ರಾಜ್ಯಸಭೆಯಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಮಾಹಿತಿ
ನವದೆಹಲಿ: ದೇಶಾದ್ಯಂತ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ಸಿಡಿಸಿ) ಒಟ್ಟಾರೆಯಾಗಿ 5,74,090.48 ಕೋಟಿ ರೂ.ಗಳನ್ನು ವಿತರಿಸಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಬುಧವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮಿತ್ ಷಾ, ಸಹಕಾರ ಸಚಿವಾಲಯದ ಅಡಿಯಲ್ಲಿರುವ ಶಾಸನಬದ್ಧ ಸಂಸ್ಥೆಯಾದ ಎನ್ಸಿಡಿಸಿ, ವ್ಯಾಪಕ ಶ್ರೇಣಿಯ ಅಧಿಸೂಚಿತ ಸರಕು ಮತ್ತು ಸೇವೆಗಳಲ್ಲಿ ಸಹಕಾರಿ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುತ್ತದೆ. ಒಟ್ಟಾರೆಯಾಗಿ 5,74,090.48 ಕೋಟಿ ರೂ.ಗಳನ್ನು ವಿತರಿಸಿದ್ದು ಕಳೆದ ಐದು ವರ್ಷಗಳಲ್ಲಿ 3,96,763 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೃಷಿ ಮತ್ತು ಸಂಬಂಧಿತ ಮೂಲಸೌಕರ್ಯಗಳ ರಚನೆ, ಮೌಲ್ಯ ಸರಪಳಿ ಅಭಿವೃದ್ಧಿ ಮತ್ತು ಸಹಕಾರಿ ಸಂಸ್ಥೆಗಳ ಸಾಮರ್ಥ್ಯ ವೃದ್ಧಿಯನ್ನು ನಿಗಮವು ಬೆಂಬಲಿಸುತ್ತಿದ್ದು, ಆಯಾ ವಲಯಗಳಲ್ಲಿ ಸಹಕಾರಿ ಚಳವಳಿಯನ್ನು ಬಲಪಡಿಸಲು ಇದು ಕಾರಣವಾಗುತ್ತದೆ ಎಂದು ಹೇಳಿದರು. ತಂತ್ರಜ್ಞಾನ-ಚಾಲಿತ ಮತ್ತು ಡಿಜಿಟಲ್ ಆಗಿ ಸಕ್ರಿಯಗೊಳಿಸಲಾದ ಸಹಕಾರಿ ಸಂಸ್ಥೆಗಳ ಮೇಲೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಎನ್ಸಿಡಿಸಿಯು ಸಹಕಾರಿ ಸಂಘಗಳ ಗಣಕೀಕರಣ ಮತ್ತು ಡಿಜಿಟಲೀಕರಣ, ಡಿಜಿಟಲ್ ಲೆಕ್ಕಪತ್ರ ನಿರ್ವಹಣೆ, ನಿರ್ವಹಣಾ ಮಾಹಿತಿ ವ್ಯವಸ್ಥೆಗಳು (ಎಂಐಎಸ್), ಸಾಮರ್ಥ್ಯ ವೃದ್ಧಿ, ಎಲ್ಐಎಸಿ ಮೂಲಕ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಒಗಳು) ಮತ್ತು ಸಹಕಾರಿ ಸಂಸ್ಥೆಗಳಿಂದ ಇ-ನ್ಯಾಮ್ನಂತಹ ಡಿಜಿಟಲ್ ಕೃಷಿ ಮಾರುಕಟ್ಟೆ ವೇದಿಕೆಗಳನ್ನು ಅಳವಡಿಸಿಕೊಳ್ಳುವುದನ್ನು ಬೆಂಬಲಿಸುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸಹಕಾರ ಸಚಿವಾಲಯವು ಕೈಗೊಂಡಿರುವ ಸಹಕಾರಿ ಸಂಘಗಳ ಡಿಜಿಟಲ್ ಉತ್ತೇಜನದ ಬಗ್ಗೆ ಮಾಹಿತಿ ನೀಡಿದ ಅಮಿತ್ ಷಾ, 2,925.39 ಕೋಟಿ ರೂ.ಗಳ ಪರಿಷ್ಕೃತ ವೆಚ್ಚದೊಂದಿಗೆ ಕ್ರಿಯಾತ್ಮಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯು ಎಲ್ಲಾ ಕ್ರಿಯಾತ್ಮಕ ಪ್ಯಾಕ್ಸ್ಗಳನ್ನು ಡಿಸಿಸಿ ಬ್ಯಾಂಕುಗಳು, ರಾಜ್ಯಮಟ್ಟದ ಕೋ ಆಪರೇಟಿವ್ ಬ್ಯಾಂಕ್ಗಳು ಮತತು ನಬಾರ್ಡ್ನೊಂದಿಗೆ ಸಂಯೋಜಿಸಲಾದ ಸಾಮಾನ್ಯ ಇಆರ್ಪಿ ಆಧಾರಿತ ರಾಷ್ಟ್ರೀಯ ಸಾಫ್ಟ್ವೇರ್ಗೆ ತರುತ್ತಿದೆ ಎಂದು ಅಮಿತ್ ಷಾ ಹೇಳಿದರು.




