಯ ಆಪದ್ಧನ ನಿಧಿ 1308.66 ಲಕ್ಷ ರೂ., ಕಟ್ಟಡ ನಿಧಿ 486.76 ಲಕ್ಷ ರೂ. ಆಗಿದೆ.
    ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅವರು ಮಾತನಾಡಿ, ಸಂಸ್ಥೆ ಯಶಸ್ವಿಯಾಗಿ ಬೆಳೆಯಬೇಕಾದರೆ ಸ್ಥಾಪಕರಾದ ಪಾಲ್ಕೆ ಬಾಬುರಾಯ ಆಚಾರ್ಯರ ಕೃಪೆಯೇ ಕಾರಣ ಎಂದರು.
    ಸಂಘದ ಸದಸ್ಯರಾದ ಪುರುಷೋತ್ತಮ ಭಟ್, ಯೋಗೀಶ್ ನೆತ್ತರ ಹಾಗೂ ಸಂತೋಷ ಆಚಾರ್ಯ ಶಿರ್ವ ಮಾತನಾಡಿದರು. ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಕಿಶೋರ್ ಕುಮಾರ್ ಕೂಟಾಜೆ ಅವರಿಂದ ಭಕ್ತಿಗಾಯನ ನಡೆಯಿತು. ನಿರ್ದೇಶಕರಾದ ಕೆ.ಯಜೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್ಯ, ಕೆ.ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು, ಮಂಜುನಾಥ ಆಚಾರ್ಯ, ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು.
    ಉಪಾಧ್ಯಕ್ಷ ಎ. ಆನಂದ ಆಚಾರ್ಯ ಸ್ವಾಗತಿಸಿ, ನಿರ್ದೇಶಕ ಪ್ರಕಾಶ್ ಆಚಾರ್ಯ ಕೆ. ವಂದಿಸಿದರು. ಉಷಾ ಮನೋಜ್ ಹಾಗೂ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

    Co Operative ministry Cooperative Registrar Paalke Baburaya Acharya SK Goldsmiths Industrial Co Operative Society Upendra Acharya Varshika Mahasabhe Yajneshwara
    Previous Articleಎಂಸಿಸಿ ಬ್ಯಾಂಕ್‌ಗೆ ಪ್ರತಿಷ್ಠಿತ ಸರ್ವತೋಮುಖ ಅಭಿವೃದ್ಧಿ ಸಾಧನಾ ಪ್ರಶಸ್ತಿ
    Next Article ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಧನಾ ಪುರಸ್ಕಾರ

    Related Posts

    ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.51.13 ಲಕ್ಷ ನಿವ್ವಳ ಲಾಭ ಶೇ.25 ಡಿವಿಡೆಂಡ್ ಘೋಷಣೆ

    August 24, 2026

    ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ

    August 24, 2026

    ಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು

    August 24, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ರೂ.51.13 ಲಕ್ಷ ನಿವ್ವಳ ಲಾಭ ಶೇ.25 ಡಿವಿಡೆಂಡ್ ಘೋಷಣೆ

    August 24, 2026

    ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ 14ನೇ ವಾರ್ಷಿಕ ಮಹಾಸಭೆ

    August 24, 2026

    ಎನ್‌ಸಿಯುಐ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿ ಒಲವು

    August 24, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.