ಮೂಡುಬಿದಿರೆ: ಕರಿಂಜೆಯ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಶಾಖೆ ಮದ್ದಡ್ಕದಲ್ಲಿ ಸಾಮಾನ್ಯ ಸೇವಾ ಕೇಂದ್ರ ಮತ್ತು ಇ-ಸ್ಟಾಂಪಿಂಗ್ ಸೌಲಭ್ಯದ ಉದ್ಘಾಟನೆ ಶುಕ್ರವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಸಂಸ್ಥೆಯ ಸಂಸ್ಥಾಪಕ, ಗೌರವ ಮಾರ್ಗದರ್ಶಕರಾಗಿರುವ ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನುಷ್ಯನ ಸ್ವಭಾವ, ಕಾರ್ಯ ಚಟುವಟಿಕೆಯಲ್ಲಿ ವ್ಯತ್ಯಾಸ ಇರಬಹುದು, ಸ್ವಸಹಾಯ ಸಂಘದಲ್ಲಿದ್ದುಕೊಂಡು ಜಾತಿ ಮತ ಭೇದವನ್ನು ತೊರೆದು ಈ ಸಂಸ್ಥೆಯಲ್ಲಿ ನಾವು ಇದ್ದೇವೆ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರನ್ನು ಕಂಡು ತುಂಬ ಹೆಮ್ಮೆಯನ್ನುಂಟು ಮಾಡಿದೆ. ಹಾಗೆಯೇ ಇದೀಗ ಕುವೆಟ್ಟು -ಮೂಡುಬಿದಿರೆಗೆ ಗ್ರಾಮ ಸಮೃದ್ದಿ ಸಹಕಾರಿ ಸಂಘ ವಿಸ್ತರಿಸಿದೆ. ಮುಂದೆ ಮಂಗಳೂರು ಮತ್ತು ಗ್ರಾಮೀಣ ಪ್ರದೇಶವಾದ ಅಳಿಯೂರು ಗ್ರಾಮಗಳಲ್ಲಿ ಶಾಖೆಯು ಪ್ರಾರಂಭಗೊಳ್ಳಲಿದೆ. ನಮ್ಮ ಸಂಸ್ಥೆಯಿಂದ ಸದಸ್ಯರಿಗೆ ಉತ್ತಮವಾದ ಸೇವೆ ನೀಡುವ ದೃಷ್ಟಿಯಿಂದ ಸಾಮಾನ್ಯ ಸೇವಾ ಕೇಂದ್ರ ಮತ್ತು ಇ- ಸ್ಟಾಂಪಿಂಗ್ ಉದ್ಘಾಟನೆ ಮಾಡಲಾಯಿತು ಎಂದು ಹೇಳಿದರು.
ಸಂಘದ ಅಧ್ಯಕ್ಷ ಸುಧಾಕರ ನೂಯಿ ಮಾತನಾಡಿ, ಸಂಸ್ಥೆಯು ಬೆಳೆದು ಬಂದ ದಾರಿಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು. ಶಾಖೆಯ ಗುಮಾಸ್ತೆ ಅಕ್ಷತಾ ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಶೇಖರ್ ಸ್ವಾಗತಿಸಿದರು. ಸೇವಪ್ರತಿನಿಧಿ ಶೋಭಾ ಸೀತಾರಾಮ ಕಾರ್ಯಕ್ರಮ ನಿರೂಪಿಸಿದರು. ಮದ್ದಡ್ಕ ಶಾಖೆಯ ಶಾಖಾ ವ್ಯವಸ್ಥಾಪಕ ಪವನ್ ಕುಮಾರ್ ವಂದಿಸಿದರು. ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗ, ಮದ್ದಡ್ಕ ಮತ್ತು ವೇಣೂರು ವಲಯದ ಸ್ವ ಸಹಾಯ ತಂಡಗಳ ಮೇಲ್ವಿಚಾರಕಿ ಸುಲೋಚನಾ, ಮದ್ದಡ್ಕ ಪಂಚಾಯತ್ ಸದಸ್ಯೆ ಆನಂದಿ, ಯೂನಿಯನ್ ಬ್ಯಾಂಕಿನ ವ್ಯವಸ್ಥಾಪಕಿ ರಾಧಾ, ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುವೆಟ್ಟು ಶಾಖೆಯ ಗುಮಾಸ್ತೆ ಹರಿಣಿ ಪ್ರಭು, ಜೇನು ಮತ್ತು ರಬ್ಬರ್ ವಿವಿಧೋದ್ದೇಶ ಸಹಕಾರಿ ಸಂಘದ ಮದ್ದಡ್ಕ ಶಾಖೆಯ ಪುಷ್ಪಲತಾ ಹಾಗೂ ಠೇವಣಿದಾರರಾದ ವಲೇರಿಯನ್ ಪಾಯಸ್, ವಿಮಲ ಹೇರಜೆ, ಯಶೋಧರ, ರೇಖಾ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

