ಉಡುಪಿ: ಉಡುಪಿ ಕ್ಯಾಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) ವತಿಯಿಂದ ನೀಡಲಾಗುವ ಪ್ರತಿಷ್ಠಿತ ಸಾಧನಾ ಪ್ರಶಸ್ತಿಯು 4ನೇ ಬಾರಿಗೆ ಲಭಿಸಿದೆ.
https://chat.whatsapp.com/FCEnlTkAKCC0MGPhXtX4i4
ಸಹಕಾರಿ ಕ್ಷೇತ್ರದಲ್ಲಿ ಸೊಸೈಟಿ ಸಲ್ಲಿಸುತ್ತಿರುವ ಗಮನಾರ್ಹ ಸೇವೆ, ಉತ್ತಮ ಕಾರ್ಯನಿರ್ವಹಣೆ ಹಾಗೂ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಸೊಸೈಟಿಯ ಪರವಾಗಿ ಅಧ್ಯಕ್ಷರಾದ ಲೂವಿಸ್ ಲೋಬೊ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಫೆರ್ನಾಂಡೀಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಜೇಮ್ಸ್ ಡಿ’ಸೋಜ ಹಾಗೂ ನಿರ್ದೇಶಕರಾದ ಡಾ.ನೇರಿ ಕರ್ನೆಲಿಯೋ, ಮ್ಯಾಕ್ಸಿಮ್ ಡಿ’ಸೋಜ, ಓನಿಲ್ ಡಿ’ಸೋಜ ಮತ್ತು ಫ್ರಾಂಕ್ ಪೀಟರ್ ಕಾರ್ಡೋಜ ಉಪಸ್ಥಿತರಿದ್ದರು.
ಸತತ ನಾಲ್ಕನೇ ಬಾರಿಗೆ ಎಸ್ಸಿಡಿಸಿಸಿ ಬ್ಯಾಂಕ್ ಸಾಧನಾ ಪ್ರಶಸ್ತಿ ಲಭಿಸಿರುವುದು ಉಡುಪಿ ಕ್ಯಾಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಹಕಾರಿ ಸೇವಾ ಬದ್ಧತೆಗೆ ಸಂದ ಗೌರವವಾಗಿದೆ.


