Close Menu
    Top News

    ಸೌಹಾರ್ದ ಸಹಕಾರಿಗಳ ಒಕ್ಕೂಟದ ಉದ್ದೇಶ, ಕಾರ್ಯ ಶ್ಲಾಘನೀಯ

    June 22, 2026

    ಶ್ರೀ ಗುರು ರಾಘವೇಂದ್ರ ಸೌಹಾರ್ದ ಸಹಕಾರಿ ಸಂಘದ ಪ್ರಾರಂಭೋತ್ಸವ

    June 22, 2026

    ಯೋಗದಿಂದ ಒತ್ತಡ ರಹಿತ ಜೀವನ ಸಾಧ್ಯ: ರಮೇಶ್ ಪ್ರಭು

    June 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸೌಹಾರ್ದ ಸಹಕಾರಿಗಳ ಒಕ್ಕೂಟದ ಉದ್ದೇಶ, ಕಾರ್ಯ ಶ್ಲಾಘನೀಯ
    News

    ಸೌಹಾರ್ದ ಸಹಕಾರಿಗಳ ಒಕ್ಕೂಟದ ಉದ್ದೇಶ, ಕಾರ್ಯ ಶ್ಲಾಘನೀಯ

    adminBy adminJune 22, 2026

    ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜಾಂತಿಕರ ಅಭಿಪ್ರಾಯ

    ವಿಜಯಪುರ: ಇಲ್ಲಿನ ಒಕ್ಕೂಟಕ್ಕೆ ಸಹಾಯಕ ನಿಬಂಧಕರನ್ನು ವಸೂಲಾಧಿಕಾರಿಗಳಾಗಿ ಸಂಯುಕ್ತ ಸಹಕಾರಿಯಿಂದ ನೇಮಕ ಮಾಡಿ, ವಿಜಯಪುರ ಜಿಲ್ಲೆ ಸೌಹಾರ್ದ ಸಹಕಾರಿಗಳ ಸಾಲ ವಸೂಲಾತಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜಾಂತಿಕರ ಹೇಳಿದರು.
    ವಿಜಯಪುರ ಸೌಹಾರ್ದ ಒಕ್ಕೂಟಕ್ಕೆ ಇತ್ತೀಚೆಗೆ ಭೇಟಿ ನೀಡಿ ಅವರು ಮಾತನಾಡಿದರು. ಸೌಹಾರ್ದ ಸಹಕಾರಿಗಳ ಒಕ್ಕೂಟದ ಈ ಉದ್ದೇಶ ಹಾಗೂ ಕಾರ್ಯ ಶ್ಲಾಘನೀಯ ಎಂದು ಅವರು ಇದೇ ವೇಳೆ ಶ್ಲಾಘಿಸಿದರು.

    https://chat.whatsapp.com/FCEnlTkAKCC0MGPhXtX4i4
    ಈ ಸಂದರ್ಭದಲ್ಲಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಒಕ್ಕೂಟದ ನಿರ್ದೇಶಕರ ವತಿಯಿಂದ ಕನಿಷ್ಠ ಪಕ್ಷ ಒಂದು ತಿಂಗಳಲ್ಲಿ ಎರಡು ದಿನ ವಿಜಯಪುರ ನಗರದಲ್ಲಿಯೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶ ಮಾಡಿಕೊಡಲು ವಿನಂತಿಸಲಾಯಿತು, ಇದಕ್ಕೆ ಸ್ಪಂದಿಸಿದ ಜಾಂತಿಕರ ಅವರು ಸಂಯುಕ್ತ ಸಹಕಾರಿಯ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಕಲಬುರಗಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಸ್ ಎಸ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಅರುಣ್ ವಾರದ, ದೀಪಕ ಶಿಂತ್ರೆ, ಪರಶುರಾಮ ಚಿಂಚಲಿ, ಯಮನಪ್ಪ ಸಾತೀಹಾಳ, ಅರುಣ ಮಠ, ಸಿದ್ದು ಮಲ್ಲಿಕಾರ್ಜುನಮಠ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಬಸವರಾಜ್. ಎಸ್, ವರಸಿದ್ಧಿ ವಿನಾಯಕ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಭೀಮಣ್ಣ. ತಿ. ಜಿದ್ದಿ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಬಸಗೊಂಡಪ್ಪ ಬಸರಕೋಡ ಹಾಗೂ ಇತರರು ಉಪಸ್ಥಿತರಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Gurunath Jantikar S S Patil Varasiddhi Vinayaka Souharda Sahakari Sangha Vijayapura Jilla Souharda Sahakarigala Samavesha
    Previous Articleಶ್ರೀ ಗುರು ರಾಘವೇಂದ್ರ ಸೌಹಾರ್ದ ಸಹಕಾರಿ ಸಂಘದ ಪ್ರಾರಂಭೋತ್ಸವ

    Related Posts

    ಶ್ರೀ ಗುರು ರಾಘವೇಂದ್ರ ಸೌಹಾರ್ದ ಸಹಕಾರಿ ಸಂಘದ ಪ್ರಾರಂಭೋತ್ಸವ

    June 22, 2026

    ಯೋಗದಿಂದ ಒತ್ತಡ ರಹಿತ ಜೀವನ ಸಾಧ್ಯ: ರಮೇಶ್ ಪ್ರಭು

    June 22, 2026

    ಸಂಪತ್ತಿಗಿಂತ ಆರೋಗ್ಯವೇ ಶ್ರೀಮಂತ: ಪಿ.ಉಪೇಂದ್ರ ಆಚಾರ್ಯ

    June 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸೌಹಾರ್ದ ಸಹಕಾರಿಗಳ ಒಕ್ಕೂಟದ ಉದ್ದೇಶ, ಕಾರ್ಯ ಶ್ಲಾಘನೀಯ

    June 22, 2026

    ಶ್ರೀ ಗುರು ರಾಘವೇಂದ್ರ ಸೌಹಾರ್ದ ಸಹಕಾರಿ ಸಂಘದ ಪ್ರಾರಂಭೋತ್ಸವ

    June 22, 2026

    ಯೋಗದಿಂದ ಒತ್ತಡ ರಹಿತ ಜೀವನ ಸಾಧ್ಯ: ರಮೇಶ್ ಪ್ರಭು

    June 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.