Close Menu
    Top News

    ಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ಸಂಪನ್ನ, ಶೇ.15 ಡಿವಿಡೆಂಡ್ ಘೋಷಣೆ

    September 7, 2026

    ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ, ವಿಶೇಷ ಗೌರವಾರ್ಪಣೆ

    September 7, 2026

    ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ

    September 7, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೊದಲನೇ ತ್ರೈಮಾಸಿಕದಲ್ಲಿ ಗಣನೀಯ ಪ್ರಗತಿ
    News

    ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೊದಲನೇ ತ್ರೈಮಾಸಿಕದಲ್ಲಿ ಗಣನೀಯ ಪ್ರಗತಿ

    adminBy adminJuly 10, 2026

    ಮಂಗಳೂರು: ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2026-27ನೇ ಸಾಲಿನ ವಿತ್ತೀಯ ವರ್ಷದ ಮೊದಲನೇ ತ್ರೈಮಾಸಿಕ ಅವಧಿ ದಿನಾಂಕ 30-06-2026ಕ್ಕೆ ರೂ.721 ಕೋಟಿ ಠೇವಣಿ, ರೂ.641 ಕೋಟಿ ಸಾಲ, ರೂ.1362 ಕೋಟಿ (ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. 2025ನೇ ಜೂನ್ 30ಕ್ಕೆ ಹೋಲಿಸುವಾಗ ಠೇವಣಾತಿಯಲ್ಲಿ ರೂ.115 ಕೋಟಿ 19% ವೃದ್ಧಿ, ಹೊರಬಾಕಿ ಸಾಲದಲ್ಲಿ ರೂ.120 ಕೋಟಿ ಹೆಚ್ಚಳ 23% ವೃದ್ಧಿಯೊಂದಿಗೆ, ಒಟ್ಟು ವ್ಯವಹಾರದಲ್ಲಿ ರೂ.235 ಕೋಟಿ ವೃದ್ಧಿಯಿಂದ 21% ಹೆಚ್ಚಳ ಸಾಧಿಸಿದೆ.

    https://chat.whatsapp.com/FCEnlTkAKCC0MGPhXtX4i4
    30-06-2026ಕ್ಕೆ ನಿವ್ವಳ ಲಾಭ ರೂ.3.74 ಕೋಟಿ ದಾಖಲಿಸಿದ್ದು, ಇದು 2025ನೇ ಜೂನ್ 30ಕ್ಕೆ ಹೋಲಿಸುವಾಗ ರೂ.1.10 ಕೋಟಿ ಹೆಚ್ಚಳವಾಗಿ 42% ವೃದ್ಧಿಯಾಗಿರುತ್ತದೆ. ನಿರಂತರ ಡಿವಿಡೆಂಡ್‌ ನೀಡುತ್ತ ಬಂದಿರುವ ರಾಮಕೃಷ್ಣ ಕ್ರೆಡಿಟ್‌ ಸೊಸೈಟಿ, 2024-25ನೇ ಸಾಲಿಗೆ ಶೇ.25 ಡಿವಿಡೆಂಡ್‌ ನೀಡಿದ್ದು, ಕಳೆದ ಏಳು ವರ್ಷಗಳಿಂದ ಗರಿಷ್ಟ 25% ಡಿವಿಡೆಂಡ್‌ ನೀಡುತ್ತ ಬಂದಿದೆ. ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 18 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ಮರುಪಾವತಿಯು ಉತ್ತಮವಾಗಿರುತ್ತದೆ.
    31-03-2017ಕ್ಕೆ ಒಟ್ಟು ವ್ಯವಹಾರದ ಗುರಿ ರೂ.1515 ಕೋಟಿಯಾಗಿದ್ದು, ಅದನ್ನು ತಲುಪಲು ಸರ್ವ ಪ್ರಯತ್ನ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Banking Cooperative Cooperative Department Cooperative Registrar K.Jairaj B Rai Shree Ramakrishna Credit Co Operative Soceity
    Previous Articleಎನ್‌ಸಿಯುಐ ಚುನಾವಣೆ; 10 ಸ್ಥಾನಗಳಿಗೆ ಜುಲೈ 18 ರಂದು ಮತದಾನ; ರಾಜ್ಯದ ಸಹಕಾರಿ ಧುರೀಣರಾದ ಹೆಚ್‌.ಕೆ ಪಾಟೀಲ್‌, ಅಣ್ಣಾಸಾಹೇಬ್‌ ಜೊಲ್ಲೆ ಕಣದಲ್ಲಿ
    Next Article ರಿಸರ್ವ್‌ ಬ್ಯಾಂಕ್‌ ಹಣಕಾಸು ಪರಿಸ್ಥಿತಿ ನಿಯಂತ್ರಿಸಲಿ, ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರಾವಧಿಯನ್ನಲ್ಲ

    Related Posts

    ಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ಸಂಪನ್ನ, ಶೇ.15 ಡಿವಿಡೆಂಡ್ ಘೋಷಣೆ

    September 7, 2026

    ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ, ವಿಶೇಷ ಗೌರವಾರ್ಪಣೆ

    September 7, 2026

    ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ

    September 7, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಮಾಜ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ ಸಂಪನ್ನ, ಶೇ.15 ಡಿವಿಡೆಂಡ್ ಘೋಷಣೆ

    September 7, 2026

    ಆತ್ಮಶಕ್ತಿ ಸಹಕಾರ ಸಂಘದಲ್ಲಿ ಶಿಕ್ಷಕರ ದಿನಾಚರಣೆ, ವಿಶೇಷ ಗೌರವಾರ್ಪಣೆ

    September 7, 2026

    ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ

    September 7, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.